ಸಿಜೆಐ ಡಿ.ವೈ.ಚಂದ್ರಚೂಢ (CII Cahndra chood) ಅವರ ಹೇಳಿಕೆ ಮತ್ತೆ ವಿರೋಧ ಪಕ್ಷಗಳ ಟೀಕೆಗೆ ಆಹಾರವಾಗಿದೆ. ಅಯೋಧ್ಯೆಯ ಮಂದಿರ-ಮಸೀದಿ ವಿವಾದಕ್ಕೆ ಪರಿಹಾರ ನೀಡುವಂತೆ ನಾನು ದೇವರ ಮುಂದೆ ಕುಳಿತಿದ್ದೆ ಎಂದು ಸಿಜೆಐ ಚಂದ್ರಚೂಢ ಹೇಳಿರೋದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರು ಅವರು, ವಿವಾದವನ್ನು ಹೇಗೆ ಪರಿಹರಿಸುವುದು ಎಂದು ಗೊತ್ತಾಗಲಿಲ್ಲ. ಹೀಗಾಗಿ ದೇವರ ಮುಂದೆ ಕುಳಿತು, ಪ್ರಾರ್ಥನೆ ಮಾಡಿದೆ ಎಂದು ಹೇಳಿದ್ದಾರೆ. ಜಡ್ಜ್ ಗಳ ಮುಂದೆ ವಿವಾದ ಬಗೆಹರಿಸಲು ಕೇಸ್ ಗಳು ಬರುತ್ತಾವೆ.ಆದರೇ, ಕೆಲವೊಮ್ಮೆ ಪರಿಹಾರವನ್ನು ಒದಗಿಸಲಾಗಲ್ಲ ಇದೇ ರೀತಿಯಾಗಿ ಅಯೋಧ್ಯೆಯ ಮಂದಿರ-ಮಸೀದಿ ವಿವಾದದ ಕೇಸ್ ವಿಚಾರಣೆ ವೇಳೆ ಆಗಿತ್ತು 20.
ಆದ್ರೆ ದೇವರಲ್ಲಿ ನಂಬಿಕೆ ಇರುವವರಿಗೆ ದೇವರೇ ದಾರಿ ತೋರಿಸುತ್ತಾರೆ. ಒಂದು ವೇಳೆ ನಿಮಗೆ ದೇವರಲ್ಲಿ ನಂಬಿಕೆ ಇದ್ದರೇ, ದೇವರೇ ದಾರಿ ತೋರಿಸುತ್ತೆ ಎಂದು ಚಂದ್ರಚೂಢ ಹೇಳಿದ್ದಾರೆ.2019ರ ನವಂಬರ್ 9 ರಂದು ಅಂತಿಮ ತೀರ್ಪು ನೀಡಿದ್ದ ಐವರು ನ್ಯಾಯಮೂರ್ತಿಗಳಲ್ಲಿ ಡಿ.ವೈ.ಚಂದ್ರಚೂಢ ಕೂಡ ಒಬ್ಬರು.
ಇನ್ನು ಸದ್ಯದಲ್ಲೇ ಸುಪ್ರೀಂಕೋರ್ಟ್ ಸಿಜೆಐ ಹುದ್ದೆಯಿಂದ ನಿವೃತ್ತರಾಗಲಿರುವ ಡಿ.ವೈ.ಚಂದ್ರಚೂಢಅವರ ಹೇಳಿಕೆಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು,ವಿವಾದಗಳನ್ನು ಕಾನೂನು, ಸಂವಿಧಾನದ ಪ್ರಕಾರ ಇತ್ಯರ್ಥಪಡಿಸಬೇಕೇ ಹೊರತು ದೇವರ ಮುಂದೆ ಪ್ರಾರ್ಥನೆಯಿಂದಲ್ಲ ಎಂದು ಟೀಕಿಸಿವೆ.