ಪಂಜಾಬ್ ಕಿಂಗ್ಸ್ (punjub kings) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 4 ವಿಕೆಟ್‌ಗಳಿಂದ ಭರ್ಜರಿ ಗೆಲವು ಸಾಧಿಸಿದೆ. ಕೊಹ್ಲಿ 78 ರನ್ (Virat Kohli) ಮತ್ತು ಕೊನೆಯ ಓವರ್ ನಲ್ಲಿ ದಿನೇಶ್ ಕಾರ್ತಿಕ್ (Dinesh karthik) ಅಮೋಘ ಆಟದಿಂದ ಆರ್ಸಿಬಿ ಗೆಲುವು ಸಾಧ್ಯವಾಗಿದೆ. ಡೆತ್ ಓವರ್ ನಲ್ಲಿ ಬೌಲರ್‌ಗಳ (Bowlers)ಯಡವಟ್ಟಿನಿಂದ ಪಂಜಾಬ್ ಪಂದ್ಯವನ್ನು ಕೈಚೆಲ್ಲಿದೆ..
ಮೊದಲ ಓವರ್ ನಲ್ಲಿ ಸ್ಲಿಪ್‌ನಲ್ಲಿ ಜಾನಿ ಬೈರ್‌ಸ್ಟೋವ್ ಕ್ಯಾಚ್ ಕೈಬಿಟ್ಟ ನಂತರ ಕೊಹ್ಲಿಗೆ (Kohli) ಜೀವದಾನ ಸಿಕ್ಕಿತ್ತು. ನಂತರ ಹಿಂತಿರುಗಿ ನೋಡದ ಕೊಹ್ಲಿ ಪಂಜಾಬ್ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ರು.. ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ 77 ರನ್ (77 of 49 balls) ಗಳಿಸಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲು ಬೇಕಾದ ಅಡಿಪಾಯ ಹಾಕಿಕೊಟ್ಟರು. ನಿರ್ಣಾಯಕ ಓವರ್ ನಲ್ಲಿ ದಿನೇಶ್ ಕಾರ್ತಿಕ್(Dinesh karthik & mahipal ) ಮತ್ತು ಮಹಿಪಾಲ್ ಲೊಮ್ರೋರ್ ಗೆಲುವಿನೊಂದಿಗೆ ಮ್ಯಾಚ್ ಫಿನಿಷ್ ಮಾಡಿದ್ರು .
ಕಳೆದ ಶುಕ್ರವಾರ ಟೂರ್ನಮೆಂಟ್‌ನ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai super kings ) ವಿರುದ್ಧ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ (Royal challengers) ಈ ಬಾರಿಯ ಸೀಸನ್ ನ ಸೋಲಿನ ಮೂಲಕ ಆರಂಭ ಮಾಡಿತ್ತು. ಇದು ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟುಮಾಡಿತ್ತು. ಆದ್ರೆ ಎರಡನೇ ಪಂದ್ಯವನ್ನು ರೋಚಕವಾಗಿ ಗೆಲ್ಲುವ ಮೂಲಕ RCB ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.