ಅಮೇಕಾದ ನೂತನ ಅಧ್ಯಕ್ಷೀರಾಗಿ ಡೊನಾಲ್ಡ್ ಟ್ರೂಪ್ ಆಯ್ಕೆಯಾದ ಕೆಲವೇ ದಿನಗಳ ಬಳಿಕ ಅಮೆರಿಕಾ ಕೈಗೊಂಡ ಪರಸ್ಪರ ಸುಂಕ ಹೇರುವ ನೀತಿ ವಿಶ್ವದ ಆರ್ಥಿಕತೆಯನ್ನು ಒಮ್ಮೆಲೆ ಅಲುಗಾಡಿಸಿದೆ. ಈ ಮಧ್ಯೆ ಟ್ರಂಪ್ ಚೀನಾದ ಆಮದುಗಳ ಮೇಲೆ ಶೇ.245 ವಿಧಿಸಿ ಆದೇಶಿಸಿದ್ದು ಚೀನಾ ಸಂಕಷ್ಟಕ್ಕೆ ಸಿಲುಕಿದೆ.

ಈ ಬೆಳವಣಿಗೆಯ ಬಳಿಕ ಚೀನಾ ಹಾಗೂ ಅಮೆರಿಕಾ ನಡುವಿನ ವ್ಯಾಪಾರ ಸಂಬಂಧದ ತೆರಿಗೆ ಯುದ್ಧ ಇನ್ನಷ್ಟು ಜಟಿಲವಾಗಿದೆ. ಒಂದೆಡೆ ಅಮೆರಿಕ ಸುಂಕ ಹೆಚ್ಚಳ ಮುಂದುವರೆಸಿದರೆ ತಾನು ಹಿಂದೆ ಸರಿಯುವುದಿಲ್ಲ ಎಂದಿದ್ದ ಚೀನಾ ಈಗ ಆತಂಕಗೊಂಡಿದೆ.

ಹೀಗಾಗಿ ಸದ್ಯ ಚೀನಾ ತಮ್ಮನ್ನು ಭೇಟಿ ಮಾಡಲು ಬಯಸುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇತ್ತೀಚೆಗೆ ಜಪಾನ್,ಮೆಕ್ಸಿಕೊ ವ್ಯಾಪಾರ ಪ್ರತಿನಿಧಿಗಳೊಂದಿಗೆ ಚರ್ಚೆಗಳು ಫಲಪ್ರದವಾಗಿದ್ದು,ಈ ಕಾರಣಕ್ಕೆ ಚೀನಾ ಕೂಡ ಇದೇ ರೀತಿ ತಮ್ಮೊಂದಿಗೆ ಮಾತುಕತೆ ನಡೆಸಲು ಬಯಸಿದೆ ಎಂದು ಟ್ರಂಪ್ ಹೇಳಿದ್ದಾರೆ.ಆದರೆ ಇದಕ್ಕೆ ಡ್ರ್ಯಾಗನ್ ರಾಷ್ಟ್ರ ಚೀನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.