
Diethylene glycol (DEG), Ethylene glycol ಎಂಬ ರಾಸಾಯನಿಕ ಅನುಮತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವ ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 11 ಮಕ್ಕಳ ಸಾವಿಗೆ ಕಾರಣವಾಗಿದೆ.
ಈ ಸಿರಪ್‌ಗಳು ದೇಶದಲ್ಲಿ ತಯಾರಾಗುವುದ ಜೊತೆಗೆ ದೇಶದಲ್ಲಿ ಮಾತ್ರ ಮಾರಾಟವಾಗದೆ ಹಲವು ದೇಶಗಳಿಗೂ ರವಾನಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲು ಈ ಸಿರಪ್ ಸೇವೆನೆಯಿಂದ ಮಕ್ಕಳು ಸಾವನ್ನಪ್ಪಿರುವುದರ ಬಗ್ಗೆ ವರದಗಳಾಗಿವೆ.


ಈ ಹಿನ್ನೆಯಲ್ಲಿ ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್ ಸೇವನೆ ಕಾರಣವೇ ಎಂದು ತಿಳಿಯಲು ತನಿಖೆ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇನ್ನೂ ಇದೇ ʼcoldrif’ ಸಿರಪ್ ಸೇವಿಸಿ ಮಕ್ಕಳು ಸಾವಿಗೆ ಕಾರಣವಾಗಿದೆ ಎಂದು ತಿಳಿದ ಕೆಲವು ರಾಜ್ಯಗಳಲ್ಲಿ ಈ ಕೆಮ್ಮಿನ ಸಿರಪ್ ಮಾರಾಟವನ್ನು ನಿಷೇಧಿಸಿದೆ ಅದರಲ್ಲೂ ತಮಿಳುನಾಡು, ಕೇರಳ ರಾಜ್ಯಗಳ ಸರ್ಕಾರಗಳು ಈ ಆದೇಶವನ್ನು ಹೊರಡಿಸಿದೆ.

DEG ಎಂಬುದು ವಿಷಕಾರಿಯಾದ ದ್ರಾವಣವಾಗಿದ್ದು, ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಅನೇಕ ದೇಶಗಳಲ್ಲಿ ಸಂಭವಿಸದ ಸಾವುಗಳಿಗೆ ಈ ದ್ರಾವಣ ಕಾರಣ ಎನ್ನಲಾಗುತ್ತಿದೆ. ಮಧ್ಯಪ್ರದೇಶ ಛಾಂದ್ವಾರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ. 9 ಶಿಶುಗಳು ಮೃತಪಟ್ಟಿದ್ದವು, ಈ ಸಾವುಗಳಿಗೆ ಕೆಮ್ಮಿನ ಸಿರಪ್ ಸೇವನೆಯೇ ಪ್ರಮುಖ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದ್ದಂತೆ ಸಚಿವಾಲಯ ತನಿಖೆ ನಡೆಸಲು ಮುಂದಾಗಿದೆ.

ಇಲ್ಲಿ ಮತ್ತೊಂದು ಗಂಭೀರ ವಿಚಾರವನ್ನು ಗಮನಿಸಬೇಕಿದೆ, ನರೇಂದ್ರ ಮೋದಿ ಬಿಜೆಪಿ ಪಕ್ಷದ ಋಣವನ್ನು ತೀರಿಸಲು ಮತ್ತು ಕೇವಲ ಹಣದ ಹೊಳೆಯನ್ನು ಹರಿಸಲು ಸಲುವಾಗಿ ಅಕ್ರಮ ದಾರಿಯನ್ನು ಕಂಡುಕೊಂಡಿತು ಅದುವೇ ( ಚುನಾವಣಾ ಬಾಂಡ್ ) Electrol Bond ನನ್ನು ಜಾರಿಗೆ ತರುವ ಮೂಲಕ ದೊಡ್ಡ ದೊಡ್ಡ ಕಂಪನಿಗಳು ಬಿಜೆಪಿ ಪಕ್ಷಕ್ಕೆ ದೇಣಿಗೆ ರೂಪದಲ್ಲಿ ನೀಡುವ ಹಣವನ್ನು ಕೇವಲ ಚುನಾವಣೆಗಳಿಗೆ ಮತ್ತು ಪ್ರಚಾರಕ್ಕೆ ಬಳಸುವ ದುರುದ್ದೇಶದಿಂದಲೇ ಬಿಜೆಪಿ 2018 ರಲ್ಲಿ ʼಚುನಾವಣಾ ಬಂಡ್ʼ ಜಾರಿಗೆ ತಂದಿತ್ತು.

ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಸುಪ್ರೀಂಕೋರ್ಟ್ ನ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಾಮೂರ್ತಿ ಡಿ.ವೈ ಚಂದ್ರ ಚೂಡ್ ಅವರ ನೇತೃತ್ವದ ಪಂಚ ಸದಸ್ಯರ ಪೀಠವು ಚುನಾವಣಾ ಬಾಂಡ್ ಅಕ್ರಮ ಮಾತ್ರವಲ್ಲ ಭ್ರಷ್ಟಾಚಾರಕ್ಕೂ ಕೂಡ ದಾರಿ ಮಾಡಿಕೊಟ್ಟಿದೆ. ಹಾಗೂ ಯಾಕೆ ಇದು ಅಕ್ರಮವೆಂದು ತಿಳಿಸಲು ಪ್ರಮುಖ ಕಾರಣಗಳು ನೀಡಿದೆ, ಮುಖ್ಯವಾಗಿ ಯಾವ ಸಂಸ್ಥೆಗಳು ಎಷ್ಟು ಹಣವನ್ನು ನೀಡಿದೆ ಎಂಬ ಮಹಾತಿಯನ್ನ ಬಹಿರಂಗ ಪಡೆಸದಂತೆ ಕಾನೂನನ್ನು ರಚಿಸಿತ್ತು , ಹಾಗೂ ಬಾಂಡ್‌ಗಳು ಪಡೆದವರು
ವರ್ಗಾವಣಿ ಬಹುದಿತ್ತು. ಈ ಕಾರಣಗಳಿಂದಾಗಿ (Supreme Court) ಸುಪ್ರೀಂ ಕೋಟ್ ಚುನಾವಣಾ ಬಾಂಡ್ ನನ್ನು ರದ್ದು ಪಡಿಸಿತು.
ಬಿಜೆಪಿ ಪಕ್ಷಕ್ಕೆ ಹೆಚ್ಚಿನ ದೇಣಿಗೆ ಸಂಗ್ರಹವಾಗಿತ್ತಲ್ಲದೆ ಲಾಭದಲ್ಲಿರುವ ಸಂಸ್ಥೆಗಳು/ ಕಾರ್ಖಾನೆಗಳು ಮಾತ್ರವಲ್ಲ ಆರ್ಥಿಕವಾಗಿ ನಷ್ಟದಲ್ಲಿರುವ ಇವುಗಳು ಕೂಡ ಪಕ್ಷಕ್ಕೆ ದೇಣಿಗೆ ನೀಡಿತ್ತು.
ಇನ್ನೂ ಚುನಾವಣಾ ಬಂಡ್ ಪಡೆದು ದೇಣಿಗೆ ನೀಡಿದ ಸಂಸ್ಥೆಗಳಿಗೆ Black List (ಬ್ಲಾಕ್ ಲಿಸ್ಟ್ ) ಆದ ಸಂಸ್ಥೆಳು, ಕಾರ್ಖಾನೆಗಳು ಅದರಲ್ಲೂ
ಔಷಧಿಗಳನ್ನು ತಯಾರಿಸುವ ಸಂಸ್ಥೆಗಳು ಬಿಜೆಪಿಗೆ ದೇಣಿಗೆ ನೀಡಿತ್ತು. ಈಗ ಬ್ಲಾಕ್ ಲಿಸ್ಟ್ ಆದ ಕಂಪನಿಗಳ ವಿರುದ್ಧ ಯಾವ ಕ್ರಮವನ್ನು
ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ಅವುಗಳ ವಿರುದ್ಧ ಕ್ರಮವನ್ನು ಜರುಗಿಸುತ್ತದೆ ಎಂದು ಕಾದು ನೋಡ ಬೇಕಿದೆ.