ಭಾರತದಿಂದ ಅಧಿಕೃತವಾಗಿ ಆಸ್ಕರ್ ಪ್ರವೇಶಿಸಿದ ಏಕೈಕ ಚಿತ್ರ ಗುಜರಾತ್ ನ ಚೆಲ್ಲೋ ಶೋ ಚಿತ್ರದ ಬಾಲನಟ ರಾಹುಲ್ ಕೊಲಿ (17) ಅನಾರೋಗ್ಯದ ಕಾರಣ ಮೃತಪಟ್ಟಿದ್ದಾರೆ.
ಗುಜರಾತ್ ನ ಜಾಮ್ ನಗರದ ಹಾಪಾ ಟೌನ್ ನಿವಾಸಿ ರಾಹುಲ್ ಕೊಲಿ ಚೆಲ್ಲೋ ಶೋ ಚಿತ್ರ ಬಿಡುಗಡೆಗೆ ಕೆಲವೇ ದಿನಗಳಿರುವಾಗ ಲೂಕೆಮೇನಿಯಾ ಕಾಯಿಲೆಯಿಂದ ಮೃತಪಟ್ಟಿದ್ದಾನೆ.
ಅಹಮದಾಬಾದ್ ನ ಕ್ಯಾನ್ಸರ್ ಅಸ್ಪತ್ರೆಯಲ್ಲಿ ಕಳೆದ 4 ತಿಂಗಳಿನಿಂದ ದಾಖಲಾಗಿದ್ದ ರಾಹುಲ್ ಅಕ್ಟೋಬರ್ ೨ರಂದು ಇಹಲೋಕ ತ್ಯಜಿಸಿದ್ದಾನೆ ಎಂದು ತಂದೆ ರಾಮು ಕೊಲಿ ತಿಳಿಸಿದ್ದಾರೆ.
ಚೆಲ್ಲೋ ಶೋ ಚಿತ್ರದ ಪ್ರಮುಖ ಪಾತ್ರ ನಿಭಾಯಿಸಿದ್ದ ಭವಿನ್ ರಾಬರಿ ಅವರ ಸ್ನೇಹಿತನಾಗಿ ರಾಹುಲ್ ಕಾಣಿಸಿಕೊಂಡಿದ್ದ.
ಚಿತ್ರ ಬಿಡುಗಡೆಗೆ ರಾಹುಲ್ ಕಾದಿದ್ದ. ತೆರೆಮೇಲೆ ಈ ಚಿತ್ರ ಒಂದು ಬಾರಿ ನೋಡಬೇಕು ಎಂದು ಹಾತೊರೆಯುತ್ತಿದ್ದ. ಆದರೆ ಚಿತ್ರ ಬಿಡುಗಡೆಗೆ ಮುನ್ನ ಆತ ಇಹಲೋಕ ತ್ಯಜಿಸಿದ್ದಾನೆ. ಆತ ಕೊನೆಯ ಬಾರಿಗೆ ನೋಡಿದ್ದು ಚಿತ್ರದ ಟ್ರೇಲರ್ ಮಾತ್ರ ಎಂದು ತಂದೆ ಹೇಳಿದ್ದಾರೆ.