• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಕುಲದೀಪ್‌ ದಾಳಿಗೆ ಹರಿಣ ಕಂಗಾಲು; ಭಾರತಕ್ಕೆ 7 ವಿಕೆಟ್‌ ಜಯ, ಸರಣಿ ವಶ

Any Mind by Any Mind
October 11, 2022
in ಕ್ರೀಡೆ
0
ಕುಲದೀಪ್‌ ದಾಳಿಗೆ ಹರಿಣ ಕಂಗಾಲು; ಭಾರತಕ್ಕೆ 7 ವಿಕೆಟ್‌ ಜಯ, ಸರಣಿ ವಶ
Share on WhatsAppShare on FacebookShare on Telegram

ಸ್ಪಿನ್ನರ್‌ ಕುಲದೀಪ್‌ ಯಾದವ್‌ ಸೇರಿದಂತೆ ಭಾರತದ ಸಂಘಟಿತ ದಾಳಿ ನೆರವಿನಿಂದ ಭಾರತ ತಂಡ 7 ವಿಕೆಟ್‌ ಜಯಭೇರಿ ಬಾರಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ.

ADVERTISEMENT

ದೆಹಲಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ 27.1 ಓವರ್‌ ಗಳಲ್ಲಿ 99 ರನ್‌ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ಸುಲಭ ಗುರಿ ಬೆಂಬತ್ತಿದ ಭಾರತ 19.1 ಓವರ್‌ ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು.

ಸುಲಭ ಗುರಿ ಬೆಂಬತ್ತಿದ ಭಾರತ ಆರಂಭದಲ್ಲೇ ನಾಯಕ ಶಿಖರ್‌ ಧವನ್‌ (8) ಮತ್ತು ಇಶಾನ್‌ ಕಿಶನ್‌ (10) ಅವರನ್ನು ಬೇಗನೇ ಕಳೆದುಕೊಂಡರೂ ಶುಭಮನ್‌ ಗಿಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರ ಭರ್ಜರಿ ಬ್ಯಾಟಿಂಗ್‌ ನಿಂದ ಜಯಭೇರಿ ಬಾರಿಸಿತು.

ಶುಭಮನ್‌ ಗಿಲ್‌ 49 ರನ್‌ ಗಳಿಸಿದ್ದಾಗ ಔಟಾಗಿ 1 ರನ್‌ ನಿಂದ ಅರ್ಧಶತಕ ವಂಚಿತರಾದರು. ಆದರೆ ಶ್ರೇಯಸ್‌ ಅಯ್ಯರ್‌ 28 ರನ್‌ ಬಾರಿಸಿ ಅಜೇಯರಾಗಿ ಉಳಿದರು.

ಕುಲದೀಪ್‌ ದಾಳಿಗೆ ಕುಸಿದ ದ.ಆಫ್ರಿಕಾ

ಭಾರತ ತಂಡಕ್ಕೆ ದೀರ್ಘ ಸಮಯದ ನಂತರ ಮರಳಿದ ವಾಷಿಂಗ್ಟನ್‌ ಸುಂದರ್‌ ಮತ್ತು ಮೊಹಮದ್‌ ಸಿರಾಜ್‌ ಮಾರಕ ದಾಳಿ ನಡೆಸಿ ದಕ್ಷಿಣ ಆಫ್ರಿಕಾಕ್ಕೆ ಚೇತರಿಸಿಕೊಳ್ಳಲಾಗದ ಆರಂಭಿಕ ಆಘಾತ ನೀಡಿದರು.

ದಕ್ಷಿಣ ಆಫ್ರಿಕಾ ಆರಂಭದಿಂದಲೇ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ ಕಳಪೆ ಮೊತ್ತಕ್ಕೆ ಆಲೌಟಾಯಿತು. ಮಧ್ಯಮ ಕ್ರಮಾಂಕದಲ್ಲಿ ಹೆಂಡ್ರಿಕ್ಸ್‌ ಕ್ಲಾಸೆನ್‌ 42 ಎಸೆತಗಳಲ್ಲಿ 4 ಬೌಂಡರಿ ಸೇರಿದ 34 ರನ್‌ ಗಳಿಸಿದರೆ, ಮಾರ್ಕೊ ಜಾನ್ಸನ್‌ (14) ಹಾಗೂ ಆರಂಭಿಕ ಜೆನೆಮನ್‌ ಮಲಾನ್‌ (14) ಮಾತ್ರ ಎರಡಂಕಿಯ ಮೊತ್ತ ದಾಟಿದರು.

ಭಾರತದ ಪರ ಕುಲದೀಪ್‌ ಯಾದವ್‌ 4 ವಿಕೆಟ್‌ ಪಡೆದರೆ, ಮೊಹಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ಮತ್ತು ಶಹಬಾಜ್‌ ಅಹ್ಮದ್‌ ತಲಾ 2 ವಿಕೆಟ್‌ ಗಳಿಸಿದರು.

Previous Post

40 ವರ್ಷದಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿರುವ ಮಾರ್ಗೊನಹಳ್ಳಿ ನಿವಾಸಿಗಳು| #pratidhvaninews

Next Post

ಆಸ್ಕರ್‌ ಪ್ರವೇಶಿಸಿದ ಚೆಲ್ಲೋ ಶೋ ಬಾಲನಟ ಕ್ಯಾನ್ಸರ್‌ ಗೆ ಬಲಿ!

Related Posts

ವಿಶ್ವಕಪ್‌ನಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ: ಪಾಕ್ ವಿರುದ್ಧ ಕಣಕ್ಕಿಳಿಯಲಿದೆ ಟೀಂ ಇಂಡಿಯಾ
ಕ್ರೀಡೆ

ವಿಶ್ವಕಪ್‌ನಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ: ಪಾಕ್ ವಿರುದ್ಧ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

by ಪ್ರತಿಧ್ವನಿ
August 19, 2026
0

ಆಗಸ್ಟ್ 19: ಹಾಕಿ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಬುಧವಾರ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ನೆದರ್‌ಲ್ಯಾಂಡ್ಸ್‌ನ ಐತಿಹಾಸಿಕ ವೆಗ್ನರ್ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಬರೋಬ್ಬರಿ...

Read moreDetails
2027ರ ಏಕದಿನ ವಿಶ್ವಕಪ್; 51 ದಿನಗಳ ಕ್ರಿಕೆಟ್ ಹಬ್ಬಕ್ಕೆ ದಿನಾಂಕ ಫಿಕ್ಸ್!

2027ರ ಏಕದಿನ ವಿಶ್ವಕಪ್; 51 ದಿನಗಳ ಕ್ರಿಕೆಟ್ ಹಬ್ಬಕ್ಕೆ ದಿನಾಂಕ ಫಿಕ್ಸ್!

August 17, 2026
ಗಂಗೂಲಿ ಕುಟುಂಬಕ್ಕೆ ಬೆದರಿಕೆ ಹಾಕಿದವರು ಯಾರು? ಪತ್ರದ ಜಾಡು ಹಿಡಿದ ಪೊಲೀಸರು

ಗಂಗೂಲಿ ಕುಟುಂಬಕ್ಕೆ ಬೆದರಿಕೆ ಹಾಕಿದವರು ಯಾರು? ಪತ್ರದ ಜಾಡು ಹಿಡಿದ ಪೊಲೀಸರು

August 11, 2026
ಸೆಪ್ಟೆಂಬರ್‌ನಲ್ಲಿ ಭಾರತ–ಪಾಕ್‌ ಕ್ರಿಕೆಟ್‌ ಕದನ: 2 ಬಾರಿ ಮುಖಾಮುಖಿಯಾಗುವ ಸಾಧ್ಯತೆ!

ಸೆಪ್ಟೆಂಬರ್‌ನಲ್ಲಿ ಭಾರತ–ಪಾಕ್‌ ಕ್ರಿಕೆಟ್‌ ಕದನ: 2 ಬಾರಿ ಮುಖಾಮುಖಿಯಾಗುವ ಸಾಧ್ಯತೆ!

August 10, 2026
ಅಪ್ಪನ ಕನಸಿಗೆ ಚಿನ್ನದ ಕಿರೀಟ..! ಕಾಮನ್‌ವೆಲ್ತ್‌ನಲ್ಲಿ ಅಸ್ಮಿತಾ ಐತಿಹಾಸಿಕ ಸಾಧನೆ

ಅಪ್ಪನ ಕನಸಿಗೆ ಚಿನ್ನದ ಕಿರೀಟ..! ಕಾಮನ್‌ವೆಲ್ತ್‌ನಲ್ಲಿ ಅಸ್ಮಿತಾ ಐತಿಹಾಸಿಕ ಸಾಧನೆ

August 1, 2026
Next Post
ಆಸ್ಕರ್‌ ಪ್ರವೇಶಿಸಿದ ಚೆಲ್ಲೋ ಶೋ ಬಾಲನಟ ಕ್ಯಾನ್ಸರ್‌ ಗೆ ಬಲಿ!

ಆಸ್ಕರ್‌ ಪ್ರವೇಶಿಸಿದ ಚೆಲ್ಲೋ ಶೋ ಬಾಲನಟ ಕ್ಯಾನ್ಸರ್‌ ಗೆ ಬಲಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada