
ಬೆಂಗಳೂರು:ದೆಹಲಿಯಲ್ಲಿ ಶ್ರದ್ಧಾ ವಾಕರ್ ಎನ್ನುವ ಹುಡುಗಿಯನ್ನು ಕೊಂದು ಆಕೆಯನ್ನು 36 ಪೀಸ್ಗಳನ್ನಾಗಿ ಮಾಡಿ ಮೆಹ್ರೌಲಿ ಅರಣ್ಯದಲ್ಲಿ ಒಂದೊಂದೆ ಪೀಸ್ಅನ್ನು ಎಸೆದ ದಾರುಣ ಘಟನೆ 2022ರಲ್ಲಿ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು.ಈಗ ಬೆಂಗಳೂರಿನಲ್ಲಿಯೂ ಅಂಥದ್ದೇ ಘಟನೆ ನಡೆದಿದೆ.

ಬೆಂಗಳೂರಿನ ಮಲ್ಲೇಶ್ವರದ ವೈಯಾಲಿಕಾವಲ್ (Vayalikaval of Malleswara)ಠಾಣಾವ್ಯಾಪ್ತಿಯ ವೀರಣ್ಣ ಆಶ್ರಮ ಬಳಿ ಘಟನೆ ನಡೆದಿದೆ. 25 ರಿಂದ 26 ವರ್ಷ ವಯಸ್ಸಿನ ಯುವತಿಯನ್ನು ಕೊಲೆ ಮಾಡಿದ್ದು, ಆಕೆಯ ದೇಹವನ್ನು 30ಕ್ಕೂ (pieces)ಅಧಿಕ ಪೀಸ್ ಮಾಡಿ (fridge)ಫ್ರಿಜ್ನಲ್ಲಿ ಇಡಲಾಗಿದೆ 10 ರಿಂದ 15 ದಿನಗಳ ಹಿಂದೆ ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಫ್ರೀಜ್ ಒಳಗೆ ಇಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಸ್ಥಳಕ್ಕೆ ವೈಯಾಲಿಕಾವಲ್ ಹಾಗೂ ಶೇಷಾದ್ರಿಪುರಂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.ವೀರಣ್ಣ ಆಶ್ರಮ ಬಳಿಯ ಮೂರು ಅಂತಸ್ತಿನ ಮನೆಯೊಂದರ ಮೊದಲನೇ ಫ್ಲೋರ್ನಲ್ಲಿ ಈ ಘಟನೆ ನಡೆದಿದೆ. ಪ್ರೀತಿ ವಿಚಾರಕ್ಕೆ ಕೊಲೆ ನಡೆದಿರಬಹುದು ಎನ್ನುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.