ಸ್ಮಶಾನ ಕಾರ್ಮಿಕರನ್ನು ಕೋವಿಡ್ ಯೋಧರೆಂದು ಪರಿಗಣಿಸಬೇಕೆಂದು ಒತ್ತಾಯಿಸಿದ್ದ ಸಾಮಾಜಿಕ ಹೋರಾಟಗಾರ, ಚಲನಚಿತ್ರ ನಟ ಚೇತನ್, ಈ ಕಾರ್ಮಿಕರ ತಕ್ಷಣದ ಹಾಗೂ ದೀರ್ಘಕಾಲದ ಬೇಡಿಕೆಗಳನ್ನು ಅನುಷ್ಠಾನಗೊಳಿಸುವಂತೆ ಕರ್ನಾಟಕ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಾದ್ಯಂತ ಸ್ಮಶಾನ ಕಾರ್ಮಿಕರು ಈ ಘೋರ ಬಿಕ್ಕಟ್ಟಿನ ಸಂಧರ್ಭದಲ್ಲಿ ನಮ್ಮ ರಾಜ್ಯದ ಜನರಿಗೆ ದಣಿವರಿಯದೆ ಮತ್ತು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಇವರು ತಲೆಮಾರುಗಳಿಂದ ನಮ್ಮ ಸಮಾಜದ ಸಾಮಾಜಿಕ ಹಾಗೂ ಆರ್ಥಿಕ ಅಂಚಿನಲ್ಲಿರುವ ಸದಸ್ಯರು. ಈ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂಧರ್ಭದಲ್ಲಿ ಅಸಾಧರಣ ವೈದ್ಯಕೀಯ ಅಪಾಯಗಳನ್ನು ಎದುರಿಸುತ್ತಿದ್ದಾರೆ. ಅದಾಗ್ಯೂ, ಅವರ ತಕ್ಷಣದ ಮತ್ತು ದೀರ್ಘಕಾಲದ ಅಗತ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರಗಳು ಸತತವಾಗಿ ನಿರ್ಲಕ್ಷಿಸಿವೆ ಎಂದು ಚೇತನ್ ಪತ್ರದಲ್ಲಿ ಹೇಳಿದ್ದಾರೆ.
ಶವಾಗಾರ ಕಾರ್ಮಿಕರಿಗೆ ತಕ್ಷಣದ ಅಗತ್ಯಗಳನ್ನು ಪೂರೈಸಬೇಕು ಹಾಗೂ ಅವರಿಗೆ ಶಾಶ್ವತ ಪರಿಹಾರಗಳು ನೀಡಬೇಕು ಎಂದು ಚೇತನ್ ಪತ್ರದಲ್ಲಿ ಕೇಳಿಕೊಂಡಿದ್ದಾರೆ.