2025-26 ನೇ ಸಾಲಿನ ರಾಜ್ಯ ಬಜೆಟ್ (Karnataka budget 2025-26) ಮಂಡನೆಯಾದ ಹಿನ್ನಲೆ, ಟೀಕೆ ಟಿಪ್ಪಣಿ ಜೊತೆಗೆ ರಾಜಕೀಯ ಕಿತ್ತಾಟಗಳೂ ಸದ್ದು ಮಾಡುತ್ತಿವೆ. ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಮಂಡ್ಯ ಜಿಲ್ಲೆಯ ಕೃಷಿ ವಿವಿ ಗೆ (Mandya agricultural university) ಅನುದಾನ ಮೀಸಲಿಟ್ಟಿರುವ ವಿಚಾರ ರಾಜ್ಯ ಸಚಿವ ಮತ್ತು ಕೇಂದ್ರ ಸಚಿವರ ನಡುವಿನ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ.

ಹೌದು,ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ (HD Kumaraswamy) ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪ್ರತಿ ಹಂತದಲ್ಲೂ ಟಕ್ಕರ್ ಕೊಡ್ತಿದ್ದಾರೆ. ನಿನ್ನೆ (ಮಾ.೭) ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಮಂಡ್ಯ ಕೃಷಿ ವಿವಿಗೆ 25 ಕೋಟಿ ಅನುದಾನ ನೀಡಲಾಗಿದೆ. ಅಷ್ಟೇ ಅಲ್ಲದೇ ಮೈಶುಗರ್ ಕಾರ್ಖಾನೆ ಪುನಾರಂಭಕ್ಕೆ ಕಳೆದ ಬಜೆಟ್‌ನಲ್ಲಿಯೇ ಹಣ ಮೀಸಲು ಇಡಲಾಗಿದೆ.

ಹೀಗಾಗಿ ಮಂಡ್ಯಕ್ಕೆ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕೊಡುಗೆ ನೀಡಿರುವ ಹಿಂದೆ ಸಚಿವ ಚಲುವರಾಯಸ್ವಾಮಿ ಶ್ರಮ ವಹಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷ ಮಂಡ್ಯ ರೈತರ ಪರವಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಆ ಮೂಲಕ ತಮ್ಮ ಎದುರಾಳಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಚೆಲುವರಾಯಸ್ವಾಮಿ ಸೆಡ್ಡು ಹೊಡೆದಿದ್ದಾರೆ.










