ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ರು ಅಂತಿಮ ವರದಿಯನ್ನು ಕೋರ್ಟ್ಗೆ ಸಲ್ಲಿಸಿದ್ದಾರೆ. 24 ನೇ ಎಸಿಎಂಎಂ ಕೋರ್ಟ್ಗೆ ಆಗಮಿಸಿದ್ದ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‌ಪೆಕ್ಟರ್ ನಾಗೇಶ್ ಹಾಗು ACP ಚಂದನ್ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ CrPC ಸೆಕ್ಷನ್ 178 (9) ಅಡಿ ಹೆಚ್ಚುವರಿ ಜಾರ್ಜ್ಶೀಟ್ ಸಲ್ಲಿಕೆ ಮಾಡಲು ಪೊಲೀಸ್ರು ನಿರ್ಧಾರ ಮಾಡಿದ್ದಾರೆ.
ಚಾರ್ಜ್ಶೀಟ್ Final Report ಸಲ್ಲಿಕೆ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ. ದಯಾನಂದ್ ಮಾತನಾಡಿ, ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಕಂಪ್ಲೀಟ್ ಆಗಿದೆ. 17 ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಗಳನ್ನು ಕಲೆ ಹಾಕಿದ್ದು, ಅಂತಿಮ ವರದಿ ರೆಡಿಯಾಗಿದೆ. 3,991 ಪುಟಗಳನ್ನ ಚಾರ್ಜ್ಶೀಟ್ನಲ್ಲಿ ಎಲ್ಲವನ್ನೂ ಸೇರಿಸಲಾಗಿದೆ. 17 ಜನ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. FSL ಮತ್ತು CFSL ನಿಂದ ವರದಿಗಳು ಬಂದಿದೆ. CFSL ನಿಂದ ಒಂದಷ್ಟು ವರದಿ ಬರುವುದು ಬಾಕಿ ಇದೆ. ಸರ್ಕಾರಿ ಅಧಿಕಾರಿಗಳನ್ನೂ ಈ ಕೇಸ್ ನಲ್ಲಿ ಸಾಕ್ಷಿಗಳನ್ನಾಗಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ 231 ಸಾಕ್ಷಿದಾರರನ್ನ ಉಲ್ಲೇಖ ಮಾಡಲಾಗಿದೆ. CFSL ಹೈದರಾಬಾದ್ನಿಂದ ಎಲೆಕ್ಟ್ರಾನಿಕ್ ಡಿವೈಸ್ಗಳ ವರದಿ ಬಂದಿದೆ. ಇನ್ನೂ ಒಂದಷ್ಟು ವರದಿ ಬರಬೇಕಿದೆ. ಸಾಕಷ್ಟು ತಾಂತ್ರಿಕ ಸಾಕ್ಷಿಗಳು ದೊರೆತಿವೆ. ತನಿಖೆಯಲ್ಲಿ ಎಲ್ಲವನ್ನೂ ಸೇರಿಸಿಕೊಳ್ಳಲಾಗಿದೆ. ಉತ್ತಮವಾದ ರೀತಿಯಲ್ಲಿ ತನಿಖೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಬಗ್ಗೆ ಚರ್ಚೆ ಮಾಡಲಾಗುತ್ತೆ ಎಂದು ಬೆಂಗಳೂರು ಕಮೀಷನರ್ ದಯಾನಂದ್ ಮಾಹಿತಿ ನೀಡಿದ್ದಾರೆ.
ಕೊಲೆ ಕೇಸ್ನಲ್ಲಿ ಮೂವರು ಪ್ರತ್ಯಕ್ಷ ಸಾಕ್ಷಿದಾರರು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ನ 8 ಸಾಕ್ಷಿಗಳು, 27 ಜನರಿಂದ ಈಗಾಗಲೇ CrPC Section 164 ಅಡಿಯಲ್ಲಿ ಕೋರ್ಟ್ನಲ್ಲಿ ಮ್ಯಾಜಿಸ್ಟ್ರೇಟ್ ಎದುರು ಸಾಕ್ಷಿ ಹೇಳಿಕೆ ದಾಖಲಾಗಿದ್ದು, ಪೊಲೀಸರು ಸೆಕ್ಷನ್ 161 ಅಡಿಯಲ್ಲಿ 70 ಜನರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. 59 ಜನ ಪಂಚರ ಸಮಕ್ಷಮದಲ್ಲಿ ಮಹಜರು Spot Investigation ಮಾಡಲಾಗಿದೆ. 8 ಇತರೆ ಸರ್ಕಾರಿ ಅಧಿಕಾರಿಗಳನ್ನೂ ಸಾಕ್ಷಿದಾರರನ್ನಾಗಿ ಸೇರಿಸಲಾಗಿದೆ. 56 ಜನ ಪೊಲೀಸರು ಸೇರಿ 231 ಸಾಕ್ಷಿ ಕಲೆ ಹಾಕಲಾಗಿದೆ.
ಕೋರ್ಟ್ನಲ್ಲಿ ಶಿರಸ್ತೇದಾರ್ ರಜೆ ಇರುವ ಕಾರಣ ಇಂದು ಚಾರ್ಜ್ಶೀಟ್ ಪರಿಶೀಲನೆ ಮಾಡಲ್ಲ ಎನ್ನಲಾಗಿದ್ದು, ಶಿರಸ್ತೇದಾರ್ ಪರಿಶೀಲನೆ ನಡೆಸಿದ ಬಳಿಕ ಆರೋಪಿಗಳಿಗೆ ಚಾರ್ಜ್ಶೀಟ್ ಪ್ರತಿ ಹಸ್ತಾಂತರ ಮಾಡಲಿದ್ದಾರೆ. ಚಾರ್ಜ್ಶೀಟ್ Charge Sheet ಆರೋಪಿಗಳಿಗೆ ಸಿಕ್ಕ ಬಳಿಕ ವಿಚಾರಣೆಗೆ ಕೋರ್ಟ್ ನಿಗದಿ ಆಗಲಿದೆ. ಅತ್ತ ಚಾರ್ಜ್ಶೀಟ್ ಆಧಾರದಲ್ಲಿ ಆರೋಪಿಗಳು ಬೇಲ್ಗೆ ಅರ್ಜಿ ಹಾಕುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿದೆ. ಪೊಲೀಸರ ತನಿಖೆ ಹೆಚ್ಚು ಕಡಿಮೆ ಮುಕ್ತಾಯವಾಗಿದ್ದು, ಇನ್ಮುಂದೆ ಕೋರ್ಟ್ನಲ್ಲಿ ವಿಚಾರಣೆ ಆರಂಭ ಆಗಲಿದೆ.