೨೦೨೩ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಫುಲ್ ಆಕ್ಟಿವ್ ಆಗಿದ್ದಾರೆ. ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುವ ಮೊದಲೆ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಟಿಕೇಟ್ ಆಕಾಂಕ್ಷಿಗಳು ಕೆಲಸ ಆರಂಭಿಸಿದ್ದಾರೆ. ಅದೇ ರೀತಿ ಚೆನ್ನಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಕೂಡ ರಾಜಕೀಯ ಅಬ್ಬರ ಜೋರಾಗಿದೆ. ಸದ್ಯ ಚೆನ್ನಗಿರಿ ವಿಧಾನಸಭಾ ಕ್ಷೇತ್ರ ಬಿಜೆಪಿ ವಶದಲ್ಲಿದ್ದು, ಶಾಸಕರಾಗಿರುವ ಮಾಡಳ ವೀರೂಪಾಕ್ಷಪ್ಪನವರೇ ಮುಂಬರು ಚುನಾವಣೆಗು ಕೂಡ ಅಭ್ಯರ್ಥಿಯಾಗುವ ಸಾದ್ಯತೆ ಇದೆ. ಒಂದು ವೇಳೆ ಬದಲಾವಣೆಯಾದ್ರೆ ಅವರ ಪುತ್ರ ಮಾಡಳು ಮಲ್ಲಿಕಾರ್ಜುನರವರು ಅಭ್ಯರ್ಥಿಯಾಗಬಹುದು.

ಇತ್ತ ಕಳೆದ ಬಾರಿ ಕಾಂಗ್ರೇಸ್‌ನಿಂದ ಅಖಾಡಕ್ಕೆ ಇಳಿದಿದ್ದ ವಡ್ನಾಳು ರಾಜಣ್ಣನವರು ೨೫ ಸಾವಿರಕ್ಕೂ ಅಧಿಕ ಮತ್ತಗಳಿಂದ ಸೋಲುಂಡ ಬಳಿಕ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಅಲ್ಲದೆ ರಾಜಣ್ಣನವರು ಮುಂದಿನ ಚುನಾವಣೆಗೆ ಆಕಾಂಕ್ಷಿಯಾದಗೆ ಇರುವುದರಿಂದ ೮ ಹೊಸ ಮುಖಗಳು ಚೆನ್ನಗಿರಿ ಕ್ಷೇತ್ರದಲ್ಲಿ ಕಾಂಗ್ರೇಸ್ ಆಕಾಂಕ್ಷಿಗಳಾಗಿದ್ದಾರೆ. ಎಂಟು ಜನರ ಪೈಕಿ ಸಂತೇಬೆನ್ನೂರು ಲಿಂಗರಾಜು ಹೆಸರು ಕಾಂಗ್ರೆಸ್ ಪಕ್ಷದಲ್ಲೀಗ ಮುಂಚೂಣಿಯಲ್ಲಿ ಕೇಳುಬರುತ್ತಿದೆ. ಕ್ಷೇತ್ರದಲ್ಲಿ ಪುಲ್ ಆಕ್ಟಿವ್ ಆಗಿರುವ ಲಿಂಗರಾಜುರವರತ್ತ ಕ್ಷೇತ್ರದ ಮತದಾರ ಕೂಡ ಹೆಚ್ಚಿನ ಒಲವು ತೋರುತ್ತಿದ್ದಾರೆ. ಸಂತೇಬೆನ್ನೂರು ಲಿಂಗರಾಜು ವಿದ್ಯಾವಂತರಾಗಿದ್ದು ಹಲವು ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ನಿಷ್ಠಾವಂತ ಕಾಂಗ್ರೇಸ್ ಕುಟುಂಬದ ಹಿನ್ನಲೆಯ ಲಿಂಗರಾಜ್ ಯುವಕ, ವಿದ್ಯಾವಂತ, ಯುವ ಉದ್ಯಮಿಯಾಗಿದ್ದಾರೆ. ಜೊತೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯುವಘಟಕದ ಅಧ್ಯಕ್ಷರಾಗಿದ್ದು, ಸಮಾಜದ ಎಲ್ಲಾ ಸಮುದಾಯದ ಜನರೊಂದಿಗೆ, ಎಲ್ಲಾ ಸಮುದಾಯಗಳ ಮಠಾದೀಶರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದಾರೆ. ಚನ್ನಗಿರಿ ಕ್ಷೇತ್ರದ ಸ್ಥಳೀಯ ನಿವಾಸಿಯಾಗಿರುವ ಲಿಂಗರಾಜು, ಚೆನ್ನಗಿರಿ ವಿದಾನಸಭಾ ಕ್ಷೇತ್ರದ ಅತೀ ಹೆಚ್ಚು ಮತದಾರರನ್ನ ಹೊಂದಿರುವ ಸಂತೇಬೆನ್ನೂರು ಜಿಲ್ಲಾ ಪಂಚಾಯತಿ ಕ್ಷೇತ್ರದವರಾಗಿದ್ದು, ಇಲ್ಲಿನ ಬಹುತೇಕ ಮತದಾರರು ಈ ಹಿಂದೆ ಬಿಜೆಪಿಗೆ ಒಲವು ತೋರಿಸುತ್ತಿದ್ದರು. ಲಿಂಗರಾಜುರವರ ಹೆಸರು ಕಾಂಗ್ರೇಸ್ ಪಕ್ಷದಲ್ಲಿ ಮುಂಚೂಣಿಯಲ್ಲಿ ಬಂದ ಬೆನ್ನಲ್ಲೆ ಇಲ್ಲಿನ ಮತದಾರರು ಕೂಡು ಕಾಂಗ್ರೇಸ್‌ನತ್ತ ಮುಖ ಮಾಡುತಿದ್ದಾರೆ.
ಸದ್ಯ ಚೆನ್ನಗಿರಿ ಕ್ಷೇತ್ರದಲ್ಲಿ ಪುಲ್ ಆಕ್ಟಿವ್ ಆಗಿರುವ ಲಿಂಗರಾಜು ಜನಸಾಮಾನ್ಯರೊಂದಿಗೆ ಬೆರೆಯುತಿದ್ದು, ಹಳ್ಳಿ ಹಳ್ಳಿಗೆ, ಮನೆ ಮನೆಗಳಿಗೆ ಭೇಟಿ ನೀಡಿವು ಮೂಲಕ ಮತದಾರರಿಗೆ ಇನ್ನು ಹತ್ತಿರವಾಗುತ್ತಿದ್ದಾರೆ. ಹೊಸ ಮುಖದ ನೀರಿಕ್ಷೇಯಲ್ಲಿದ್ದ ಚೆನ್ನಗಿರಿ ಮತದಾರರು ಕೂಡ ಬದಲಾವಣೆಯನ್ನ ಬಯಸಿ ಸಂತೇಬೆನ್ನೂರು ಲಿಂಗರಾಜು ಪರ ಒಲವು ತೋರಿಸುತ್ತಿದ್ದಾರೆ. ಲಿಂಗರಾಜು ಸಂಪ್ರಾದಾಯಕ ರಾಜಕಾರಣದಲ್ಲಿ ಬದಲಾವಣೆ ತರುವ ಎಲ್ಲಾ ಶಕ್ತಿ ಹೊಂದಿರುವ ಕಾರಣ ಚೆನ್ನಗಿರಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಲು ಸೂಕ್ತ ಎನ್ನುವುದು ಹಲವು ಕಾಂಗ್ರೇಸ್ ನಾಯಕರ ಬಾಯಲ್ಲಿ ಕೇಳಿ ಬರುತ್ತಿದೆ. ಇತ್ತೀಚೆಗೆ ಪ್ರತಿಧ್ವನಿ ಚನ್ನಗಿರಿ ಕ್ಷೇತ್ರದಲ್ಲಿ ನಡೆಸಿದ ಸಮೀಕ್ಷೇಯಲ್ಲಿ ಕೂಡ ಮತದಾರರು ಸಂತೇಬೆನ್ನೂರು ಲಿಂಗರಾಜ್ ಪರ ಒಲವು ತೋರಿಸುತ್ತಿರುವುದು ಕಂಡುಬಂದಿದೆ.

ಚೆನ್ನಗಿರಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ- ೧, ೯೫, ೦೦೦
ಲಿಂಗಾಯತರು – 55,000
ಮುಸ್ಲಿಂ ಸಮುದಾಯ – 38,000
ಪರಿಶಿಷ್ಠ ಜಾತಿ – 35,000
ಪರಿಶಿಷ್ಠ ಪಂಗಡ – ೩೦,೦೦೦
ಉಪ್ಪಾರ ಸಮುದಾಯ- 12,000
ಕುರುಬ ಸಮುದಾಯ- 8,000
ಇತರೆ ಸಮುದಾಯ – 18,000