ಜೆಜೆ ನಗರದಲ್ಲಿ ಇತ್ತೀಚೆಗೆ ನಡೆದ ದಲಿತ ಯುವಕ ಚಂದ್ರು ಹತ್ಯೆ ಪ್ರಕರಣದ ಕುರಿತು ಸ್ನೇಹಿತ ಸೈಮನ್ ಸ್ಫೋಟಕ ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಲಭಿಸಿದೆ.
ಬೆಂಗಳೂರಿನ ಜೆಜೆ ನಗರದಲ್ಲಿ ಚಂದ್ರು ಎಂಬಾತನನ್ನು ದುಷ್ಕರ್ಮಿಗಳು ಚಾಕುವಿನಿಂದ ತೊಡೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಉರ್ದು ಬರಲ್ಲ ಅಂತ ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ, ನಂತರ ಬೈಕ್ ಟಚ್ ಆಗಿದ್ದರಿಂದ ಕೊಲೆ ಆಗಿತ್ತು ಎಂದು ಹೇಳಿಕೆ ಬದಲಿಸಿದ್ದರು. ಅಲ್ಲದೇ ಇದೇ ರೀತಿಯ ಹೇಳಿಕೆಯನ್ನು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ನೀಡಿದ್ದರು.
ಅರಗ ಜ್ಞಾನೇಂದ್ರ ಅವರ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಕೊಲೆಯಾದ ಚಂದ್ರುವನ್ನು ಉರ್ದು ಬರಲ್ಲ. ,ಬರೀ ಕನ್ನಡ ಮಾತನಾಡ್ತಾನೆ ಅಂತಾನೆ ಕೊಲೆ ಮಾಡಲಾಗಿದೆ ಎಂದು ಸ್ನೇಹಿತ ಸೈಮನ್ ಹೇಳಿಕೆ ನೀಡಿದ್ದಾನೆ.
ಸಂವಾದ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಸೈಮನ್, ಉರ್ದು ಬರಲ್ಲ ಅಂತನೇ ಅವನಿಗೆ ಇರಿದು ಕೊಲೆ ಮಾಡಲಾಗಿದೆ. ಘಟನೆ ನಡೆದಾಗ ಯಾರೂ ನೆರವಿಗೆ ಬರಲಿಲ್ಲ. ಗಾಯಗೊಂಡಿದ್ದ ಅವನನ್ನು ಚಾಮರಾಜಪೇಟೆ ಆಸ್ಪತ್ರೆಗೆ ಕರೆದೊಯ್ದರು ಯಾರೂ ಸರಿಯಾಗಿ ಸ್ಪಂದಿಸದೇ ಕಡೆಗಣಿಸಿದ್ಧಾರೆ ಎಂದು ಆರರೋಪಿಸಿದ್ದಾನೆ.