ಬಹು ನಿರೀಕ್ಷಿತ ಭಾರತದ ಹಮ್ಮೆಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದ ಚಂದ್ರಯಾನದ ಮೂರನೇ ಆವೃತ್ತಿಯಾದ ಚಂದ್ರಯಾನ-3 ಉಡಾವಣೆಗೆ ಎಲ್ಲಾ ರೀತಿಯಾದ ತಯಾರಿಗಳನ್ನ ಮಾಡಿಕೊಳ್ಳಲಾಗ್ತಾ ಇದೆ, ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಪರೀಕ್ಷೆಗಳು ಯೋಜಿಸಿದಂತೆ ನಡೆದರೆ ಜುಲೈ 12 ಮತ್ತು 19, 2023 ರ ನಡುವೆ ಉಡಾವಣೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕಂನ ಕೊತ್ತವಾರ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಇಸ್ರೋ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಮತ್ತು ಬಾಹ್ಯಾಕಾಶ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುವ ವೇಳೆ ಈ ಮಾಹಿತಿಯನ್ನ ನೀಡಿದ್ದಾರೆ.
![](https://pratidhvani.com/wp-content/uploads/2023/06/medium_2023-06-12-829d024fbf.jpg)
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಅವರಿ ಚಂದ್ರಯಾನಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನ ಮಾಡಿಕೊಳ್ಳಲಾಗಿದೆ. ಮುಂಬರುವ ಉಡಾವಣೆಯ ಸಮಯದಲ್ಲಿ ಯಾವುದೇ ತೊಂದರೆಗಳು ಆಗದಂತೆ ಹಾಗೂ ಹಾರ್ಡ್‌ವೇರ್, ರಚನೆ, ಕಂಪ್ಯೂಟರ್‌ಗಳು, ಸಾಫ್ಟ್‌ವೇರ್ ಮತ್ತು ಸಂವೇದಕಗಳಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ, ಮತ್ತು ಯಾವುದೇ ಲೋಪಗಳು ಉಂಟಾಗದ ರೀತಿ ಕ್ರಮ ಕೈಗೊಳ್ಳಲಾಗಿದೆ.
ಈ ತಿಂಗಳ ಅಂತ್ಯದ ವೇಳೆಗೆ ಈ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿದೆ. ಈ ಉಡಾವಣೆಗೆ ರಾಕೆಟ್, ಎಲ್ವಿಎಂ-3 ಬಳಸಲಾಗುತ್ತದೆ ಮತ್ತು ಈಗಾಗ್ಲೆ ಅದರ ಜೋಡಣೆ ಕಾರ್ಯ ಆರಂಭವಾಗಿದೆ. ಅದರ ಜೋಡಣೆಯ ಎಲ್ಲಾ ಭಾಗಗಳು ಶ್ರೀಹರಿಕೋಟಾವನ್ನ ಈಗಾಗ್ಲೆ ತಲುಪಿವೆ. ಜುಲೈ 12 ಮತ್ತು 19 ರ ನಡುವೆ ಇದನ್ನು ಉಡಾವಣೆ ಮಾಡಬಹುದು ಎಂಬ ನಿರೀಕ್ಷೆಯಲಿದ್ದೇವೆ ಎಂಬ ಮಾಹಿತಿಯನ್ನ ನೀಡಿದ್ದಾರೆ
ಒಟ್ಟಾರೆಯಾಗಿ ಇದೀಗ ಭಾರತೀಯ ಬಾಹ್ಯಾಕಾಶ ಸಂಸ್ಥೆ ಬೃಹತ್ ಹೆಜ್ಜೆಯನ್ನು ಇಟ್ಟಿದ್ದು ಈಗ ವಿಶ್ವದ ಕಣ್ಣು ಭಾರತದ ಚಂದ್ರಯಾನ-3 ರ ಮೇಲೆ ನೆಟ್ಟಿರೋದಂತೂ ಸುಳ್ಳಲ್ಲ.. ಹೀಗಾಗಿನೇ ಚಂದ್ರಯಾನ-3 ಸಾಕಷ್ಟು ನಿರೀಕ್ಷೆಯನ್ನ ಮೂಡಿಸಿದೆ.