• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ರಾಜ್ಯದಲ್ಲಿ ಮುಂಗಾರು ಶುರು.. ಎಷ್ಟು ದಿನ ಮಳೆಯಬ್ಬರ ಇರುತ್ತೆ..?

ಕೃಷ್ಣ ಮಣಿ by ಕೃಷ್ಣ ಮಣಿ
June 13, 2023
in ಅಂಕಣ
0
ರಾಜ್ಯದಲ್ಲಿ ಮುಂಗಾರು ಶುರು.. ಎಷ್ಟು ದಿನ ಮಳೆಯಬ್ಬರ ಇರುತ್ತೆ..?
Share on WhatsAppShare on FacebookShare on Telegram

ರಾಜ್ಯದಲ್ಲಿ ಮುಂಗಾರು ಮಳೆ ಯಾವಾಗ ಬರುತ್ತೆ ಎಂದು ಅನ್ನದಾತರು ಕಾಯುತ್ತಿದ್ದಾರೆ. ಈ ನಡುವೆ ಬೆಂಗಳೂರಿನ ಹಲವು ಕಡೆ ಭಾರೀ ಮಳೆಯಾಗಿದೆ. ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಟೌನ್ ಹಾಲ್ , ಕಾರ್ಪೋರೇಷನ್, ವಿಧಾನಸೌಧ, ಚಾಲುಕ್ಯ ಸರ್ಕಲ್, ಕೆ ಆರ್ ಸರ್ಕಲ್ ಸುತ್ತಮುತ್ತಲೂ ಜೋರು ಮಳೆ ಆಗಿದೆ. ಬೆಂಗಳೂರಿನಲ್ಲಿ ಮುಂದಿನ ಐದು ದಿನಗಳ‌ ಕಾಲ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯಕ್ಕೆ ಮಾನ್ಸೂನ್ ಈಗಾಗಲೇ ಎಂಟ್ರಿ ಕೊಟ್ಟಿದ್ದು ಮುಂದಿನ ಐದು ದಿನಗಳ ಕಾಲ‌ ಭಾರೀ ಪ್ರಮಾಣದಲ್ಲಿ ಮಳೆ ಆಗುವ ಮುನ್ಸೂಚೆನ ಇದೆ. ನಿನ್ನೆ ಸುರಿದ ಮಳೆಗೆ ಬೆಂಗಳೂರಿನ ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗಿದ್ದವು. ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ರಸ್ತೆ ಜಲಾವೃತವಾಗಿತ್ತು.. ಕಾಡುಬೀಸನಹಳ್ಳಿಯಲ್ಲಿ ಅಪಾರ್ಟ್​ಮೆಂಟ್​​​ ಬೇಸ್​​ಮೆಂಟ್​ಗೆಲ್ಲಾ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬೆಳ್ಳಂದೂರಿನಲ್ಲಿ ರಸ್ತೆಗಳೇ ಕಾಣದಂತಾಗಿದ್ದವು.. ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡಿತ್ತು.. HAL ಏರ್‌ಪೋರ್ಟ್ ರಸ್ತೆಯಲ್ಲಿ‌ ಕಿಲೋಮೀಟರ್ ಗಟ್ಟಲೆ‌‌ ಜಾಮ್ ಆಗಿತ್ತು. ವರ್ತೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ನೀರು ನಿಂತು ಮಳೆಗೆ ಕೆರೆಯಂತಾಗಿತ್ತು. ಮಳೆಯಿಂದ ವರ್ತೂರು ಸುತ್ತಮುತ್ತ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ರಿಂದ ವಾಹನ ಸವಾರರು ಪರದಾಡಿದ್ರು.

ADVERTISEMENT

ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಮಳೆ..! ಮುನ್ನೆಚ್ಚರಿಕೆ..

ಕರಾವಳಿಯಲ್ಲಿ ಸೈಕ್ಲೋನ್ ಎಫೆಕ್ಟ್‌ನಿಂದ ಮುಂಗಾರು ಮಾರುತ ಚುರುಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿಯಲ್ಲಿ ಭಾರೀ ಗಾಳಿ ಮಳೆಯಾಗ್ತಿದೆ. ದಡದಲ್ಲಿದ್ದ ಹಲವು ತೆಂಗಿನ ಮರಗಳು ಕಡಲ್ಕೊರೆತದಿಂದ ಸಮುದ್ರ ಪಾಲಾಗಿವೆ. ಕಡಲ್ಕೊರೆತ ಜೋರಾಗಿದೆ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತದ ಸೂಚನೆ ನೀಡಿದೆ. ಉಡುಪಿಯಲ್ಲೂ ಬಿಪರ್ ಜಾಯ್ ಚಂಡಮಾರುತ ಆತಂಕ ಎದುರಾಗಿದೆ. ಉಡುಪಿಯ ಮಲ್ಪೆ, ಪಡುಕೆರೆ ಬೀಚ್ ಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಚಂಡಮಾರುತ ಭೀತಿಯಿಂದ ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯದಂತೆ ಖಡಕ್ ಸೂಚನೆ ನೀಡಲಾಗಿದೆ. ಕಾರವಾರ ಸೇರಿ ಉತ್ತರ ಕನ್ನಡ ಕರಾವಳಿಯಲ್ಲಿ ಚಂಡಮಾರುತದ ಆತಂಕ ಎದುರಾಗಿದೆ. ಕಡಲ ಅಬ್ಬರ ಜೋರಾಗಿದ್ದು ಕಡಲ ಕೊರೆತ ಸಂಭವಿಸಿದೆ. ಈ ಮಧ್ಯೆ, ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ಧಾರವಾಡ ಜಿಲ್ಲೆಯ ಕಲಘಟಗಿ ಮೂಲದ ಇಬ್ಬರು ಪ್ರವಾಸಿಗರ ರಕ್ಷಣೆ ಮಾಡಲಾಗಿದೆ. ಓರ್ವ ಕಣ್ಮರೆಯಾಗಿದ್ದು, ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಾನ್ಸೂನ್‌ ಜೊತೆಗೆ ಬಿಪರ್‌ಜಾಯ್ ಚಂಡಮಾರುತ ಎಫೆಕ್ಟ್‌ !

ಗುಜರಾತ್‌ ಸೇರಿ ಪಶ್ಚಿಮ ಕರಾವಳಿಯಲ್ಲಿ ಬಿಪರ್‌ಜಾಯ್ ಚಂಡಮಾರುತ ಎಫೆಕ್ಟ್‌ ಇರುವ ಕಾರಣಕ್ಕೆ ಭಾರೀ ಮಳೆಯ ಮುನ್ಸೂಚನೆ ಸಿಕ್ಕಿದ್ದು, ದೆಹಲಿಯಲ್ಲಿ ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಗೃಹ ಸಚಿವ ಅಮಿತ್ ಷಾ ಸೇರಿ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದು, ಚಂಡಮಾರುತ ವೇಳೆ ಯಾವುದೇ ಸಮಸ್ಯೆಯಾಗದಂತೆ ಕೆಲಸ ನಿರ್ವಹಣೆ ಮಾಡುವುದಕ್ಕೆ ಸಜ್ಜಾಗಿರುವಂತೆ ಸೂಚಿಸಿದ್ದಾರೆ. ಜೂನ್ 15ಕ್ಕೆ ಬಿಪರ್‌ಜಾಯ್ ಚಂಡಮಾರುತ ಗುಜರಾತ್‌ಗೆ ಅಪ್ಪಳಿಸೋ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈಗಾಗಲೇ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡೋ ಪ್ರಕ್ರಿಯೆ ಆರಂಭವಾಗಿದೆ. ಮಹಾರಾಷ್ಟ್ರ ಕಡಲತೀರ, ಗುಜರಾತ್‌ನ ಸೌರಾಷ್ಟ್ರ, ಕಛ್ ತೀರದಲ್ಲಿ NDRF ತಂಡ ಬೀಡುಬಿಟ್ಟಿದೆ. ಲಘು ಹೆಲಿಕಾಪ್ಟರ್‌ಗಳ ಜೊತೆಗೆ ಗುಜರಾತ್‌ನ ದ್ವಾರಕಾದಲ್ಲಿ ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಸಿದ್ಧತೆ ಮಾಡಿಟ್ಟುಕೊಂಡಿದೆ. ಸದ್ಯಕ್ಕೆ ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಮಂಡ್ವಿ ಬೀಚ್‌ನಲ್ಲಿ ಮೀನುಗಾರಿಕಾ ದೋಣಿಗಳು ಲಂಗರು ಹಾಕಿವೆ.ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ಮೀನುಗಾರರು ಭಾರೀ ಗಾಳಿಯಿಂದ ಕಂಗಾಲಾಗಿದ್ದಾರೆ.

ಮಳೆ ಅನಾಹುತ ಏನು ಬೇಕಿದ್ದರೂ ಆಗಬಹುದು..!

ಮಾನ್ಸೂನ್‌ ಮಾರುತಗಳ ಆಗಮನ ರಾಜ್ಯಕ್ಕೆ ತಡವಾಗಿದೆ. ಹಾಗೆಂದ ಮಾತ್ರಕ್ಕೆ ಮಳೆ ಕಡಿಮೆ ಆಗಿದೆ ಎಂದುಕೊಂಡು ಮಳೆಯಲ್ಲಿ ಸುತ್ತಾಡುವುದು ಸಮಸ್ಯೆಗೆ ಆಹ್ವಾನ ಕೊಟ್ಟಂತೆ. ಈ ಬಾರಿಯ ಮಳೆ ತಡವಾಗಿದೆ. ಆದರೆ ಮಳೆಯ ಮಾರುಗಳು ಚಂಡಮಾರುತಕ್ಕೆ ಸಿಲುಕಿ ತನ್ನ ದಿಕ್ಕು ಮತ್ತು ವೇಗವನ್ನು ಬದಲಾಯಿಸಿಕೊಂಡಿವೆ. ಎಲ್ಲಿ ಭಾರೀ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ಕೂಡ ಅಂದಾಜಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಎಲ್ಲಿ ಜೋರು ಗಾಳಿ ಮಳೆಯಾಗುತ್ತೋ ಅಲ್ಲಿ ಪ್ರಕೃತಿ ವಿಕೋಪಗಳು ಆಗುವ ಸಾಧ್ಯತೆಗಳಿವೆ. ಈಗಾಗಲೇ ಕರ್ನಾಟಕದ ಕೊಡಗು ಸೇರಿದಂತೆ ದೇಶಾದ್ಯಂತ NDRF ಹಾಗು SDRF ಟೀಂಗಳು ಸಜ್ಜಾಗಿವೆ. ಯಾವುದೇ ಅನಾಹುತಗಳಿಗೂ ಅವಕಾಶ ಕೊಡದಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಸಾಧ್ಯವಾದಷ್ಟೂ ಮಳೆ ಸುರಿಯುವಾಗ ಮರಗಳ ಕೆಳಗೆ ನಿಲ್ಲುವ ಮೂಲಕ ರಕ್ಷಣೆ ಪಡೆದುಕೊಳ್ಳುವ ದುಸ್ಸಾಹಸ ಮಾಡಬೇಡಿ. ಮರ ಮುರಿದು ಬೀಳಬಹುದು ಅಥವಾ ಸಿಡಿಲು ಮರಕ್ಕೆ ಹೊಡೆದಾಗ ಕ್ಷಣಮಾತ್ರದಲ್ಲಿ ನಿಮ್ಮ ಜೀವ ಹೋಗಬಹುದು. ಎಚ್ಚರಿಕೆ..

ಕೃಷ್ಣಮಣಿ

Tags: Arabian SeaCoastal RegionCyclone Bipar JoyKarnatakaKeralaMonsoonRain
Previous Post

ಹಾಡಹಗಲೇ ವಿದೇಶಿಗನ ಮೇಲೆ ಹಲ್ಲೆ ಯತ್ನ : ಬೆಂಗಳೂರು ಪೊಲೀಸ್​ ಕಮಿಷನರ್​ ಸ್ಪಷ್ಟನೆ

Next Post

ಜುಲೈ 12 ರಿಂದ19 ರ ನಡುವೆ ಚಂದ್ರಯಾನ-3 ಉಡಾವಣೆ

Related Posts

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..
Top Story

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

by ಪ್ರತಿಧ್ವನಿ
February 6, 2026
0

ವೈಭವ್ ಸೂರ್ಯವಂಶಿ (Vaibhav Suryavanshi) 14 ವರ್ಷದ ವೈಭವ್ ಸೂರ್ಯವಂಶಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175ರನ್‌ಗಳ ಸಿಡಿಲಬ್ಬರದ ಶತಕ ಸಿಡಿಸಿ...

Read moreDetails
ಜಾತಿ ತಾರತಮ್ಯದ ವಿರುದ್ಧ ಸಮಾನತೆಯ ಹಾದಿ: ರೋಹಿತ್ ವೇಮುಲಾ ಪ್ರಕರಣದಿಂದ UGC ನಿಯಮಗಳವರೆಗೆ…

ಜಾತಿ ತಾರತಮ್ಯದ ವಿರುದ್ಧ ಸಮಾನತೆಯ ಹಾದಿ: ರೋಹಿತ್ ವೇಮುಲಾ ಪ್ರಕರಣದಿಂದ UGC ನಿಯಮಗಳವರೆಗೆ…

February 3, 2026
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

February 3, 2026
ಲಿಂಗಾಯತರು ಕೈಗಾರಿಕಾ  ರಂಗಕ್ಕೆ ಧುಮುಕಬೇಕು: ಎಂ ಬಿ ಪಾಟೀಲ

ಲಿಂಗಾಯತರು ಕೈಗಾರಿಕಾ ರಂಗಕ್ಕೆ ಧುಮುಕಬೇಕು: ಎಂ ಬಿ ಪಾಟೀಲ

January 29, 2026
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

January 28, 2026
Next Post
ಜುಲೈ 12 ರಿಂದ19 ರ ನಡುವೆ ಚಂದ್ರಯಾನ-3 ಉಡಾವಣೆ

ಜುಲೈ 12 ರಿಂದ19 ರ ನಡುವೆ ಚಂದ್ರಯಾನ-3 ಉಡಾವಣೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada