ಮೈಸೂರು : ಚುನಾವಣಾ ಫಲಿತಾಂಶ ಹೊರಬೀಳೋಕೂ ಮುಂಚೆಯೇ ಚಾಮುಂಡೇಶ್ವರಿಯಲ್ಲಿ ಕದನ ಜೋರಾಗಿದೆ. ಚುನಾವಣೆಯಲ್ಲಿ ಬುಕ್ ಆಗಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಉಪ್ಪು ಮುಟ್ಟಿ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿಸಿದ್ದೇಗೌಡ ಆಣೆ ಪ್ರಮಾಣ ಮಾಡಿದ್ದಾರೆ.

ಚುನಾವಣೆಯಲ್ಲಿ ನಾವು ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ. ಇದೆಲ್ಲ ಮೂಲ ಕಾಂಗ್ರೆಸ್ಸಿಗರ ಪಿತೂರಿ. ನಾನು ಗೆದ್ದೆ ಬಿಡ್ತೀನಿ ಅಂತಾ ಇಂತಹ ಚಿತಾವಣಿ ಮಾಡಿದ್ದಾರೆ. 500 ಜನರ ಗುಂಪು ಕಟ್ಟಿಕೊಂಡು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಜೆಡಿಎಸ್ ಈ ಅವಕಾಶವನ್ನು ಚೆನ್ನಾಗಿಯೇ ಬಳಕೆ ಮಾಡಿಕೊಂಡಿದೆ ಎಂದು ಉಪ್ಪನ್ನು ಮುಟ್ಟಿ ಮಾವಿನಹಳ್ಳಿ ಸಿದ್ದೇಗೌಡ ಹೇಳಿದ್ದಾರೆ.
ಆದರೆ ನಾನು ಯಾರೋ ಒಬ್ಬ ವ್ಯಕ್ತಿಯನ್ನ ನಂಬಿ ಮೋಸ ಹೋದೆ.ಅದಾಗಿಯೋ ಚುನಾವಣೆ ಚೆನ್ನಾಗಿ ಆಗಿದೆ.ಈಗಲೂ ನನಗೆ ಗೆಲುವಿನ ವಿಶ್ವಾಸವಿದೆ.ಸಿದ್ದರಾಮಯ್ಯನವರಿಗೆ ಈ ವಿಚಾರಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ.ಚುನಾವಣೆಯಲ್ಲಿ ಬಳಲಿ ಬಂದವರಿಗೆ ಪ್ರಶ್ನೆ ಕೇಳಿದಾಗ ಈ ರೀತಿ ಹೇಳಿದ್ದಾರೆ ಅಷ್ಟೇ.ನಾನು ಖುದ್ದು ಅವರನ್ನ ಭೇಟಿ ಮಾಡಿ ಈ ಬಗ್ಗೆ ಮಾತನಾಡುತ್ತೇನೆ.ಉಪ್ಪನ್ನ ಹಿಡಿದು ಪ್ರಮಾಣ ಮಾಡಿದ ಕಾಂಗ್ರೇಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ