Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಕಾಟೇರ” ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯ

ಪ್ರತಿಧ್ವನಿ

ಪ್ರತಿಧ್ವನಿ

September 13, 2023
Share on FacebookShare on Twitter

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ “ಕಾಟೇರ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.

ಹೆಚ್ಚು ಓದಿದ ಸ್ಟೋರಿಗಳು

ಡಿಸೆಂಬರ್ 22ಕ್ಕೆ ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ ಹೊಂಬಾಳೆ ಫಿಲಂಸ್‍ನ ‘ಸಲಾರ್’

“ಗರಡಿ” ಟೈಟಲ್ ಟ್ರ್ಯಾಕ್‌ಗೆ ಅಭಿಮಾನಿಗಳು ಫಿದಾ: ಬಹು ನಿರೀಕ್ಷಿತ ‘ಗರಡಿ’ ಚಿತ್ರ ನವೆಂಬರ್ 10 ರಂದು ತೆರೆಗೆ

ರಾಷ್ಟ್ರ ಪ್ರಶಸ್ತಿ ವಿಜೇತ ಅನಿರುದ್ಧ್ ಜತಕರ್ ಗೆ ಅಭಿಮಾನಿಗಳಿಂದ ಸನ್ಮಾನ

ನಮ್ಮ ಸಂಸ್ಥೆಯ ನಿರ್ಮಾಣದ “ಕಾಟೇರ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ತನಕ ನೂರು ದಿನಗಳ ಚಿತ್ರೀಕರಣವಾಗಿದೆ. ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಎಪ್ಪತ್ತರ ದಶಕದಲ್ಲಿ ನಡೆಯುವ ಕಥೆಯಾಗಿದೆ. ಹಾಗಾಗಿ ಈ ಸ್ಥಳದಲ್ಲಿ ಹಳ್ಳಿಯ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ. ತರುಣ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ದರ್ಶನ್ ಅವರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯಾಗಿ ಮೊದಲ ಬಾರಿಗೆ ಮಾಲಾಶ್ರೀ ಅವರ ಮಗಳು ಆರಾಧನಾ ಅಭಿನಯಿಸುತ್ತಿದ್ದಾರೆ. ಜನಪ್ರಿಯ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ವಿ.ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.
ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.

“ಗುರು ಶಿಷ್ಯರು” ಚಿತ್ರದ ನಂತರ ನಾನು ಹಾಗೂ ಜಡೇಶ್ ಅವರು ಸೇರಿ ಈ ಚಿತ್ರದ ಕಥೆ ಬರೆದ್ದೆವು. ದರ್ಶನ್ ಅವರಿಗಾಗಿಯೇ ಬರೆದ ಕಥೆಯಿದು ಎಂದು ಮಾತು ಆರಂಭಿಸಿದ ನಿರ್ದೇಶಕ ತರುಣ್ ಸುಧೀರ್, ಆನಂತರ ದರ್ಶನ್ ಅವರು ರಾಕ್ ಲೈನ್ ವೆಂಕಟೇಶ್ ಅವರಿಗೆ ಈ ಕಥೆ ಹೇಳಿ ಎಂದರು. ರಾಕ್ ಲೈನ್ ಸರ್ ಕಥೆ ಮೆಚ್ಚಿಕೊಂಡು ಚಿತ್ರವನ್ನು ಪ್ರಾರಂಭಿಸಿದರು. ಹಿರಿಯ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ಈ ಚಿತ್ರದ ನಾಯಕಿ ಎಂದು ನಿರ್ಮಾಪಕರು, ದರ್ಶನ್ ಅವರು ಹಾಗೂ ನಾನು ಸೇರಿ ಆಯ್ಕೆ ಮಾಡಿದ್ದೆವು. ಆರಾಧನಾ ಅದ್ಭುತ ನಟಿ. ಬಹುತೇಕ ಎಲ್ಲಾ ಸನ್ನಿವೇಶಗಳನ್ನು ಒಂದೇ ಟೇಕ್ ನಲ್ಲಿ ಮುಗಿಸಿದ್ದಾರೆ. ಈ ಚಿತ್ರ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು , ಕನಕಪುರ ರಸ್ತೆಯಲ್ಲಿ ಅದ್ದೂರಿ ಹಳ್ಳಿ ಸೆಟ್ ಹಾಕಲಾಗಿದೆ‌. ನೂರು ದಿನಗಳ ಚಿತ್ರೀಕರಣ ಪೂರ್ಣವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದರು.

ನೂರು ದಿನಗಳ ಚಿತ್ರೀಕರಣದಲ್ಲಿ ನಾನು, ಎಪ್ಪತ್ತೊಂದು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ರಾಕ್ ಲೈನ್ ವೆಂಕಟೇಶ್ ಅವರು ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ‌. ತರುಣ್ ಹಾಗೂ ಜಡೇಶ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಾಲಾಶ್ರೀ ಅವರ ಮಗಳು ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಎಂತಹ ಸನ್ನಿವೇಶಗಳನ್ನು ಒಂದೇ ಟೇಕ್ ನಲ್ಲಿ ಅಭಿನಯಿಸುವ ಕಲಾವಿದೆ ಅವರು.
ಹಿರಿಯ ನಟರಾದ ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ, ಕುಮಾರ್ ಗೋವಿಂದ್ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ. ಸುಧಾಕರ್ ಅವರ ಛಾಯಾಗ್ರಹಣ ಅದ್ಭುತವಾಗಿದ್ದು, ಈ ಚಿತ್ರದ ಛಾಯಾಗ್ರಹಣಕ್ಕಾಗಿ ಅವರಿಗೆ ಪ್ರಶಸ್ತಿ ಬರಬಹುದು ಎಂಬುದು ನನ್ನ ಅನಿಸಿಕೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದರು‌.

ಇದು ನನ್ನ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ. ಅವಕಾಶ ನೀಡಿದ ರಾಕ್ ಲೈನ್ ವೆಂಕಟೇಶ್, ತರುಣ್ ಸುಧೀರ್ ಹಾಗೂ ದರ್ಶನ್ ಅವರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಾಯಕಿ ಆರಾಧನಾ.

ಹಿರಿಯ ನಟರಾದ ಅವಿನಾಶ್, ಕುಮಾರ್ ಗೋವಿಂದ್, ವಿನೋದ್ ಆಳ್ವಾ, ಛಾಯಾಗ್ರಾಹಕ ಸುಧಾಕರ್, ತರುಣ್ ಸುಧೀರ್ ಅವರೊಂದಿಗೆ ಕಥೆ, ಚಿತ್ರಕಥೆ ಬರೆದಿರುವ ಜಡೇಶ್, ಸಂಭಾಷಣೆ ಬರೆದಿರುವ ಮಾಸ್ತಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಹಿರಿಯ ನಟಿ ಮಾಲಾಶ್ರೀ ಚಿತ್ರತಂಡಕ್ಕೆ ಶುಭ ಕೋರಿದರು.

RS 500
RS 1500

SCAN HERE

Pratidhvani Youtube

«
Prev
1
/
5557
Next
»
loading
play
Vatal Nagaraj | ಧಿಕ್ಕಾರ..ಧಿಕ್ಕಾರ ನಿಮ್ಮ ತಮಿಳುನಾಡು ಸರ್ಕಾರಕ್ಕೆ ಧಿಕ್ಕಾರ..!
play
"ಬ್ಯಾರಿ ಸೌಹಾರ್ಧ ಭವನ” ಉದ್ಘಾಟನೆ CM ಸಿದ್ರಾಮಯ್ಯ DK ಶಿವಕುಮಾರ್ K J ಜಾರ್ಜ್ ಭಾಷಣ | @PratidhvaniNews
«
Prev
1
/
5557
Next
»
loading

don't miss it !

ಕೇರಳದಲ್ಲಿ ಯೋಧನ ಅಪಹರಿಸಿ ಹಲ್ಲೆ: ಪಿಎಫ್‌ಐ ಕಾರ್ಯಕರ್ತರ ಕೈವಾಡ ಶಂಕೆ
Top Story

ಕೇರಳದಲ್ಲಿ ಯೋಧನ ಅಪಹರಿಸಿ ಹಲ್ಲೆ: ಪಿಎಫ್‌ಐ ಕಾರ್ಯಕರ್ತರ ಕೈವಾಡ ಶಂಕೆ

by ಪ್ರತಿಧ್ವನಿ
September 25, 2023
ವಾರದೊಳಗೆ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಆರಂಭ: ಸಚಿವ ಡಾ. ಎಂ.ಸಿ. ಸುಧಾಕರ್
Top Story

ವಾರದೊಳಗೆ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಆರಂಭ: ಸಚಿವ ಡಾ. ಎಂ.ಸಿ. ಸುಧಾಕರ್

by ಪ್ರತಿಧ್ವನಿ
September 28, 2023
ನನಗೂ ಬ್ಯಾರಿ ಸಮುದಾಯದ ಜೊತೆಗೆ ವ್ಯವಹಾರಿಕವಾಗಿ ವಿಶ್ವಾಸದಲ್ಲಿ ಸಂಬಂಧ ಉಂಟು: ಡಿಕೆಶಿ
Top Story

ನನಗೂ ಬ್ಯಾರಿ ಸಮುದಾಯದ ಜೊತೆಗೆ ವ್ಯವಹಾರಿಕವಾಗಿ ವಿಶ್ವಾಸದಲ್ಲಿ ಸಂಬಂಧ ಉಂಟು: ಡಿಕೆಶಿ

by ಪ್ರತಿಧ್ವನಿ
September 30, 2023
ರಾಕ್ ಲೈನ್ ವೆಂಕಟೇಶ್ ಹಾಗೂ ಸಾಯಿಪ್ರಕಾಶ್ ಅವರಿಂದ “ನಿರ್ಭಯ 2” ಚಿತ್ರದ ಟೀಸರ್ ಅನಾವರಣ
Top Story

ರಾಕ್ ಲೈನ್ ವೆಂಕಟೇಶ್ ಹಾಗೂ ಸಾಯಿಪ್ರಕಾಶ್ ಅವರಿಂದ “ನಿರ್ಭಯ 2” ಚಿತ್ರದ ಟೀಸರ್ ಅನಾವರಣ

by ಪ್ರತಿಧ್ವನಿ
September 24, 2023
ಸಂಕಷ್ಟ ಕಾಲದಲ್ಲಿ ಕಾವೇರಿ ನೀರು ಹರಿಸುವ ಹೊಸ ಸೂತ್ರಕ್ಕೆ ಅಗ್ರಹ: ಡಿಸಿಎಂ ಡಿ.ಕೆ.ಶಿವಕುಮಾರ್
Top Story

ಸಂಕಷ್ಟ ಕಾಲದಲ್ಲಿ ಕಾವೇರಿ ನೀರು ಹರಿಸುವ ಹೊಸ ಸೂತ್ರಕ್ಕೆ ಅಗ್ರಹ: ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
September 29, 2023
Next Post
ಮಂಗಳೂರು | ಭಾರೀ ಪ್ರಮಾಣದ ಚಿನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

ಮಂಗಳೂರು | ಭಾರೀ ಪ್ರಮಾಣದ ಚಿನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

ರೋಹಿಣಿ ಸಿಂಧೂರಿಗೆ ಅಧಿಕಾರ ನೀಡಿದ ರಾಜ್ಯ ಕಾಂಗ್ರೆಸ್‌ ಸರ್ಕಾರ..!

ರೋಹಿಣಿ ಸಿಂಧೂರಿಗೆ ಅಧಿಕಾರ ನೀಡಿದ ರಾಜ್ಯ ಕಾಂಗ್ರೆಸ್‌ ಸರ್ಕಾರ..!

ಹೊರಗಡೆ ಹಿಂದುತ್ವ.. ಮುಸ್ಲಿಂ ಜೊತೆ ವಾಸ್ತವ್ಯ.. ಅರ್ಥವಾಗದ ಜನರಷ್ಟೇ ಮಂಗ್ಯಾ ಆಗ್ತಿದ್ದಾರಾ..?

ಹೊರಗಡೆ ಹಿಂದುತ್ವ.. ಮುಸ್ಲಿಂ ಜೊತೆ ವಾಸ್ತವ್ಯ.. ಅರ್ಥವಾಗದ ಜನರಷ್ಟೇ ಮಂಗ್ಯಾ ಆಗ್ತಿದ್ದಾರಾ..?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist