ಚೆನ್ನೈ: ನಟಿ ಅನುಪಮಾ ಪರಮೇಶ್ವರನ್ ಮತ್ತು ತಮಿಳು ನಟ ಧ್ರುವ್ ವಿಕ್ರಮ್ ಅವರ ಬಗ್ಗೆ ಹೊಸ ವದಂತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ತಾರಾ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನಟಿ ಅನುಪಮಾ ಪರಮೇಶ್ವರನ್ ಮತ್ತು ತಮಿಳು ನಟ ಧ್ರುವ್ ವಿಕ್ರಮ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ಗುಸು ಗುಸು ಆಗಾಗ ಕೇಳಿ ಬರುತ್ತಿತ್ತು. ‘ಬೈಸನ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಅದು ಪ್ರೀತಿಗೆ ತಿರುಗಿತ್ತು ಎನ್ನಲಾಗಿತ್ತು. ಆದರೆ, ತಮ್ಮ ಸಂಬಂಧದ ಬಗ್ಗೆ ಅನುಪಮಾ ಅಥವಾ ಧ್ರುವ್ ಈವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಈಗ ಈ ಜೋಡಿ ದೂರಾಗಿದೆಯಂತೆ.

ಇತ್ತೀಚೆಗೆ ಅನುಪಮಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಭಾವನಾತ್ಮಕ ಪೋಸ್ಟ್ ಬ್ರೇಕಪ್ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದರ ನಡುವೆ, ಚೆನ್ನೈನ ಹೋಟೆಲ್‌ನಲ್ಲಿ ನಡೆದ ಘಟನೆಯ ಬಗ್ಗೆ ವಂದತಿಯೊಂದು ಹರಿದಾಡುತ್ತಿದೆ.

ಹೋಟೆಲ್‌ನಲ್ಲಿ ಅನುಪಮಾ ಮತ್ತು ಧ್ರುವ್ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕೋಪಗೊಂಡ ಅನುಪಮಾ, ಧ್ರುವ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಧ್ರುವ್ ಅವರ ನಡವಳಿಕೆಯನ್ನು ಅನುಪಮಾ ಪ್ರಶ್ನಿಸಿದ್ದೇ ಈ ಗಲಾಟೆಗೆ ಮುಖ್ಯ ಕಾರಣ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಘಟನೆ ನಡೆದಿರುವ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ. ಸದ್ಯ ಈ ಎಲ್ಲಾ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಾಗಿದ್ದು, ಅನುಪಮಾ ಪರಮೇಶ್ವರನ್ ಅಥವಾ ಧ್ರುವ್ ವಿಕ್ರಮ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.







