ಕಾಟೇರ(katera) ಸಿನಿಮಾ ಸಕ್ಸಸ್ ಬೆನ್ನಲ್ಲೇ ಡಿ ಬಾಸ್(DBoss) ದರ್ಶನ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ತಮ್ಮ ಫ್ರೆಂಡ್ಸ್ ಜೊತೆ ಟೈಂ ಕಳೆಯುತ್ತಿದ್ದಾರೆ . ಕಾಟೇರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ (boxoffice) ಫುಲ್ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಮಾಡಿದೆ. ಮುಂದಿನ ವಾರದಿಂದ ದಚ್ಚು ಮಿಲನ ಪ್ರಕಾಶ್ (prakash) ಡೈರೆಕ್ಷನ್ನ ಡೆವಿಲ್(Devil) ಸಿನಿಮಾದ ಫೋಟೋ ಶೂಟ್ ಸೇರಿ ಪ್ರಿ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಇದೆಲ್ಲದರ ಮಧ್ಯದಲ್ಲಿ ಚಾಲೆಂಜಿಂಗ್ ಸ್ಟಾರ್, ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದುಕೊಂಡಿದ್ದಾರೆ. ಫ್ರೆಂಡ್ಸ್ ಜೊತೆ ದರ್ಶನ್ ತಿರುಮಲಕ್ಕೆ (tirumala) ಹೋಗಿದ್ದು, ಭಗವಂತನ ನಾಮಸ್ಮರಣೆಯಲ್ಲಿ ತೊಡಗಿದ್ದಾರೆ. ತಿರುಪತಿಯ(tirupathi) ಶ್ರೀವೆಂಕಟೇಶ್ವರಸ್ವಾಮಿಯ (lord venkateshwara) ದರ್ಶನ ಪಡೆದುಕೊಂಡು ಪುನೀತರಾಗಿದ್ದಾರೆ. ಈ ವೇಳೆ ದರ್ಶನ್ ಅವರಿಗೆ ಮಂಡ್ಯದ ಎಂಪಿ ಸುಮಲತಾ ಅವರ ಆಪ್ತ ಹಾಗೂ ಬಿಜೆಪಿ ಮುಖಂಡ ಸಚ್ಚಿದಾನಂದ ಕೂಡ ಜೊತೆಗಿದ್ದಾರೆ. ಕಾಟೇರ ಸಿನಿಮಾದಿಂದ ಚಾಲೆಂಜಿಂಗ್ ಸ್ಟಾರ್ (challengingstar)ದರ್ಶನ್ ಇನ್ನೊಂದು ಮೆಟ್ಟಿಲು ಮೇಲೆ ಹೋಗಿದ್ದಾರೆ.
![](https://pratidhvani.com/wp-content/uploads/2024/02/WhatsApp-Image-2024-02-09-at-12.50.14-1-1-559x1024.webp)
ತರುಣ್ ಸುಧೀರ್(tarun sudhir ) ನಿರ್ದೇಶನದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು ಬೆಳ್ಳಿತೆರೆ ಮೇಲೆ ದೊಡ್ಡ ಸದ್ದು ಮಾಡಿದೆ. ಕಾಟೇರ ಬಿಗ್ ಸಕ್ಸಸ್ (success) ಕಂಡ ಹಿನ್ನೆಲೆಯಲ್ಲಿ ದರ್ಶನ್ ಮುಂದಿನ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ. ಹತ್ರತ್ರ 225 ಕೋಟಿಗೂ ಹೆಚ್ಚು ಕಲೆಕ್ಷನ್ನ ಕಾಟೇರ ಸಿನಿಮಾ ಮಾಡಿದೆ ಅನ್ನೋ ಮಾಹಿತಿ ಗಾಂಧಿನಗರದಲ್ಲಿ(gandhinagar) ಹರಿದಾಡುತ್ತಿದೆ. ಫೆಬ್ರವರಿ 16ಕ್ಕೆ ಡಿ ಬಾಸ್ (dboss)ಬರ್ತ್ ಡೇ (darshan) ಕೂಡ ಇದೆ ಆ ದಿನವೇ ಡೆವಿಲ್ (devil) ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಈಗಾಗ್ಲೇ ದಾಸನ ಅಭಿಮಾನಿಗಳು ಹುಟ್ಟುಹಬ್ಬವನ್ನ ಭರ್ಜರಿಯಾಗಿ ಆಚರಿಸಲು ಸಕಲ ಸಿದ್ಧತೆ ನಡೆಸಿದ್ದಾರೆ .48ನೇ ವರ್ಷಕ್ಕೆ ದರ್ಶನ್(darshan birthday) ಕಾಲಿಡುತ್ತಿದ್ದು, ಮಾಸ್ ಗೆ ಬಾಸ್ ಅನ್ನೋ ರೀತಿ ಸ್ಯಾಂಡಲ್ವುಡ್ನಲ್ಲಿ(sandalwood) ತಮ್ಮದೇ ಛಾಪು ಮೂಡಿಸುತ್ತಿದ್ದಾರೆ .
#ChallengingStar #Darshan #LordVenkateshwara #Kateera