ಕರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಪರಿಸ್ಥಿತಿಯನ್ನು ಅವಲೋಕಿಸಲು ಒಕ್ಕೂಟ ಸರ್ಕಾರದಿಂದ ತಂಡ ರವಾನೆಯಾಗಿದೆ. ದೇಶದಲ್ಲಿ ಕರೋನಾ ಸೋಂಕು ಹೆಚ್ಚು ದಾಖಲಾಗುತ್ತಿರುವ ಪ್ರಮುಖ ಹತ್ತು ರಾಜ್ಯಗಳಿಗೆ ಕೇಂದ್ರದಿಂದ ತಂಡ ಕಳುಹಿಸಿಕೊಡಲಾಗಿದೆ.
ಕರ್ನಾಟಕ ಸೇರಿದಂತೆ ದೇಶದ 10 ರಾಜ್ಯಗಳಿಗೆ ತಜ್ಞರ ತಂಡ ರವಾನೆ ಮಾಡಿರುವ ಕೇಂದ್ರ, ಸರ್ಕಾರ ಕರೋನಾ ಹಾಗೂ ತೆಗೆದುಕೊಳ್ಳಲಾಗಿರುವ ಕ್ರಮ ಮತ್ತು ಸಿದ್ಧತೆಗಳ ಬಗ್ಗೆ ಮಾಹಿತಿ ಕಲೆಹಾಕಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಒಪ್ಪಿಸಲಿದೆ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್, ಒಡಿಶಾ, ದೆಹಲಿ, ರಾಜಸ್ಥಾನಗಳಿಗೆ ತಂಡ ರವಾನೆ ಮಾಡಲಾಗಿದೆ. ಅತಿಹೆಚ್ಚು ಕರೋನಾ ಪ್ರಕರಣಗಳಿರುವ ಟಾಪ್ 10 ರಾಜ್ಯಗಳಿಗೆ ತಂಡ ರವಾನೆ ಮಾಡಿದ್ದು, ಕೊರೋನಾ 3ನೇ ಅಲೆಯ ಬಗ್ಗೆ ನಿರಂತರ ಅಧ್ಯಯನ ಬೆನ್ನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.