
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 3ನೇ ಅವಧಿಯ ಮೊದಲ ಪರಿಪೂರ್ಣ ಬಜೆಟ್ ಅಧಿವೇಶನ ಆರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಪರಿಪೂರ್ಣ ಬಜೆಟ್ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

ಬಜೆಟ್ ಅಧಿವೇಶನದ ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದಾರೆರ. ಬರೋಬ್ಬರಿ 58 ನಿಮಿಷಗಳ ಕಾಲ ಕೇಂದ್ರ ಸರ್ಕಾರ ಸಾಧನೆಗಳು, ಭವಿಷ್ಯದ ಯೋಜನೆಗಳು, ಮಹಾಕುಂಭಮೇಳದ ದುರಂತದ ಬಗ್ಗೆಯೂ ಪ್ರಸ್ತಾಪಿಸಿ ಸಂತಾಪ ಸೂಚಿಸಿದ್ದಾರೆ.. ರಾಷ್ಟ್ರಪತಿ ಭಾಷಣ ಮುಗಿಯುತ್ತಿದ್ದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ.. ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ತಂಡ ಸಲ್ಲಿಸಿದ ಆರ್ಥಿಕ ಸಮೀಕ್ಷೆಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯ ಮುನ್ನೋಟ ನೀಡಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ ದೇಶದ GDP ಶೇಕಡ 6.4 ರಷ್ಟು ಇದೆ.. 2025-26ನೇ ಸಾಲಿನಲ್ಲಿ ದೇಶದ GDP ಶೇಕಡ 6.3ರಿಂದ ಶೇಕಡ 6.8ಕ್ಕೆ ತಲುಪುವ ನಿರೀಕ್ಷೆಯಿದೆ.. ದೇಶದ ವಿದೇಶಿ ವಿನಿಮಯ ಪ್ರಮಾಣ 640.3 ಶತಕೋಟಿ ಡಾಲರ್ ಇದ್ದು ಜಾಗತಿಕ ಪ್ರತಿಕೂಲ ಪರಿಸ್ಥಿತಿ ನಿಭಾಯಿಸಲು ಬುದ್ಧಿವಂತಿಕೆ ನೀತಿ ಅಗತ್ಯವಿದೆ ಅನ್ನೋ ಅಂಶವಿದೆ.. ಆರ್ಥಿಕ ಅನಿಶ್ಚಿತತೆ ಕಾರಣದಿಂದ ಹಣದುಬ್ಬರದ ಅಪಾಯಗಳು ಇವೆ.. ಭಾರತವು ಜಾಗತಿಕ ಸ್ಪರ್ಧಾತ್ಮಕತೆ ವಿಚಾರದಲ್ಲಿ ಸುಧಾರಿಸುವ ಅಗತ್ಯವಿದೆ.. ಮುಂದಿನ 2 ದಶಕಗಳ ಕಾಲ ಮೂಲಸೌಕರ್ಯ ಹೂಡಿಕೆ ಅಗತ್ಯವಿದೆ. ಕಾರ್ಪೊರೇಟ್ ವಲಯ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕು ಅಂತಾ ಹೇಳಲಾಗಿದೆ.

ದೇಶದಲ್ಲಿ ಇನ್ಮುಂದೆ ಹವಾಮಾನ ವೈಪರಿತ್ಯದಿಂದ ಬೆಳೆ ಹಾನಿ ಆಗುವುದನ್ನು ಕಡಿಮೆ ಮಾಡ್ಬೇಕು. ಬೇಳೆ ಕಾಳುಗಳು, ಎಣ್ಣೆ ಕಾಳುಗಳು, ಟೊಮೆಟೊ, ಈರುಳ್ಳಿ ಉತ್ಪಾದನೆ ಹೆಚ್ಚಿಸಬೇಕು. 2 ದಶಕಗಳ ಕಾಲ ಸರಾಸರಿ ಶೇಕಡ 8ರಷ್ಟು ಬೆಳವಣಿಗೆ ಹೊಂದುತ್ತಾ ಸಾಗಿದರೆ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಹಕಾರಿ ಆಗುತ್ತೆ ಅಂತ ಸಲಹೆ ನೀಡಲಾಗಿದೆ. ದೇಶದ ಬೆಳವಣಿಗೆಗಾಗಿ ಹೂಡಿಕೆ ಪ್ರಮಾಣ ಶೇಕಡ 31 ರಿಂದ ಶೇಕಡ 35ಕ್ಕೆ ಹೆಚ್ಚಿಸಬೇಕು.. ಉತ್ಪಾದನಾ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು AI ಬಳಕೆ ಅಗತ್ಯವಿದೆ. ರೊಬೊಟಿಕ್ಸ್ & ಜೈವಿಕ ತಂತ್ರಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಅಗತ್ಯ ಅಂತಾನೂ ಸಲಹೆ ಕೊಟ್ಟಿದ್ದಾರೆ..




