• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಮದರ್ ಥೆರೆಸಾರ ಚಾರಿಟಿಯ ಪರವಾನಗಿ ನವೀಕರಿಸಿದ ಕೇಂದ್ರ : ಬ್ರಿಟನ್ ಸಂಸತ್ತಿನ ಟೀಕೆಗೆ ಬೆದರಿತೇ ಸರ್ಕಾರ?

ಫಾತಿಮಾ by ಫಾತಿಮಾ
January 10, 2022
in ದೇಶ
0
ಮದರ್ ಥೆರೆಸಾರ ಚಾರಿಟಿಯ ಪರವಾನಗಿ ನವೀಕರಿಸಿದ ಕೇಂದ್ರ : ಬ್ರಿಟನ್ ಸಂಸತ್ತಿನ ಟೀಕೆಗೆ ಬೆದರಿತೇ ಸರ್ಕಾರ?

Nuns belonging to the global Missionaries of Charity, walk past a large banner of Mother Teresa ahead of her canonisation ceremony, in Kolkata, India September 3, 2016. Reuters/Rupak De Chowdhuri

Share on WhatsAppShare on FacebookShare on Telegram

ADVERTISEMENT

ಕೇಂದ್ರ ಗೃಹ ಸಚಿವಾಲಯವು ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ನೋಂದಣಿಯನ್ನು ಮರುಸ್ಥಾಪಿಸಿದೆ. MoC ಅಗತ್ಯ ದಾಖಲೆಗಳನ್ನು ಕೆಲವು ದಿನಗಳ ಹಿಂದೆ ಸಂಬಂಧಿಸಿದ ಇಲಾಖೆಗೆ ಸಲ್ಲಿಸಿದೆ. ಆದ್ದರಿಂದ ಅದರ ಲೈಸನ್ಸ್ ನವೀಕರಿಸಲಾಗಿದೆ ಸರ್ಕಾರಿ ಮೂಲಗಳು ಶನಿವಾರ ತಿಳಿಸಿವೆ. ಇದರೊಂದಿಗೆ ಕೋಲ್ಕತ್ತಾ ಮೂಲದ ಸಂಸ್ಥೆಯು ಈಗ ವಿದೇಶಿ ನಿಧಿಯನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ ಮತ್ತು ಬ್ಯಾಂಕ್‌ಗಳ ಖಾತೆಯಲ್ಲಿರುವ ಹಣವನ್ನು ಖರ್ಚು ಮಾಡಬಹುದು ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಸೆಂಬರ್ 27, 2021 ರಂದು, ಮಿಷನರೀಸ್ ಆಫ್ ಚಾರಿಟಿಯ FCRA ನವೀಕರಣ ಅರ್ಜಿಯನ್ನು “ಅರ್ಹತಾ ಷರತ್ತುಗಳನ್ನು ಪೂರೈಸದ ಕಾರಣ” ಮತ್ತು “ಕೆಲವು ವ್ಯತಿರಿಕ್ತ ಮಾಹಿತಿಗಳು ದೊರೆತ ಕಾರಣ” ಅನುಮೋದಿಸಿಲ್ಲ ಎಂದು ಕೇಂದ್ರವು ಹೇಳಿತ್ತು. ಮಿಷನರೀಸ್ ಆಫ್ ಚಾರಿಟಿಯ ಸುಪೀರಿಯರ್ ಜನರಲ್ ಸಿಸ್ಟರ್ ಎಂ ಪ್ರೇಮಾ ಕೂಡ ತನ್ನ ಎಫ್‌ಸಿಆರ್‌ಎ ನವೀಕರಣ ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ದೃಢಪಡಿಸುವ ಹೇಳಿಕೆಯನ್ನು ನೀಡಿದ್ದರು. ವಿಷಯ ಬಹಿರಂಗವಾದ ನಂತರ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮಿಷನರೀಸ್ ಆಫ್ ಚಾರಿಟಿಯ ಬ್ಯಾಂಕ್ ಖಾತೆಗಳನ್ನು “ಫ್ರೀಜ್” ಮಾಡಿದ ಆರೋಪಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಆದರೂ ಸರ್ಕಾರ ನೋಂದಣಿಯನ್ನು ನವೀಕರಿಸದೆ ಉದ್ದಟತನ ತೋರಿತ್ತು.

ಈಗ ಅದೇ ಸರ್ಕಾರ ದಿಢೀರನೆ ತನ್ನ ನಿರ್ಧಾರ ಬದಲಿಸಿ ನೋಂದಣಿ ನವೀಕರಿಸಿದೆ. ಇದರ ಹಿಂದೆ ಬ್ರಿಟನ್ನಿನ ಸಂಸದರ ಒತ್ತಾಯ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಮದರ್ ತೆರೇಸಾ ಅವರು ಸ್ಥಾಪಿಸಿದ ಚಾರಿಟಿ ಸೇರಿದಂತೆ 6000 ಕ್ಕೂ ಹೆಚ್ಚು ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಗಿಯನ್ನು ನಿರ್ಬಂಧಿಸಿದ್ದಕ್ಕಾಗಿ ಯುಕೆ ಸಂಸತ್ತು ಗುರುವಾರ ಭಾರತವನ್ನು ಕಟುವಾಗಿ ಟೀಕಿಸಿತ್ತು.

ಈ ಬಗ್ಗೆ ಬ್ರಿಟನ್ ಏನು ಮಾಡುತ್ತಿದೆ ಎಂದು ಅಲ್ಲಿನ ಸಂಸದರು ಸರ್ಕಾರವನ್ನು ಪ್ರಶ್ನಿಸಿದರು. ಕಮ್‌ನಾಕ್‌ನ ಲಾರ್ಡ್ ಫೌಲ್ಕ್ಸ್ ಅವರು ಇಂಗ್ಲೆಂಡ್ ಕಾಮನ್‌ವೆಲ್ತ್ ಸೆಕ್ರೆಟರಿಯೇಟ್‌ನಂತಹ ಬಹುಪಕ್ಷೀಯ ಗುಂಪುಗಳನ್ನು ಈ ವಿಚಾರದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು. ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಲಿವರ್‌ಪೂಲ್‌ನ ಲಾರ್ಡ್ ಆಲ್ಟನ್ ಈ “ಅನೀತಿಯುತ ನಿರ್ಧಾರ” ಹಿಂತೆಗೆದುಕೊಳ್ಳದಿದ್ದರೆ ಭಾರತದ ಅತ್ಯಂತ ದುರ್ಬಲ ವರ್ಗದ ಜನರ ಬದುಕಿನ ಮೇಲೆ ಭಯಾನಕ ಪರಿಣಾಮಗಳು ಉಂಟಾಗಬಹುದು ಎಂದು ಎಚ್ಚರಿಸಿದ್ದರು.

ಇಡೀ ಚರ್ಚೆಯನ್ನು ಆರಂಭಿಸಿದ ಪೆಂಟ್ರೆಗಾರ್ತ್‌ನ ಲಾರ್ಡ್ ಹ್ಯಾರಿಸ್ ” ಹಿಂದೂ ರಾಷ್ಟ್ರೀಯವಾದದ ಒತ್ತಡವು ಸರ್ಕಾರದ ಈ ನಿರ್ಧಾರದ ಹಿಂದಿದೆ ಎನ್ನುವ ವದಂತಿ ಇದೆ. ಏಕೆಂದರೆ ಜನರು ಕ್ರಿಶ್ಚಿಯನ್ ಧರ್ಮದೊಂದಿಗೆ ಸಂಪರ್ಕಕ್ಕೆ ಬರಬಹುದು ಮತ್ತು ಅಂತಿಮವಾಗಿ ಅದಕ್ಕೆ ಮತಾಂತರಗೊಳ್ಳಬಹುದು ಎಂದು ಅವರು ಭಾವಿಸುತ್ತಾರೆ. ಸರ್ಕಾರ ಕೊಟ್ಟಿರುವ ಕಾರಣವೇನು ಎನ್ನುವುದನ್ನು ನಾವು ಭಾರತ ಸರ್ಕಾರದಿಂದ ಲಿಖಿತವಾಗಿ ಪಡೆಯಬೇಕು” ಎಂದಿದ್ದಾರೆ. ಈ ಹೇಳಿಕೆ ದೇಶ ವಿದೇಶಗಳಲ್ಲಿ ಸಂಚಲನ ಸೃಷ್ಟಿಸಿದ್ದು ಸರ್ಕಾದ ಅಜೆಂಡಾವನ್ನು ಜಗಜ್ಹಾಹೀರು ಮಾಡಿದೆ. ಆ ಮೂಲಕ ಭಾರತೀಯ ಉದಾತ್ತ ಮೌಲ್ಯ, ಘನತೆ, ಪ್ರತಿಷ್ಠೆಗಳನ್ನು ಕೇವಲ‌ ಒಂದು ಸಂಘಟನೆಯ ಆಶೋತ್ತರಗಳನ್ನು ಈಡೇರಿಸಲು ಮಣ್ಣುಪಾಲು ಮಾಡಿದಂತಾಗಿದೆ. ಇಡೀ ಘಟನೆಯ ಹಿಂದೆ ಸಂಘ ಪರಿವಾರ ಹಿಂದಿನಿಂದಲೂ ಮದರ್ ಥೆರೆಸಾ ಮತ್ತು ಅವರ ಮಿಷನರಿಯ ಬಗ್ಗೆ ಹೊಂದಿರುವ ಅಸಹನೆ ಕೆಲಸ ಮಾಡಿದೆ ಎನ್ನುವುದು ಬಹಿರಂಗ ಸತ್ಯ. ಈಗೇನೋ ಸರ್ಕಾರ ಜಾಗತಿಕವಾಗಿ ಇನ್ನಷ್ಟು ಮುಖಭಂಗವಾಗುವುದನ್ನು ತಪ್ಪಿಸಲು ಅನುಮತಿ ನವೀಕರಣ ಮಾಡಿದೆ. ಆದರೆ ಈಗಾಗಲೇ ಸರ್ಕಾರವೇ ಮುಂದೆ ನಿಂತು ತನ್ನ ಕೈಯಾರೆ ಹಾಳುಗೆಡವಿದೆ ದೇಶದ ಘನತೆ ಮತ್ತು ಉದಾರತೆಯನ್ನು ಮರು ಸ್ಥಾಪಿಸುವುದಾದರೂ ಹೇಗೆ?

Tags: ಕರ್ನಾಟಕಕೋಲ್ಕತ್ತಾನ್ಯಾಯಾಲಯಪರವಾನಗಿಬ್ರಿಟನ್‌ಮದರ್ ಥೆರೆಸಾಮಿಷನರೀಸ್ ಆಫ್ ಚಾರಿಟಿ
Previous Post

ಬಂಡಾಯ ಸಾಹಿತಿ ಚಂಪಾ ಅವರಿಗೆ ನುಡಿ ನಮನ

Next Post

ಇಂದಿನಿಂದ ಬೂಸ್ಟರ್‌ ಡೋಸ್‌ ಲಸಿಕೆ : ರಾಜ್ಯ 21 ಲಕ್ಷ ಮಂದಿಗೆ ಮೂರನೇ ಡೋಸ್‌ ವ್ಯಾಕ್ಸಿನ್!

Related Posts

Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
0

ಹಾಸನ ಜಿಲ್ಲೆಯ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ರಾಜ್ಯದಲ್ಲಿ ಮೂರು ಸಾವಿರ ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ...

Read moreDetails

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ಇಂದಿನಿಂದ ಬೂಸ್ಟರ್‌ ಡೋಸ್‌ ಲಸಿಕೆ : ರಾಜ್ಯ 21 ಲಕ್ಷ ಮಂದಿಗೆ ಮೂರನೇ ಡೋಸ್‌ ವ್ಯಾಕ್ಸಿನ್!

ಇಂದಿನಿಂದ ಬೂಸ್ಟರ್‌ ಡೋಸ್‌ ಲಸಿಕೆ : ರಾಜ್ಯ 21 ಲಕ್ಷ ಮಂದಿಗೆ ಮೂರನೇ ಡೋಸ್‌ ವ್ಯಾಕ್ಸಿನ್!

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada