ʻಸಾಮಾಜಿಕ ಜಾಲತಾಣʼ.. ಇಡೀ ಮಾನವ ಸಂಕುಲವನ್ನೇ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಮಾಧ್ಯಮ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು, ವಯೋ ವೃದ್ಧರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇನ್ನು ಸೆಲೆಬ್ರಿಟಿಗಳು, ರಾಜಕೀಯ ಮುಖಂಡರು, ಕ್ರೀಡಾಪಟುಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರ್ತಾರೆ. ಟ್ವಿಟರ್ನಲ್ಲಿ ಸೆಲೆಬ್ರಿಟಿಗಳ ಅಕೌಂಟ್ನ್ನ ಸುಲಭವಾಗಿ ಗುರುತಿಸೋಕೆ ಸಹಕಾರಿ ಆಗ್ತಿದಿದ್ದು ಬ್ಲೂಟಿಕ್ನಿಂದ. ಸೆಲೆಬ್ರಿಟಿಗಳ ನಕಲಿ ಖಾತೆ ಯಾವ್ದು? ಮತ್ತು ಅಸಲಿ ಖಾತೆ ಯಾವುದು ಅಂತ ಆ ಬ್ಲೂಟಿಕ್ನಿಂದ ಸುಲಭವಾಗಿ ಗೊತ್ತಾಗ್ತಿತ್ತು.
ಆದ್ರೀಗ ಅನೇಕ ಸಿನಿ ತಾರೆಯರು, ರಾಜಕೀಯ ಮುಖಂಡರು ಹಾಗೂ ಕ್ರೀಡಾಪಟುಗಳ ಟ್ವಿಟರ್ ಬ್ಲೂಟಿಕ್ ಏಪ್ರಿಲ್ 20ರ ರಾತ್ರಿಯಿಂದಲೇ ಕಳೆದುಕೊಂಡಿದ್ದಾರೆ. ಅವರು ಮರಳಿ ಬ್ಲೂಟಿಕ್ ಪಡೆಯಬೇಕು ಅಂದ್ರೆ ಹಣ ಪಾವತಿ ಮಾಡಬೇಕು. ಏಪ್ರಿಲ್ 20ರಿಂದ ಈ ನಿಯಮ ಜಾರಿಗೆ ಬಂದಿರೋದ್ರಿಂದ ಸೆಲೆಬ್ರಿಟಿಗಳ ಖಾತೆಯೂ ಕೂಡ ಜನಸಾಮಾನ್ಯರ ಖಾತೆಯಂತಾಗಿದೆ.
ನಟರಾದ ಯಶ್, ಅಲ್ಲು ಅರ್ಜುನ್, ಶಾರುಖ್ ಖಾನ್, ಅಮಿತಾಭ್ ಬಚ್ಚನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದಂತೆ ಅನೇಕರ ಬ್ಲೂಟಿಕ್ ಮಾಯವಾಗಿದ್ದು, ಬ್ಲೂಟಿಕ್ ಬೇಕೆಂದರೆ ಹಣ ಕಟ್ಟಲೇ ಬೇಕಾಗಿದೆ.