ICICI ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ(CEO) ಚಂದಾ ಕೊಚ್ಚರ್-ದೀಪಕ್ ಕೊಚ್ಚರ್, ವಿಡಿಯೋಕಾನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ್ ಧೂತ್ರನ್ನು ಸಿಬಿಐ ನ್ಯಾಯಾಲಯವು 14 ದಿನಗಳ ಕಾಲ ಅಂದರೆ ಜನವರಿ 10ರವರೆಗೆ ನ್ಯಾಯಾಂಗ ವಶಕ್ಕೆ ನೀಡಿ ಅದೇಶಿಸಿದೆ.
ಬ್ಯಾಂಕ್ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ICICI ಬ್ಯಾಂಕ್ ಮಾಜಿ CEO ಚಂದಾ ಕೊಚ್ಚಾರ್ ಹಾಗೂ ಅವರ ಪತಿ ದೀಪಕ್ ಕೊಚ್ಚಾರ್ರನ್ನು ಕಳೆದ ಶುಕ್ರವಾರ ಸಿಬಿಐ ಬಂಧಿಸಿತ್ತು. ಸೋಮವಾರ ವಿಡಿಯೋಕಾನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ್ ಧೂತ್ರನ್ನು ಬಂಧಿಸಿತ್ತು.
ಬ್ಯಾಂಕ್ನ ಕ್ರೆಡಿಟ್ ಪಾಲಿಸಿ, RBIನಿಯಮ ಹಾಗೂ ಮಾರ್ಗಸೂಚಿಗಳನ್ನ ಗಾಳಿಗೆ ತೂರಿ ವಿಡಿಯೋಕಾನ್ ಗ್ರೂಪ್ಗೆ 3,250 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿಸಿಕೊಂಡು ಕೆಲ ತಿಂಗಳ ನಂತರ ನ್ಯೂಪವರ್ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರು.