ವಾಲ್ಮಿಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಆರೋಪ ಪ್ರರಕಣಕ್ಕೆ ಸಂಭಂದಪಟ್ಟಂತೆ ಪ್ರಕರಣದಲ್ಲಿ ಆರೋಪಿಗಳಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಇದೀಗ ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ ಎಂಟ್ರಿ (ED) ಕೊಟ್ಟಿದೆ. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಹಿನ್ನಲೆ,ಪ್ರಕರಣದಲ್ಲಿ ಇಸಿಐಆರ್ (ECIR) ಇಡಿ ದಾಖಲಿಸಿಕೊಂಡಿದೆ.
ಆದರಂತೆ ಕೋರ್ಟ್ ನಲ್ಲಿ ಆರೋಪಿಗಳ ವಿಚಾರಣೆಗೆ ಇಡಿ ಮನವಿ ಮಾಡಿದ್ದು, ಕೋರ್ಟ್ ಅನುಮತಿಯಂತೆ ಆರೋಪಿಗಳ ಬಂಧಿತ ಆರೋಪಿಗಳ ವಿಚಾರಣೆ ನಡೆಸಿದೆ.ಈಗಾಗಲೇ ಈ ಪ್ರಕರಣದಲ್ಲಿ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪದ್ಮನಾಭ ಸೇರಿದಂತೆ 3 ಆರೋಪಿಗಳ ವಿಚಾರಣೆಯನ್ನ ಜಾರಿ ನಿರ್ದೇಶನಾಯದ ಅಧಿಕಾರಿಗಳು ನಡೆಸಿದ್ದಾರೆ.
ಈಗಾಗಲೇ ಈ ಪ್ರಕರಣದಲ್ಲಿ ಒಂದೆಡೆ ಎಸ್ಐಟಿ (SIT) ಟೀಂ ತನಿಖೆ ಮಾಡ್ತಾಯಿದೆ. ಈ ನಡುವೆ ಇಡಿ ಅಧಿಕಾರಿಗಳಿಂದ ಹವಾಲ ವರ್ಗಾವಣೆ ಬಗ್ಗೆ ವಿಚಾರಣೆಗೆ ಮುಂದಾಗಿದ್ದಾರೆ. ಸದ್ಯ ಜೈಲಿನಲ್ಲಿ ಇರೋ ಆರೋಪಿಗಳ ವಿಚಾರಣೆ ನಡೆಸಿದ ಇಡಿ, ನಿನ್ನೆ ಪದ್ಮನಾಭ್ (Padhmanabh) ಮತ್ತು ಪರುಶರಾಮ್ (Parashuram) ಹೇಳಿಕೆ ದಾಖಲಿಸಿಕೊಂಡಿದೆ.
ಈಗಾಗಲೇ ಸಿಬಿಐ (CBI) ಕೂಡ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಇತ್ತಾ ಇಡಿ ಕೂಡ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದೆ.ಇದು ಪ್ರಕರಣ ಹಿಂದಿನ ರಾಜಕಾರಣಿಗಳಿಗೆ ನಡುಕ ಶುರುಮಾಡಿದೆ.