ನಮ್ಮ ನಗು ಹಾಗೂ ಅಂದವನ್ನು ಹೆಚ್ಚು ಮಾಡುವಲ್ಲಿ ಹಲ್ಲುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ..ನಾವು ನಕ್ಕಾಗ ಜನ ನೋಡುವುದು ನಮ್ಮ ಹಲ್ಲುಗಳನ್ನು.ನಮ್ಮ ಹಲ್ಲುಗಳು ಸ್ವಚವಾಗಿ ಇರಬೇಕು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಕಾಡುವ ಸಮಸ್ಯೆ ಅಂದ್ರೆ ಹಲ್ಲು ಹುಳುಕು..ಅಬ್ಬಬ್ಬಾ ಹಲ್ಲು ಹುಳುಕಾದರೆ ನೋವು ಹೆಚ್ಚಿರುತ್ತದೆ, ಯಾವುದೇ ಪದಾರ್ಥಗಳನ್ನು ತಿನ್ನಲು ಸಾಧ್ಯವಾಗುವುದಿಲ್ಲ, ಬಾಯಿಯ ದುರ್ವಾಸನೆ ಹೀಗೆ ಒಂದಿಷ್ಟು ಸಮಸ್ಯೆ ಕಾಡುತ್ತದೆ. ಹಲ್ಲು ಹುಡುಕಲು ಸ್ವಚ್ಛತೆ ಮಾತ್ರವಲ್ಲದೆ ನಾವು ಸೇವಿಸುವ ಪದಾರ್ಥಗಳು ಕೂಡ ಕಾರಣವಾಗುತ್ತದೆ ಹಾಗಾದ್ರೆ ಯಾವ ಪದಾರ್ಥವನ್ನು ಅತಿಯಾಗಿ ತಿನ್ನುವುದರಿಂದ ಹಲ್ಲು ಹುಳುಕಾಗುತ್ತದೆ ಅನ್ನೋದರ ಮಾಹಿತಿ ಹೀಗಿದೆ ನೋಡಿ.

- ಸಕ್ಕರೆ ಅಂಶ ಹೆಚ್ಚಿರುವ ಪದಾರ್ಥಗಳು, ಅದರಲ್ಲೂ ಮಿಠಾಯಿ, ಕೇಕ್ ,ಚಾಕಲೇಟ್, ಕ್ಯಾಂಡಿ ಬಿಸ್ಕೆಟ್ ಹಾಗೂ ಅಂಟಿರುವ ಸ್ವೀಟ್ ಗಳನ್ನು ಹೆಚ್ಚಾಗಿ ತಿನ್ನೋದ್ರಿಂದ ಹಲ್ಲುಗಳು ಬೇಗನೆ ಹುಳುಕಾಗುತ್ತದೆ.
- ಅಸಿಡಿಕ್ ಅಂಶ ಹೆಚ್ಚಿರುವ ಪದಾರ್ಥಗಳು ಅವುಗಳಲ್ಲಿ ಟೊಮ್ಯಾಟೋ ವಿನಿಗರ್ ಸಿಟ್ರಿಕ್ ಹಣ್ಣುಗಳು ಅಂದ್ರೆ ದ್ರಾಕ್ಷಿ ಕಿತ್ತಲೆ ಹಣ್ಣು ಹೀಗೆ ಹುಳಿ ಅಂಶ ಇರುವ ಪದಾರ್ಥಗಳನ್ನು ತಿನ್ನುವುದರಿಂದ ಕ್ಯಾವಿಟಿ.
- ಪಾಸ್ತಾ,ಆಲೂಗೆಡ್ಡೆ,ಬಿಳಿ ಬ್ರೆಡ್ ಇಂತಹ ಪಿಷ್ಟ ಆಹಾರಗಳು ಹಲ್ಲುಗಳನ್ನು ಬೇಗ ಹುಳುಕು ಮಾಡುತ್ತದೆ..
- ಎಣ್ಣೆಯಲ್ಲಿ ಕರೆದ ಪದಾರ್ಥಗಳನ್ನ ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದಲ್ಲ ಹಾಗೂ ಹಲ್ಲಿನ ಆರೋಗ್ಯವನ್ನ ಕೂಡ ಹಾಳು ಮಾಡುತ್ತದೆ.ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಲಬೆರಿಕೆ ಎನ್ನೆಗಳು ಅತಿಯಾಗಿ ಮಾರಾಟವಾಗುತ್ತಿರುವುದರಿಂದ ಆರೋಗ್ಯ ಹದಗೆಡುತ್ತಿದೆ.
- ಕೋಲ್ಡ್ ಜ್ಯೂಸ್ ಅಥವಾ ಫ್ರೆಶ್ ಜ್ಯೂಸ್ ಹಾಗೂ ಪ್ರೆಸೆರ್ವೆಟಿವ್ ಜ್ಯೂಸ್ ಗಳನ್ನು ಅತಿಯಾಗಿ ಕುಡಿಯುವುದರಿಂದ ಹಲ್ಲುಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.

ಇಷ್ಟು ಮಾತ್ರವಲ್ಲದೇ ಪ್ರತಿದಿನ ನಾವು ದಿನಕ್ಕೆ ಎರಡು ಬಾರಿ ಹಲ್ದನ್ನ ಉಜ್ಜುವುದರಿಂದ ಹಲ್ಲಿನ ಆರೋಗ್ಯ ಉತ್ತಮವಾಗಿರುತ್ತದೆ. ಊಟ ತಿಂಡಿ ಯಾವುದೇ ಪದಾರ್ಥವನ್ನು ಸೇವಿಸಿದ ನಂತರ ಬಾಯಿ ತೊಳೆಯುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಇದರಿಂದ ಬಾಯಿ ಹಾಗೂ ಹಲ್ಲಿನ ಆರೋಗ್ಯ ಸರಿಯಿರುತ್ತದೆ.