ಅಖಿಲ ಭಾರತ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (AIMIM) ಅಧ್ಯಕ್ಷರು ಹಾಗೂ ಸಂಸದರೂ ಆಗಿರುವ ಅಸಾದುದ್ದೀನ್ ಒವೈಸಿ ಅವರು, ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿಗತಿಗಳ ಕುರಿತು ಪ್ರಧಾನಿ ಮೋದಿಯವರ ಮೌನವನ್ನು ಟೀಕಿಸಿದ್ದಾರೆ. ಐಎಸ್ಐ ಹಿಡಿತದಲ್ಲಿರುವ ತಾಲಿಬಾನ್ ಅನ್ನು ಯಾವುದೇ ಸಂದರ್ಭದಲ್ಲಿಯೂ ಭಾರತದ ವಿರುದ್ದ ಪಾಕಿಸ್ತಾನ ಬಳಸಿಕೊಳ್ಳಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದ್ದಾರೆ. ಹೈದಾರಾಬಾದ್’ನಲ್ಲಿ ಮೊಹರಂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿರುವ ಒವೈಸಿ, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿರುವುದು ಪಾಕಿಸ್ತಾನಕ್ಕೆ ವರದಾನವಾಗಿದೆ. ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ತಾಲಿಬಾನ್ ಅನ್ನು ಸೂತ್ರದ ಗೊಂಬೆಯಂತೆ ಬಳಸಿಕೊಳ್ಳುತ್ತದೆ, ಎಂದಿದ್ದಾರೆ. “ಅಲ್ ಖೈದ ಹಾಗೂ ದಯೇಶ್’ನಂತಹ ಭಯೊತ್ಪಾದಕ ಸಂಘಟನೆಗಳು ಈಗಾಗಲೇ ಅಫ್ಘಾನಿಸ್ತಾನ್ ಸೇರಿ ಆಗಿದೆ. ಐಎಎಸ್ಐ ಮೇಲ್ವಿಚಾರಿಕೆಯಲ್ಲಿ ಇದೆಲ್ಲಾ ನಡೆಯುತ್ತಿದೆ. ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಚೀನಾ ಕೂಡಾ ಈ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ,” ಎಂದಿದ್ದಾರೆ. ಕಾಬುಲ್ ಮುಖಾಂತರ ಇರಾನ್’ಗೆ ಅಂತರಾಷ್ಟ್ರೀಯ ಹೆದ್ದಾರಿ ನಡೆಸಲು ಚೀನಾ ದೇಶಕ್ಕೆ ಪಾಕಿಸ್ತಾನ ನೆರವಾಗಲಿದೆ. ಇದನ್ನು ತಡೆಯಲು ನೀವೇನು ಮಾಡುತ್ತಿದ್ದೀರಾ? ಕ್ವಾಡ್ ಒಪ್ಪಂದದ ಪ್ರಕಾರ ರಷ್ಯಾ, ಉಜ್ಬೇಕಿಸ್ತಾನ್, ತುರ್ಕ್ಮೆನಿಸ್ತಾನ್, ತಜೆಕಿಸ್ತಾನ್ ದೇಶಗಳು ಕಾಬುಲ್ ಗೆ ರಸ್ತೆ ಸಂಪರ್ಕ ಹೊಂದಲು ಸಾಧ್ಯವಿಲ್ಲ. ಅಮೇರಿಕಾದ ಕಾರಣದಿಂದ ಇಷ್ಟೆಲ್ಲಾ ನಡೆದಿದೆ. ನೀವು ಡೊನಾಲ್ಡ್ ಟ್ರಂಪ್ ಅವರನ್ನು ಅಪ್ಪಿಕೊಳ್ಳುವಲ್ಲಿ ನಿರತರಾಗಿದ್ರಿ, ಎಂದು ಪ್ರಧಾನಿ ಮೋದಿ ವಿರುದ್ದ ಒವೈಸಿ ಕಿಡಿಕಾರಿದ್ದಾರೆ. ಇದರೊಂದಿಗೆ ಮುಂಬರುವ ದಿನಗಳಲ್ಲಿ ಪಾಕಿಸ್ತಾನ, ಚೀನಾ ಹಾಗೂ ತಾಲಿಬಾನ್ ನಿಂದ ದೇಶಕ್ಕೆ ಒದಗಿ ಬರಲಿರುವ ಆಪತ್ತಿನ ಕುರಿತು ಈಗಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಒವೈಸಿ, ಆದಷ್ಟು ಶೀಘ್ರದಲ್ಲಿ ದೇಶದ ನಿಲುವು ಸ್ಪಷ್ಟಪಡಿಸುವಂತೆ ಕೇಳಿದ್ದಾರೆ.
Read moreDetailsಹೊಸ ತಾಲಿಬಾನ್ ಸರ್ಕಾರದಲ್ಲಿ ಮಹಿಳೆಯರು ಭಾಗಿಯಾಗಲಿದ್ದಾರೆ ಎಂಬ ಹೇಳಿಕೆ ಹೊರಬಿದ್ದಾಗ ಇಡೀ ಪ್ರಪಂಚ ಅವರನ್ನು ಅನುಮಾನದ ಕಣ್ಣಿಂದ ನೋಡಿತ್ತು. ಈಗ ಅಫ್ಘಾನ್‌ನ ಮಹಿಳಾ ಪತ್ರಕರ್ತೆಯೊಬ್ಬರು ತಾಲಿಬಾನ್ ಆ...
Read moreDetailsತಮಿಳುನಾಡು ಸರ್ಕಾರದೊಂದಿಗಿನ ಎಲ್ಲಾ ಸಂವಹನಗಳು "ಇಂಗ್ಲಿಷ್‌ನಲ್ಲಿ ಮಾತ್ರ" ಇರುವಂತೆ ನೋಡಿಕೊಳ್ಳಬೇಕೆಂದು ಮದ್ರಾಸ್ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಇದೇ ವೇಳೆ ಅಧಿಕೃತ ಭಾಷಾ ಕಾಯ್ದೆಯ ನಿಬಂಧನೆಗಳನ್ನು...
Read moreDetailsʻʻಮಕ್ಕಳ ಲಸಿಕೆ ಮೇಲಿನ ನಮ್ಮ ವೈದ್ಯಕೀಯ ಪ್ರಯೋಗ ಮುಕ್ತಾಯಗೊಂಡಿದೆ. ಮುಂದಿನ ಸೆಪ್ಟೆಂಬರ್ ಆರಂಭ ಅಥವಾ ಕೊನೆಯ ವೇಳೆಗೆ ನಮ್ಮ ಪ್ರಯೋಗದ ವರದಿ ಸಿದ್ಧಗೊಳ್ಳಲಿದೆ. ವಿಶೇಷ ಎಂದರೆ ಇಡೀ...
Read moreDetailsತಾಲಿಬಾನ್ ಉಗ್ರಗಾಮಿ ಸಂಘಟನೆ ಅಧಿಕಾರ ಹಿಡಿದ ಬಳಿಕ ಆಫ್ಘಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ, ತಾಲಿಬಾನ್ ಆಡಳಿತಕ್ಕೆ ನಾಗರಿಕ ಪ್ರತಿರೋಧ ಭುಗಿಲೇಳತೊಡಗಿದೆ. ಬುಧವಾರ, ಗುರುವಾರ ತಮ್ಮ ದೇಶದ ರಾಷ್ಟ್ರಧ್ವಜ ಹಿಡಿದು...
Read moreDetailsತೈಲ ಬಾಂಡ್ ಜಾರಿಗೆ ತಂದ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ದೇಶದ ಜನತೆಗೆ ಮಾಡಬಾರದ ಅನ್ಯಾಯ ಮಾಡಿಬಿಟ್ಟಿದೆ. ಅಂತಹ ವ್ಯವಸ್ಥೆ ಇಲ್ಲದೇ ಹೋಗಿದ್ದರೆ, ದೇಶದ ಜನತೆ...
Read moreDetailsಭಾರತ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಸಂಬಂಧ ಕೊಲಿಜಿಯಂ ಮಾಡಿದ ಶಿಫಾರಸುಗಳ ಬಗ್ಗೆ ಊಹಾತ್ಮಕ ವರದಿ ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್...
Read moreDetailsCBI ಕೇವಲ ಸಂಸತ್ತಿಗೆ ಉತ್ತರದಾಯಿತ್ವ ಹೊಂದಿರುವ ಸ್ವಾಯತ್ತ (autonomous) ಸಂಸ್ಥೆಯಾಗಿರಬೇಕೆಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಮಹತ್ತರವಾದ ಆದೇಶ ನೀಡಿದೆ. ಕೇಂದ್ರ ಸರ್ಕಾರದ ಆಧೀನದಲ್ಲಿರುವ ಸಿಬಿಐ ಅನ್ನು ಸ್ವತಂತ್ರ...
Read moreDetailsಆಗಸ್ಟ್ ಹದಿನೈದರಂದು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡುವುದರೊಂದಿಗೆ ತಾಲಿಬಾನ್ ಕಾಬೂಲನ್ನು ವಶಪಡಿಸಿಕೊಂಡು ಅಧಿಕೃತವಾಗಿ ಅಫ್ಘಾನ್ ಆಡಳಿತವನ್ನು ಕೈಗೆ ತೆಗೆದುಕೊಂಡಿತು. ಆದರೆ ತಾಲಿಬಾನ್ ಕಾಬೂಲ್ ಪ್ರವೇಶಿಸುತ್ತಿದ್ದಂತೆ...
Read moreDetailsಅಯೋಧ್ಯೆಯಲ್ಲಿ ಶ್ರೀರಾಮಮಂದಿರ (ShriRam Temple) ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಭಕ್ತರೊಬ್ಬರು ತನ್ನ ಭಕ್ತಿ ಪ್ರದರ್ಶಿಸಲು ಪ್ರಧಾನಿ ಮೋದಿಯವರ ದೇವಸ್ಥಾನ ಕಟ್ಟಿಸಿದ್ದಾರೆ. ಪುಣೆಯ ಔಂಧ್ ಪ್ರದೇಶದಲ್ಲಿ ನೂತನವಾಗಿ...
Read moreDetails2014ರಲ್ಲಿ ನಡೆದ ಸುನಂದ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಸಂಸದ ಶಶಿ ತರೂರ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಶಿ...
Read moreDetailsಅಫ್ಘಾನಿಸ್ತಾನದ ತಾಲೀಬಾನ್ ಜೊತೆ ಭಾರತವು ಹಿಂಬಾಗಿಲಿನಿಂದ ಮಾತುಕತೆ ನಡೆಸುತ್ತಿದೆ. ಭಾರತದ ಬದಲಾದ ನಿರ್ಣಾಯಕ ನೀತಿಪಲ್ಲಟದಲ್ಲಿ ಈ "ಹಿಂಬಾಗಿಲ ಮಾತುಕತೆ"ಯನ್ನು ಭಾರತವೇ ಒಪ್ಪಿಕೊಂಡಿದೆ ಜೂನ್ ಆರಂಭದಲ್ಲಿ ಅಫ್ಘಾನಿಸ್ತಾನದಿಂದ ಅಮೇರಿಕಾವು...
Read moreDetails2014ರಲ್ಲಿ ಆರ್ಎಸ್ಎಸ್ನ ಆಂತರಿಕ ಸಭೆಯೊಂದರಲ್ಲಿ ಮೋಹನ್ ಭಾಗವತ್, ʼಸಂಘಪರಿವಾರ ಜಾತಿ ನಿರ್ಮೂಲನೆ ಹಾಗೂ ಜಾತಿ ವಿರೋಧಿ ಹೇಳಿಕೆಗಳನ್ನು ಹಾಗೂ ನಡವಳಿಕೆಗಳನ್ನು ತೋರಬಾರದು. ಈ ಸಮಾಜ ಎಲ್ಲಿಯವರೆಗೆ ಜಾತಿಯನ್ನು...
Read moreDetailsಗುಜರಾತಿನ ಶವ ಸಂಸ್ಕಾರ ಕೇಂದ್ರಗಳಲ್ಲಿ ಕೈಲಾಶ್ ಮುಕ್ತಿ ಧಾಮ್ ಕೂಡಾ ಒಂದು. ಅದರಲ್ಲಿ ಮೃತದೇಹವನ್ನು ಹೊತ್ತಿಸುವ ನಾಲ್ಕು ಕುಲುಮೆಗಳಿವೆ. ದಿನದ 24 ಗಂಟೆಯೂ ಬಿಡುವಿಲ್ಲದೆ ನಿರಂತರ ಚಿತೆ...
Read moreDetailsತಾಲಿಬಾನಿಗಳ ವಿಷಯದಲ್ಲಿ ಏನನ್ನೂ ದಿಢೀರನೇ ನಿರ್ಧರಿಸುವ, ತತಕ್ಷಣದ ನಿಲುವಿಗೆ ಬರುವ ಸ್ಥಿತಿಯಲ್ಲಿ ಕೂಡ ಭಾರತ ಇಲ್ಲ. ನಿಜಕ್ಕೂ ಇದು ನುಂಗಲೂ ಆಗದ, ಉಗಿಯಲೂ ಆಗದ ಬಿಸಿ ತುಪ್ಪವನ್ನು...
Read moreDetailsತಾಲಿಬಾನ್ ಅಫ್ಘಾನಿಸ್ತಾನದ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೇಶಕ್ಕೆ ಬರಲು ಬಯಸುವ ಅಫಘಾನ್ ಪ್ರಜೆಗಳಿಗೆ ತುರ್ತು ಇ-ವೀಸಾ ನೀಡುವುದಾಗಿ ಭಾರತ ಆಗಸ್ಟ್ 17...
Read moreDetailsಅಫ್ಘನ್ ಅನ್ನು ತಮ್ಮ ಕೈವಶ ಪಡೆದುಕೊಂಡ ತಾಲಿಬಾನಿಗಳು ವಿಜಯೋತ್ಸವ ನಡೆಸುವ ವಿಡಿಯೋವೊಂದನ್ನು ಕೇರಳದ ತಿರುವಂತಪುರಂ ಸಂಸದ ಶಶಿ ತರೂರ್ ಹಂಚಿಕೊಂಡಿದ್ದು, ಅಲ್ಲಿಬ್ಬರು ಮಲಯಾಳಿ ತಾಲಿಬಾನಿಗಳಿರಬೇಕು ಎಂದು ಹೇಳಿದ್ದಾರೆ....
Read moreDetailsಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಪೂರ್ತಿ ಹಣ ತುಂಬಿದ ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್‌ನೊಂದಿಗೆ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿ ಸೋಮವಾರ...
Read moreDetailsತಾಲಿಬಾನ್ ಕ್ರೌರ್ಯದಿಂದ ಅತ್ತ ಅಫ್ಘಾನಿಸ್ತಾನ ತಲ್ಲಣಿಸಿ ಹೋಗಿದೆ. ತಾಲಿಬಾನಿಗಳ ಉಗ್ರವಾದಕ್ಕೆ ಅಫ್ಘಾನಿಸ್ತಾನವನ್ನು ಮೊತ್ತವಾಗಿ ವಶಪಡಿಸಿಕೊಂಡಿದ್ದಾರೆ. ಇದರ ನಡುವೆ ದೆಹಲಿಯ ಜೆಎನ್ಯೂ ಯೂನಿವೆರ್ಸಿಟಿಯ ಅಫ್ಘಾನ್ ವಿಧ್ಯಾರ್ಥಿಗಳಲ್ಲಿ ಇದೀಗ ತಳಮಳ...
Read moreDetailsಎರಡು ದಶಕಗಳ ಬಳಿಕ ಅಫ್ಘನಿನಲ್ಲಿ ತಾಲಿಬಾನ್ ಮತ್ತೆ ಮೇಲುಗೈ ಸಾಧಿಸಿಕೊಂಡಿದೆ. ಅಮೆರಿಕಾ ತನ್ನ ಸೇನೆಯನ್ನು ಹಿಂಪಡೆಯುತ್ತಿದ್ದಂತೆಯೇ ಅಂತರ್ಯುದ್ಧದಲ್ಲಿ ತೊಡಗಿದ ತಾಲಿಬಾನ್, ಅಮೆರಿಕಾದ ಸೇನೆ ಸಂಪೂರ್ಣವಾಗಿ ಅಫ್ಘನ್‌ನನ್ನು ತೊರೆಯುವ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada