ಚಿತ್ರದುರ್ಗದಲ್ಲಿ ಶಾಸಕ ಚಂದ್ರಪ್ಪ ಪುತ್ರ ರಘುಚಂನ್ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಬಂಡಾಯದ ಬಾವುಟ ಹಾರಿಸಲಾಗಿದ್ದು, ಏಪ್ರಿಲ್ 3ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಘೋಷಣೆ ಹೊರಬಿದ್ದಿತ್ತು. ಚಿತ್ರದುರ್ಗ ಬಿಜೆಪಿಯಲ್ಲಿ ಬಂಡಾಯ ಜೋರಾಗುತ್ತಿದ್ದಂತೆ ಅಖಾಡಕ್ಕಿಳಿದ ರಾಜ್ಯ ನಾಯಕರು, ಶಾಸಕ ಎಂ.ಚಂದ್ರಪ್ಪ ಹಾಗು ರಘುಚಂದನ್ ಮನವೊಲಿಸಿ ಬಂಡಾಯ ಶಮನಕ್ಕೆ ಕಸರತ್ತು ನಡೆಸಿದ್ದಾರೆ.

ಶಾಸಕ. ಎಂ ಚಂದ್ರಪ್ಪ ಮನೆಗೆ ರಾಜ್ಯ ಬಿಜೆಪಿ ವತಿಯಿಂದ MLC ರವಿಕುಮಾರ್ ಭೇಟಿ ಚರ್ಚೆ ನಡೆಸಿದ್ದಾರೆ. ಚಿತ್ರದುರ್ಗ ಪ್ರಶಾಂತ ನಗರದಲ್ಲಿನ ಶಾಸಕ ಚಂದ್ರಪ್ಪ ನಿವಾಸದಲ್ಲಿ ಸಭೆ ಮಾಡಿದ್ದು, ನಿನ್ನೆ ರಾತ್ರಿ ಶಾಸಕ ಚಂದ್ರಪ್ಪ ಮನೆಗೆ ಭೇಟಿ ನೀಡಿದ ವೇಳೆ ಚಂದ್ರಪ್ಪ ಮನಯಲ್ಲಿ ಇರಲಿಲ್ಲ. ಹೀಗಾಗಿ MLC ಎನ್.ರವಿಕುಮಾರ್ ಮತ್ತೊಮ್ಮೆ ಭೇಟಿ ನೀಡಿ, ಮನವೊಲಿಕೆ ಕಸರತ್ತು ಮಾಡಿದ್ದಾರೆ. ಎರಡನೇ ಸುತ್ತಿನ ಸಂಧಾನ ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಹಾಗೂ ಪುತ್ರ ರಘುಚಂದನ್ ಮಾತುಕತೆಯಲ್ಲಿ ಭಾಗಿಯಾಗಿದ್ದರು.
ಶಾಸಕ ಚಂದ್ರಪ್ಪ ನಿವಾಸದಲ್ಲಿ ರಹಸ್ಯ ಮಾತುಕತೆ ನಡೆಸಿದ ಬಳಿಕ MLC ರವಿಕುಮಾರ್ ಮಾತನಾಡಿ, ನಾನು ನಿನ್ನೆ ಬಂದಿದ್ದೆ, ನನಗೂ ಚಂದ್ರಪ್ಪಗೂ ಹಳೇ ಸಂಬಂಧ. ಯಡಿಯೂರಪ್ಪ ಜೊತೆ ದೀರ್ಘ ಕಾಲದಿಂದ ಬಿಜೆಪಿ ಪಾರ್ಟಿ ಕಟ್ಟಿದ್ದಾರೆ. ಅವರ ಜೊತೆ ಮಾತಾಡಿದ್ದೇನೆ ಹಲವು ವಿಷಯಗಳನ್ನ ಹೇಳಿದ್ದಾರೆ. ನಮ್ಮ ಪಾರ್ಟಿಯಲ್ಲಿ ಅವರು ಕಂಟಿನ್ಯೂ ಇರ್ತಾರೆ. ಲೋಕಸಭೆಯಲ್ಲಿ ಪಾರ್ಟಿಯನ್ನ ಗೆಲ್ಲಿಸ್ತಾರೆ, ಮೋದಿ ಪ್ರಧಾನಿಯಾಗುವ ವಿಚಾಕ್ಕೆ ವಿರೋಧವಿಲ್ಲ. ಅವರ ಅನೇಕ ವಿಚಾರಗಳಿವೆ. ಆ ಬಗ್ಗೆ ರಾಜ್ಯ ನಾಯಕರ ಜೊತೆ ಮಾತನಾಡಿ 2 ದಿನದಲ್ಲಿ ನಿಮಗೆ ವಿಷಯ ತಿಳಿಸುತ್ತೇವೆ ಎಂದಿದ್ದಾರೆ.

ಯಡಿಯೂರಪ್ಪ ಆಪ್ತ ಬಣದಲ್ಲಿ ಚಂದ್ರಪ್ಪ ಗುರ್ತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮಗನ ಭವಿಷ್ಯದ ಬಗ್ಗೆ ಯಡಿಯೂರಪ್ಪ ವಿಜಯೇಂದ್ರ ಆಶ್ವಾಸನೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದೇ ವಿಚಾರವಾಗಿ ರಾಜ್ಯ ನಾಯಕರ ಜೊತೆಗೆ ಚರ್ಚೆ ನಡೆಸಿ ಯಡಿಯೂರಪ್ಪ ಹಾಗು ವಿಜಯೇಂದ್ರ ಭೇಟಿ ಮಾಡಿಸುವ ಸಾಧ್ಯತೆಗಳಿವೆ. ಯಡಿಯೂರಪ್ಪ ಭೇಟಿ ಬಳಿಕ ಸಮಸ್ಯೆ ಇತ್ಯರ್ಥ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ನಾಳೆ ಅಥವಾ ನಾಡಿದ್ದು ಅಮಿತ್ ಷಾ ರಾಜ್ಯಕ್ಕೆ ಆಗಮಿಸುವ ಏಪ್ರಿಲ್ 2ರ ಒಳಗಾಗಿ ಚಂದ್ರಪ್ಪ ಜೊತೆಗೆ ಚರ್ಚೆ ಮಾಡುವ ಸಾಧ್ಯತೆಯಿದೆ.
ಕೃಷ್ಣಮಣಿ