ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ (LK advani) ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ (Bharath ratna) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದೇ ಭಾನುವಾರ ಮಾರ್ಚ್ ೩೧ರಂದು ಅವರ ನಿವಾಸದಲ್ಲಿ ಭಾರತ ರತ್ನ ಗೌರವ ಪ್ರಧಾನ ಮಾಡಲಾಗಿದೆ.

ರಾಷ್ಟ್ರಪತಿ ಧ್ರೌಪದಿ ಮುರ್ಮು, ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಅವರ ನಿವಾಸದಲ್ಲಿ ಪ್ರದಾನ ಮಾಡಿದರು. ಗೃಹ ಮಂತ್ರಿಯಾಗಿರಲಿ ಅಥವಾ ಉಪಪ್ರಧಾನಿಯಾಗಿರಲಿ, ಅಡ್ವಾಣಿ ಯಾವಾಗಲೂ ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದರು, ಪಕ್ಷದಲ್ಲಿ ಗೌರವ ಮತ್ತು ಮೆಚ್ಚುಗೆಯನ್ನು ಗಳಿಸಿದರು ಎಂದು ರಾಷ್ಟ್ರಪತಿ ಭವನ ಸರಣಿ ಟ್ವಿಟ್ ಮಾಡಿದೆ. ಸಮಾರಂಭದಲ್ಲಿ ಪ್ರಧಾನಿ ಮೋದಿ(Pm modi) , ಉಪರಾಷ್ಟ್ರಪತಿ ಜಗದೀಪ್ ಧನ್ವರ್(jagadeep dhankar), ರಕ್ಷಣಾ ಸಚಿವ ರಾಜನಾಥ್ ಸಿಂಗ್(Raajanath Singh), ಗೃಹ ಸಚಿವ ಅಮಿತ್ ಶಾ (Amit sha) ಮತ್ತು ಅಡ್ವಾಣಿ ಕುಟುಂಬಸ್ಥರು ಉಪಸ್ಥಿತರಿದ್ದರು.

96 ವರ್ಷದ ಅಡ್ವಾಣಿ ಅವರು 1980 ರ ದಶಕದ ಕೊನೆಯಲ್ಲಿ ಮತ್ತು 1990 ರ ದಶಕದ ಆರಂಭದಲ್ಲಿ ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರೀಯ ರಾಜಕೀಯ ಶಕ್ತಿಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು . ಅವರ 1990 ರ ರಥಯಾತ್ರೆಯನ್ನು ರಾಮ ಜನ್ಮಭೂಮಿ ಆಂದೋಲ ಇಂದು ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.