ಮುಂಬೈನಲ್ಲಿ ಬುಧವಾರ ಮಾಧ್ಯಮಗೋಷ್ಠಿಯ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪದ ಮೇಲೆ ಮುಂಬೈನ ಬಿಜೆಪಿ ಮುಖಂಡ ವಿವೇಕ್ ಗುಪ್ತಾ ಎಂಬುವವರು ಮಮತ ವಿರುದ್ಧ ದೂರು ದಾಖಲಿಸಿದ್ದಾರೆ.
ಮಾಧ್ಯಮಗೋಷ್ಠಿಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಬಿಜೆಪಿ ತೀರ್ವ ವಿರೋಧ ವ್ಯಕ್ತ ಪಡಿಸಿ ಪೋಲಿಸ್ ದೂರು ನೀಡಿದೆ. ವೈರಲ್ ಆದ ವಿಡಿಯೋದಲ್ಲಿ, ಮಮತಾ ಕುಳಿತ ಜಾಗದಲ್ಲಿ ಒಮ್ಮಿಂದೊಮ್ಮೆಲೆ ರಾಷ್ಟ್ರಗೀತೆಯನ್ನು ಹೇಳಲು ಶುರು ಮಾಡುತ್ತಾರೆ. ರಾಷ್ಟ್ರಗೀತೆ (ಹೇಳುತ್ತಾ ಮಧ್ಯದಲ್ಲಿಯೇ ಎದ್ದು ನಿಲ್ಲುತ್ತಾ ಮತ್ತೆ ರಾಷ್ಟ್ರಗೀತೆಯನ್ನು ಥಟ್ಟನೆ ಅರ್ಧಕ್ಕೆ ಮುಗಿಸುತ್ತಾರೆ.
ಮುಂಬೈ ಬಿಜೆಪಿಯ ಮುಖಂಡ ವಿವೇಕ್ ಗುಪ್ತಾ ಎಂಬುವವರು ಬ್ಯಾನರ್ಜಿ ವಿರುದ್ಧ “ರಾಷ್ಟ್ರಗೀತೆಗೆ ಸಂಪೂರ್ಣ ಅಗೌರವವನ್ನು ತೋರಿಸಿದ್ದಾರೆ” ಎಂದು ಆರೋಪಿಸಿ ದೂರು ದಾಖಲಿಸಿ. ಕಂಪ್ಲೆಂಟ್ ಲೆಟರ್ ಅನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ಧಾರೆ.
ಬುಧವಾರ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ, ಮುಂಬೈನಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಬಗ್ಗೆ ಚರ್ಚೆ ಮಾಡಿ ಸುದ್ದಿ ಗೋಷ್ಠಿಯಲ್ಲಿ ಈ ಅವಾಂತ ಮಾಡಿಕೊಂಡಿದ್ದಾರೆ.