ನೋಡಲು ತುಂಬಾನೇ ಚಿಕ್ಕದಿದ್ರು ಕೂಡ ಇದರ ಮಹತ್ವ ತುಂಬಾನೇ ದೊಡ್ಡದಿದೆ ಮಸಾಲೆಗಳ ರಾಣಿ ಅಂತಾನೂ ಏಲಕ್ಕಿಯನ್ನು ಕರಿತಾರೆ. ಇದರ ಸುವಾಸನೆ ಅಬ್ಬಬ್ಬಾ ವರ್ಣಿಸೋಕೆ ಪದಗಳೇ ಇಲ್ಲ ಪ್ರತಿಯೊಬ್ಬರೂ ಕೂಡ ಇಷ್ಟ ಪಡ್ತಾರೆ ಇನ್ನು ಯಾವುದೇ ಒಂದು ಸಿಹಿ ಪದಾರ್ಥ ಅಥವಾ ಕಾರು ಪದಾರ್ಥದಲ್ಲಿ ಏಲಕ್ಕಿಯನ್ನು ಬೆರೆಸಿದರೆ ರುಚಿ ಹಾಗೂ ಘಮ ವಿಶೇಷವಾಗಿರುತ್ತದೆ.
ಇನ್ನು ಏಲಕ್ಕಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು. ಏಲಕ್ಕಿಯಲ್ಲಿರುವಂತಹ ಔಷಧಿ ಗುಣಗಳು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಏಲಕ್ಕಿಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಮಾಹಿತಿ ಇಲ್ಲಿದೆ.
- ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣಕ್ರಿಯೆ ಆಗಲಿದ್ದಲ್ಲಿ ಒಂದೆರಡು ಕಾಳು ಏಲಕ್ಕಿಯನ್ನು ತಿನ್ನೋದ್ರಿಂದ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ, ಕಾನ್ಸ್ಟಿಪೇಶನ್ ಸಮಸ್ಯೆ ದೂರವಾಗುತ್ತದೆ, ಮುಖ್ಯವಾಗಿ ವಾಕರಿಕೆ ಹಾಗೂ ಹೊಟ್ಟೆ ಉಬ್ಬರದ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.
- ಏಲಕ್ಕಿಯನ್ನ ತಿನ್ನುವುದರಿಂದ ದೇಹದಲ್ಲಿ ಇಮ್ಯೂನಿಟಿ ಪವರ್ ಹೆಚ್ಚಾಗುತ್ತದೆ ಹಾಗೂ ಕಾಯಿಲೆಗಳಿಂದ ದೂರ ಇಡಲು ಸಹಾಯಕಾರಿ.
- ಏಲಕ್ಕಿಯಲ್ಲಿ ಆಂಟಿ ಮೈಕ್ರೋಬಿಯಲ್ ಅಂಶಗಳು ಹೆಚ್ಚಿದ್ದು ಹಲ್ಲಿನ ಆರೋಗ್ಯವನ್ನ ಕಾಪಾಡುತ್ತದೆ ಹಲ್ಲಿನಲ್ಲಿ ಆಗಿರುವಂತಹ ಹುಳಗಳನ್ನು ತೊಡೆದು ಹಾಕುತ್ತದೆ. ಕೆಟ್ಟ ಉಸಿರಾಟವನ್ನು ಶಮನ ಮಾಡಿ ಶುದ್ಧ ಉಸಿರಾಟವನ್ನು ನಮ್ಮದಾಗಿಸುತ್ತದೆ.
- ಹೃದಯ ರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ ಮುಖ್ಯವಾಗಿ ಕೊಲೆಸ್ಟ್ರಾಲನ್ನು ತಡೆಯುತ್ತದೆ ಹಾಗೂ ಲೋವರ್ ಬ್ಲೆಡ್ ಪ್ರೆಷರ್ ನಾರ್ಮಲ್ ಆಗಿರುತ್ತದೆ.
- ಏಲಕ್ಕಿಯಲ್ಲಿ ಆಂಟಿ ಡಯಾಬಿಟಿಕ್ ಅಂಶಗಳು ಹೆಚ್ಚಿದ್ದು ರಕ್ತದಲ್ಲಿ ಶುಗರ್ ಲೆವೆಲನ್ನು ಬ್ಯಾಲೆನ್ಸ್ ಮಾಡುತ್ತದೆ.
ಆದ್ರೆ ಯಾವುದೇ ಕಾರಣಕ್ಕೂ ಅತಿಯಾಗಿ ಏಲಕ್ಕಿಯನ್ನು ಸೇವಿಸಬಾರದು ಹೆಚ್ಚು ಏಲಕ್ಕಿಯನ್ನು ತಿನ್ನುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ ಉರಿಮೂತ್ರ ಕಾಡುತ್ತದೆ.