• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪ್ರಧಾನಿ ಮೋದಿ-ಕ್ಯಾ.ಅಮರೀಂದರ್‌ ಸಿಂಗ್‌ ಭೇಟಿ; ಕೃಷಿ ಕಾಯ್ದೆಗಳ ಕುರಿತು ಚರ್ಚೆಗಳ ಸಾಧ್ಯತೆ

Shivakumar A by Shivakumar A
October 7, 2021
in ದೇಶ, ರಾಜಕೀಯ
0
ಪ್ರಧಾನಿ ಮೋದಿ-ಕ್ಯಾ.ಅಮರೀಂದರ್‌ ಸಿಂಗ್‌ ಭೇಟಿ; ಕೃಷಿ ಕಾಯ್ದೆಗಳ ಕುರಿತು ಚರ್ಚೆಗಳ ಸಾಧ್ಯತೆ
Share on WhatsAppShare on FacebookShare on Telegram

ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿಯ ದೆಹಲಿ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಸಾಧ್ಯತೆಗಳಿವೆ. 

ADVERTISEMENT

ಕಳೆದ ಸುಮಾರು ಹತ್ತು ತಿಂಗಳಿನಿಂದ ನಡೆಯುತ್ತಿರುವ ರೈತ ಆಂದೋಲನ ಹಾಗೂ ಲಖೀಂಪುರ ಖೇರಿಯಲ್ಲಿ ನಡೆದಂತಹ ರೈತರ ಹತ್ಯೆಯ ಕುರಿತಾಗಿ ಕ್ಯಾಪ್ಟನ್ ಸಿಂಗ್ ಅವರು ಪ್ರಧಾನಿಯೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ರೈತ ಆಂದೋಲನದಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪ್ರಧಾನಿಯೊಂದಿಗೆ ಚರ್ಚಿಸಿ, ಕೃಷಿ ಕಾನೂನು ತಿದ್ದುಪಡಿಯನ್ನು ವಾಪಸ್ ಪಡೆಯಲು ಸಿಂಗ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ ಎಂದು ಹೇಳಲಾಗಿದೆ. 

ಲಖೀಂಪುರ ಖೇರಿಯಲ್ಲಿ ನಡೆದ ಘಟನೆಗೆ ಪಂಜಾಬ್’ನಲ್ಲಿ ಪ್ರತಿರೋಧ ಉಂಟಾದರೆ ಪರಿಸ್ಥಿತಿ ಕೈ ಮೀರಿ ಹೋಗುವ ಸಾಧ್ಯತೆಗಳಿವೆ. ಹಾಗಾಗಿ ಈ ಘಟನೆಯ ಹಿಂದಿನ ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಾಗೂ ಈ ಘಟನೆಯ ಕುರಿತು ಸಮಗ್ರ ತನಿಖೆಯ ವಿಚಾರವಾಗಿ ಪ್ರಧಾನಿಯೊಂದಿಗೆ ಸಿಂಗ್ ಚರ್ಚೆ ನಡೆಸಲಿದ್ದಾರೆ. 

ಕೆಲವು ದಿನಗಳ ಹಿಂದೆ ತಾವು ಕಾಂಗ್ರೆಸ್ ತೊರೆಯುವುದಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದರು. ಆದರೆ, ಬಿಜೆಪಿ ಸೇರುವುದಿಲ್ಲ ಎಂಬ ವಿಚಾರವನ್ನೂ ಸ್ಪಷ್ಟಪಡಿಸಿದ್ದರು. ಈಗ ದೆಹಲಿ ಭೇಟಿ ನೀಡುತ್ತಿರುವುದು ಸಂಪೂರ್ಣ ರಾಜಕೀಯ ಭೇಟಿಯಾಗಿರಲಿದ್ದು, ಹಲವು ರಾಜಕೀಯ ಮುಖಂಡರನ್ನು ಸಿಂಗ್ ಅವರು ಭೇಟಿಯಾಗಲಿದ್ದಾರೆ. 

ಅಮರಿಂದರ್ ಸಿಂಗ್ ಸಿಎಂ ಆಗಿದ್ದ ವೇಳೆ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಮೇಜರ್ ಅಮರ್‌ದೀಪ್ ಸಿಂಗ್ ಅವರು ಕಾಂಗ್ರೆಸ್ ವಿರುದ್ದ ತೀವ್ರವಾಗಿ ಕಿಡಿಕಾರಿದ್ದಾರೆ. ಅಮರೀಂದರ್ ಸಿಂಗ್ ಅವರಿಗೆ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಅಪಮಾನ ಮಾಡಿದೆ. ಇದರ ಪರಿಣಾಮವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಲಿದೆ. ಕಾಂಗ್ರೆಸ್ 16 ಸೀಟುಗಳನ್ನು ಗೆಲ್ಲಲು ಕೂಡಾ ಪರದಾಡಲಿದೆ, ಎಂದಿದ್ದಾರೆ. 

“ನಾವು ಸರ್ಕಾರ ರಚಿಸುತ್ತೇವೆ. ಕಾದು ನೋಡಿ. ಕಾಂಗ್ರೆಸ್ ಹೊರತಾಗಿಯೂ ಹಲವಾರು ರಾಜಕೀಯ ಪಕ್ಷಗಳಿವೆ. ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಆಯ್ಕೆಗಳಿವೆ. ನಾವು ವಾಪಸ್ ಬಂದೇ ಬರುತ್ತೇವೆ,” ಎಂದು ಅಮರ್‌ದೀಪ್ ಸಿಂಗ್ ಹೇಳಿದ್ದಾರೆ. 

ಇನ್ನು, ಪಂಜಾಬ್’ನಲ್ಲಿ ನೂತನ ಸರ್ಕಾರ ರಚನೆಯಾದ ಬಳಿಕ, ಹಿಂದಿನ ಸಿಎಂನ ಕಾರ್ಯದರ್ಶಿಗಳಿಗೆ, ಸಲಹೆಗಾರರಿಗೆ ನೀಡಿದ್ದ ಭದ್ರತೆಯನ್ನು ಏಕಾಏಕಿ ಹಿಂಪಡೆದಿರುವುದನ್ನು ಖಂಡಿಸಿರುವ ಅಮರ್‌ದೀಪ್ ಸಿಂಗ್, ಇದು ದ್ವೇಷ ರಾಜಕಾರಣ. ಯಾವುದೇ ನೊಟಿಸ್ ನೀಡದೆ ನಮಗೆ ನಿಡಿರುವ ಭದ್ರತೆ ವಾಪಸ್ ಪಡೆಯಲಾಗಿದೆ. ಸದ್ಯಕ್ಕೆ ನಾವು ಕೂಡಾ ಕಾಂಗ್ರೆಸ್ ಭಾಗವಾಗಿಯೇ ಇದ್ದೇವೆ. ನಮ್ಮ ನಾಯಕ ರಾಷ್ಟ್ರಮಟ್ಟದ ನಾಯಕ, ಎಂದು ಅವರು ಹೇಳಿದ್ದಾರೆ. 

Tags: Amarinder SinghBJPCongress Partyfarm bills 2020Farm laws protestFarmersFarmers protestFarmers SuicideLakhimpur Kheri Eventನರೇಂದ್ರ ಮೋದಿಬಿಜೆಪಿ
Previous Post

ಹಾನಗಲ್:‌ ಕಾಂಗ್ರೆಸ್‌ ನಾಯಕರಿಂದ ದರ್ಗಾ ಭೇಟಿ

Next Post

ಸೂಕ್ಷ್ಮತೆ ಇಲ್ಲದ ಸಮಾಜವೂ ಸಂವೇದನೆ ಇಲ್ಲದ ವ್ಯವಸ್ಥೆಯೂ

Related Posts

ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ
Top Story

ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

by ಪ್ರತಿಧ್ವನಿ
May 2, 2026
0

ನವದೆಹಲಿ : ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇರಾನ್ ಸರ್ಕಾರ ಸ್ಪಷ್ಟನೆ ನೀಡಿದ್ದು, ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದೆ. ಖಮೇನಿ...

Read moreDetails
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
Next Post
ಸೂಕ್ಷ್ಮತೆ ಇಲ್ಲದ ಸಮಾಜವೂ ಸಂವೇದನೆ ಇಲ್ಲದ ವ್ಯವಸ್ಥೆಯೂ

ಸೂಕ್ಷ್ಮತೆ ಇಲ್ಲದ ಸಮಾಜವೂ ಸಂವೇದನೆ ಇಲ್ಲದ ವ್ಯವಸ್ಥೆಯೂ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada