ಕೆಫೀನ್ ಅಂಶ ದೇಹಕ್ಕೆ ಸೇರಿದರೆ ದೇಹದಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಎಫೆಕ್ಟ್ ಎರಡು ಕೂಡ ಆಗುತ್ತದೇ. ಆದರೆ ಹೆಚ್ಚಾಗಿ ಕಾಡುವುದು ನೆಗೆಟಿವ್ ಸೈಡ್ ಎಫೆಕ್ಟ್ಸ್ ಯಾವೆಲ್ಲಾ ಪದಾರ್ಥಗಳಲ್ಲಿ ಹೆಚ್ಚಿನ ಮಟ್ಟದಲ್ಲಿನ ಬಳಸಿರುತ್ತಾರೆ ಅಂಥ ನೋಡೊದಾದ್ರೆ. ಕಾಫಿ ಅಥವಾ ಟೀ, ಡಾರ್ಕ್ ಚಾಕಲೇಟ್ ಅಥವಾ ಕೋಕೋ ಪೌಡರ್ ಎನರ್ಜಿ ಡ್ರಿಂಕ್ ಅಥವಾ ಸಾಫ್ಟ್ ಡ್ರಿಂಕ್ ಅನ್ನ ಕುಡಿಯೋದ್ರಿಂದಾಗಿ ಕೆಲವೊಂದು ಮಾತ್ರೆಗಳಲ್ಲೂ ಕೂಡ ಕೆಫೆನನ್ನ ಬೆರೆಸಿರುತ್ತಾರೆ..
ಆದ್ರೆ ದಿನಕ್ಕೆ 400Mg ಅಷ್ಟು ಕೆಫೀನ್ ಸೇವನೆ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ..ಆದ್ರೆ ಅದಕ್ಕಿಂತ ಹೆಚ್ಚು ಕೆಫೀನ್ ದೇಹಕ್ಕೆ ಸೇರಿದ್ರೆ ಒಂದೊಂದೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.. ಹಿರಿಯರು ಹೇಳುವ ರೀತಿ ಯಾವ್ದು ಕೂಡ ಅತಿಯಾಗಬಾರದು ಅಂತ.. ಈ ವಿಷ್ಯದಲ್ಲೂ ಕೂಡ ಆ ಲೈನ್ ನ ನೆನಪಿಸಿಕೊಳ್ಳುವುದು ಉತ್ತಮ..
ಇನ್ನು ಕೆಫೀನ್ ಅಂಶ ಅತಿಯಾದ್ರೆ ಆರೋಗ್ಯದಲ್ಲಿ ಏನೆಲ್ಲ ಸಮಸ್ಯೆಗಳು ಶುರುವಾಗುತ್ತದೆ ಅನ್ನುವ ಮಾಹಿತಿ ಇಲ್ಲಿದೆ ನೋಡಿ
ಹೃದಯದ ಬಡಿತ ಮತ್ತು ಹಾರ್ಟ್ ರೇಟ್ ಹೆಚ್ಚಾಗುತ್ತದೆ
ಕೆಫೀನ್ ನೊರಾಡ್ರಿನಾಲಿನ್ ಮತ್ತು ನೊರ್ಪೈನ್ಫ್ರಿನ್ ಬಿಡುಗಡೆಗೆ ಮಾಡುತ್ತದ, ಇದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.ಮುಖ್ಯವಾಗಿ ಕೆಫೀನ್ ಅಡ್ರಿನಾಲಿನ್ ನಂತಹ ಒತ್ತಡದ ಹಾರ್ಮೋನುಗಳ ರಿಲೀಸ್ ಮಾಡುತ್ತದೆ, ಇದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ನಿದ್ರೆ ತೊಂದರೆ
ಕೆಫೀನ್ ಜಾಸ್ತಿ ಸೇವಿಸುವುದರಿಂದ ನಿದ್ದೆ ಸರಿಯಾಗಿ ಬರುವುದಿಲ್ಲ ಆಗಾಗ ಎಚ್ಚರವಾಗುತ್ತದೆ ,ಮುಖ್ಯವಾಗಿ ಕೆಫೆನ್ ಮೆದುಳನ್ನು ಉತ್ತೇಜಿಸುತ್ತದೆ ಹಾಗೂ ನಿಮ್ಮನ್ನು ಎಚ್ಚರವಾಗಿರುವಂತೆ ಮಾಡುತ್ತದೆ. ಗುಣಮಟ್ಟದ ನಿದ್ರೆಯನ್ನು ಹಾಳುಮಾಡುತ್ತದೆ. ಹಾಗಾಗಿ ಮಲಗುವ ನಾಲ್ಕರಿಂದ ಆರು ಗಂಟೆಗಳ ಮುನ್ನ ಕಾಫಿ ಅಥವಾ ಟೀಯನ್ನು ಸೇವಿಸುವುದು ಉತ್ತಮ.
ಆತಂಕ ಮತ್ತು ಹಿಂಸೆ
ಕೆಫೀನ್ ದೇಹಕ್ಕೆ ಹೆಚ್ಚು ಸೇರಿದ್ರೆ. ಮೂಡ್ ಸ್ವಿಂಗ್ಸ್ ಜಾಸ್ತಿ ಆಗುತ್ತದೆ. ಅದರಲ್ಲೂ ಬಾಡಿ ಫಂಕ್ಷನನ್ನು ಜಾಸ್ತಿ ಮಾಡುತ್ತದೆ, ಸ್ಪೀಡ್ ಮಾಡುತ್ತದೆ. ಹಾರ್ಟ್ ಬೀಟ್ ಫಾಸ್ಟರ್ ಆಗುತ್ತದೆ .ಮುಖ್ಯವಾಗಿ ಬಾಡಿ ಹೀಟ್ ಆಗುತ್ತದೆ ಹಾಗೂ ಉಸಿರಾಟದ ರೇಟ್ ಕೂಡ ಹೆಚ್ಚಾಗುತ್ತದೆ. ಇದರಿಂದ ನಮ್ಮಲ್ಲಿ ಆತಂಕ ಮತ್ತು ಇರಿಟೇಶನ್ ಶುರುವಾಗುತ್ತದೆ.
ಗ್ಯಾಸ್ಟ್ರಿಕ್
ಅತಿಯಾಗಿ ಕೆಫೀನ್ ಸೇವಿಸುವುದರಿಂದ ಹೊಟ್ಟೆಯಲ್ಲಿ ಆಸಿಡ್ ಅಂಶವನ್ನು ಪ್ರೊಡ್ಯೂಸ್ ಮಾಡುತ್ತದೆ ಇದರಿಂದ ಎದೆ ಉರಿ ಹಾಗೂ ಡೈಜೆಶನ್ ಸಮಸ್ಯೆ ಕೂಡ ಶುರುವಾಗುತ್ತದೆ. ಹಾಗೂ ಮುಖ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಎದುರಾಗುತ್ತದೆ.
ಇಷ್ಟು ಮಾತ್ರವಲ್ಲದೇ ತಲೆನೋವು, ವಾಕರಿಕೆ, ಕಿಡ್ನಿ ಡ್ಯಾಮೇಜ್ ಹಾಗೂ ಪೋಷಕಾಂಶಗಳ ಕೊರತೆ ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಹಾಗಾಗಿ ಮಕ್ಕಳು , ಗರ್ಭಿಣಿಯರು, ಮೆಡಿಕೇಶನ್ ನಲ್ಲಿ ಇರುವವರು ,ಹಾಗೂ ಸೂಕ್ಷ್ಮ ವ್ಯಕ್ತಿಗಳು ಕೆಫೀನ್ ಸೇವಿಸದೆ ಇರುವುದು ಉತ್ತಮ.