ಇಂದು ದೇಶದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ರಾಷ್ಟ್ರದ ಆರು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿದೆ. ಅದರಲ್ಲೂ ಪ್ರಮುಖವಾಗಿ 2024ರ ಲೋಕಸಭೆ ಚುನಾವಣೆಗೆ ಮುನ್ನ ಈ ಉಪಚುನಾವಣೆ ನಡೆಯುತ್ತಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಇಂಡಿಯಾ ಬಣಗಳ ನಡುವಿನ ಮೊದಲ ಚುನಾವಣಾ ಸ್ಪರ್ಧೆ ಇದಾಗಿದೆ ಈ ಉಪಚುನಾವಣೆಗಳ ಮೇಲೆ ಈ ಎರಡು ಮಹಾ ಬಲಗಳ ಮೊದಲ ಸಂಘರ್ಷ ಇದು ಎನ್ನಲಾಗುತ್ತಿದೆ

ದೇಶದಲ್ಲಿ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನ ಹೊಂದಿರುವ ಉತ್ತರ ಪ್ರದೇಶದಲ್ಲಿನ ಘೋಸಿ ಕ್ಷೇತ್ರಕ್ಕೆ ಇಂದು ಉಪ ಚುನಾವಣೆ ನಡೆಯಲಿದೆ, ಹಾಗೆ ಜಾರ್ಖಂಡ್‌ನ ಡುಮ್ರಿ, ಧನ್‌ಪುರ್ ಮತ್ತು ತ್ರಿಪುರದ ಬೊಕ್ಸಾನಗರ ಮತ್ತು ಉತ್ತರಾಖಂಡದ ಬಾಗೇಶ್ವರದಲ್ಲಿ INDIA ಒಗ್ಗಟ್ಟಿನಿಂದ ಕಣಕ್ಕಿಳಿಯುತ್ತಿದ್ದರೆ, ಪಶ್ಚಿಮ ಬಂಗಾಳದ ಧೂಪ್‌ಗುರಿ ಮತ್ತು ಕೇರಳದ ಪುತ್ತುಪಲ್ಲಿಯಲ್ಲಿ ಪ್ರತ್ಯೇಕವಾಗಿ ಹೋರಾಡಲಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಸೆಪ್ಟೆಂಬರ್ 8 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು ಇದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿಗಳನ್ನ ಈಗಾಗಲೇ ಮಾಡಿಕೊಳ್ಳಲಾಗಿದೆ ಇದರ ಜೊತೆಗೆ ಭಿಗಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು ಯಾವುದೇ ರೀತಿಯಾದ ಲೋಪಗಳು ಆಗದಂತೆ ಪೊಲೀಸ್ ಇಲಾಖೆ ಭದ್ರತಾ ತುಕುಡಿಗಳು ಚುನಾವಣಾ ಸ್ಥಳದಲ್ಲಿ ಬೇರೂರಿವಿ..