ಸಂಸದ ಅನಂತ್ ಕುಮಾರ್ ಹೆಗ್ಡೆ (anant kumar hegde) ಕಳೆದ ಒಂದೆರಡು ತಿಂಗಳುಗಳಲ್ಲಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಪ್ರತಿನಿತ್ಯ ಸುದ್ದಿಯಾಗ್ತಿದೆ. ಇದೀಗ ಅಂಥದ್ದೇ ಮತ್ತೊಂದು ಹೇಳಿಕೆಯ ಮೂಲಕ ಸಂಸದರು ವಿವಾದದ ಕಿಡಿ ಹೊತ್ತಿಸಿದ್ದಾರೆ. ಲೋಕಸಭಾ ಚುನಾವಣೆ ಸನಿಹದಲ್ಲಿ ಮತ್ತೆ ಸಂವಿಧಾನ ತಿದ್ದುಪಡಿ ಬಗ್ಗೆ ಮಾತನಾಡಿ ಕಾಂಗ್ರೆಸ್ (congress) ಮತ್ತು ಸ್ವತಃ ಬಿಜೆಪಿಯ (BJP) ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಲೋಕಸಭೆಯಲ್ಲಿ (Parliament House) 400ಕ್ಕಿಂತ ಹೆಚ್ಚು ಸ್ಥಾನ ಗಳಿಸಿ, ರಾಜ್ಯಸಭೆಯಲ್ಲೂ ೨ನೇ ೩ರಷ್ಟು ಬಹುಮತ ಸಿಕ್ಕರೆ ಸಂವಿಧಾನ ತಿದ್ದುಪಡಿ ಮಾಡಬಹುದು ಎಂಬ ಅನಂತ್ ಕುಮಾರ್ ಹೇಳಿಕೆ ಬಗ್ಗೆ ಬಿಜೆಪಿ ಪ್ರತಿಕ್ರಿಯಿಸಿದ್ದು , ಪಕ್ಷಕ್ಕೂ ಅವರ ಹೇಳಿಕೆಗೂ ಯಾವುದೇ ರೀತಿ ಸಂಬಂಧವಿಲ್ಲ.ಬಿಜೆಪಿ ಸಂವಿಧಾನವನ್ನು ಗೌರವಿಸುವ ಪಕ್ಷ. ಅನಂತ್ ಕುಮಾರ್ ಅವರ ಹೇಳಿಕೆ ಕೇವಲ ಅವರ ವಯಕ್ತಿಕ ಅಭಿಪ್ರಾಯ. ಅವರ ಈ ಹೇಳಿಕೆಗೆ ಪಕ್ಷ ಅವರ ಬಳಿ ವಿವರಣೆ ಕೇಳಲಿದೆ ಎಂದು ಟ್ವೀಟ್ (tweet) ಮಾಡಿ ತಮ್ಮದೇ ಪಕ್ಷದ ಸಂಸದರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.

ಮತ್ತೊಂದ್ಕಡೆ ಕಾಂಗ್ರೆಸ್ ಗೆ (congress) ಅನಂತ್ ಕುಮಾರ್ ಹೆಗ್ಡೆ ಈ ಹೇಳಿಕೆ ಅಸ್ತ್ರವಾಗಿ ಪರಿಣಮಿಸಿದ್ದು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದೆ. ಸಂಪೂರ್ಣ ತೆರೆ ಮರೆಗೆ ಸರಿದಿದ್ದ ಸಂಸದ ಅನಂತ್ ಕುಮಾರ್ ಹೆಗ್ಡೆ , ಚುನಾವಣೆ ಸನಿಹದಲ್ಲಿ ಮತ್ತೆ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಮುನ್ನಲೆಗೆ ಬರೋ ಪ್ರಯತ್ನ ಮಾಡ್ತಿದ್ದಾರೆ ಎನ್ನಲಾಗಿದ್ದು.. ವರಿಷ್ಠರು ಹಿಂದೂ ಕಟ್ಟಾಳು ಅನಂತ್ ಕುಮಾರ್ ಹೆಗ್ಡೆಗೆ ಟಿಕೆಟ್ ಕರುಣಿಸ್ತಾರ ಅಥವಾ ಕೋಕ್ ನೀಡ್ತಾರಾ ಕಾದು ನೋಡಬೇಕಿದೆ.