ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬರ ಅಧ್ಯಯ ಮಾಡುತ್ತಿದ್ದಾರೆ ಅದಕ್ಕೆ ನಮ್ಮ ತಕರಾರು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ಈ ಕುರಿತು ಸುದ್ದಿಗಾರರೊಂದಿಗೆ ಮಾತಾನಡಿದ ಅವರು, ಬರ ಅಧ್ಯಯನವನ್ನು ಕೇಂದ್ರದ ತಂಡ ನಡೆಸಿ ಹೋಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಅವರಿನ್ನೂ ವರದಿ ನೀಡಿಲ್ಲ. ಬಿಜೆಪಿ ಯವರು ರಾಜಕಾರಣ ಮಾಡಲು ಅಧ್ಯಯನ ಮಾಡುತ್ತೇವೆ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರದ ಬಳಿ ಕೇಳಿ ನಮಗೆ ಪರಿಹಾರ ಕೊಡಿಸಲಿ. ಅದನ್ನು ಬಿಟ್ಟು ಅಧ್ಯಯನ ಮಾಡುತ್ತೇವೆ ಎನ್ನುತ್ತಾರೆ. ಮಾಡಲಿ, ನಮ್ಮ ತಕರಾರು ಇಲ್ಲ ಎಂದರು.
ರೈತರು ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ಪರಿಹಾರ ಕೊಡಿಸಲಿ
ಕೇಂದ್ರ ಸರ್ಕಾರಕ್ಕೆ 17900 ಕೋಟಿ ರೂ ಗಳ ಪರಿಹಾರ ಕೊರಲಾಗಿದೆ. ರಾಜ್ಯದಲ್ಲಿ ಸುಮಾರು 33, 700 ಕೋಟಿ ನಷ್ಟವಾಗಿದೆ. ರೈತರು ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಪರಿಹಾರ ಕೊಡಿಸಲಿ ಎಂದರು. 25 ಬಿಜೆಪಿ ಸಂಸದರು ಪರಿಹಾರ ಕೊಡಿಸುವುದನ್ನು ಮೊದಲು ಮಾಡಲಿ. ನಮ್ಮ ಮಂತ್ರಿಗಳಿಗೆ ಸಂಬಂಧ ಪಟ್ಟ ಸಚಿವರು ಬಿಜೆಪಿಗೆ ಸಮಯವನ್ನೇ ನೀಡಿಲ್ಲ. ಇವರಿಗೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇದೆ ಎಂದರು.

ಅವೈಜ್ಞಾನಿಕ ಸಮೀಕ್ಷೆ- ಕುಮಾರಸ್ವಾಮಿ ಹೇಳಿಕೆ : ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬರೆಯಬೇಕು
ಬರದ ಕುರಿತು ವೈಜ್ಞಾನಿಕ ಸಮೀಕ್ಷೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿರುವ ಬಗ್ಗೆ ಮಾತನಾಡಿ, ಸಮೀಕ್ಷೆ ಮಾಡಿದವರು ಕೇಂದ್ರ ಸರ್ಕಾರದ ತಂಡ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬರೆಯಬೇಕು ಎಂದರು.
.











