“ರಾಜ್ಯದಲ್ಲಿ ಹಿಂದೂ – ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು” ಎಂದು ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಮನವಿ ಮಾಡಿದರು.
ಬೆಂಗಳೂರು ನಗರದಲ್ಲಿ ಮಾಧ್ಯಮಗಳ ಜೊತೆ ಸೋಮವಾರ ಮಾತನಾಡಿದ ಅವರು, “ಹಿಂದೂ ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂಬುವುದು ನಮ್ಮ ಅಪೇಕ್ಷೆ. ಕೆಲವು ಕಿಡಿಗೇಡಿಗಳು ಇದಕ್ಕೆ ಅಡ್ಡಿಮಾಡುವ ಕೆಲಸ ಮಾಡಿದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಈಗಾಗಲೇ ಹೇಳಿದ್ದಾರೆ” ಎಂದರು.
“ಇನ್ನು ಮುಂದೆ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ಒಟ್ಟಾಗಿ ಬಾಳುವ ಅವಕಾಶ ಕಲ್ಪಿಸಿಕೊಡಬೇಕು. ಇಂತಹ ಬೆಳವಣಿಗೆಗಳನ್ನುಯಾವುದೇ ಕಾರಣಕ್ಕೂ ಸರ್ಕಾರ ಸಹಿಸುವುದಿಲ್ಲ” ಎಂಬ ಎಚ್ಚರಿಕೆಯನ್ನು ಸಿಎಂ ನೀಡಿದ್ದಾರೆ. “ಇದೆಲ್ಲವನ್ನು ನಿಲ್ಲಿಸಿ ನಿಮ್ಮ ನಿಮ್ಮ ಕೆಲಸ ಮಾಡಿ ಮುಸ್ಲಿಮರು ಕೂಡ ನೆಮ್ಮದಿಯಿಂದ ಗೌರವದಿಂದ ಬದುಕಬೇಕು” ಎಂದು ಹೇಳಿದ್ದಾರೆ.
”ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಸರಕಾರ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ದೇಷ ರಾಜಕೀಯವನ್ನು ಶೀಘ್ರವೇ ಕೊನೆಗಾಣಿಸಿ, ಕೈಯಲ್ಲಿರುವ ಕೆಲಸದತ್ತ ಗಮನ ಹರಿಸುವಂತೆ ನಾನು ಅವರಿಗೆ ಸಲಹೆ ನೀಡಲು ಬಯಸುತ್ತೇನೆ. ಎಲ್ಲಾ ಸಮುದಾಯಗಳು ಶಾಂತಿ ಮತ್ತು ಗೌರವದಿಂದ ಬದುಕಬೇಕು ಎಂದು ಯಡಿಯೂರಪ್ಪ ಸೋಮವಾರ ಹೇಳಿದರು.











