ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ಆಪ್ತ ಚೋಟಾ ಶಕೀಲ್ ಅವರ ಸಂಬಂಧಿಯನ್ನು ಮುಂಬೈನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಸಲೀಂ ಖುರೇಷಿ ಬಂಧಿತ ಆರೋಪಿ. ಈತನನ್ನು ಸಲೀಂ ಫ್ರೂಟ್ ಎಂದು ಕೂಡ ಕರೆಯಲಾಗುತ್ತದೆ. ಈತನನ್ನು ಕಳೆದ ವರ್ಷ ಮೇನಲ್ಲಿ ಉಗ್ರ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಅನುಮಾನದ ಮೇಲೆ ವಶಕ್ಕೆ ಪಡೆಯಲಾಗಿತ್ತು.
ಮುಂಬೈ ಮತ್ತು ಥಾಣೆ ಸೇರಿದಂತೆ 20 ಸ್ಥಳಗಳಲ್ಲಿ ದಾವೂದ್ ಮತ್ತು ಚೋಟಾ ಶಕೀಲ್ ಸಂಬಂಧಿ ಹಾಗೂ ಆಪ್ತರ ಮೇಲೆ ದಾಳಿ ನಡೆಸಿದ ವೇಳೆ ಈತನನ್ನು ವಶಕ್ಕೆ ಪಡೆಯಲಾಗಿತ್ತು.