ನವದೆಹಲಿ: ಜೂನ್;1: ಕುಸ್ತಿಪಟುಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಸುದ್ದಿಗೋಷ್ಠಿ ನಡೆಸಿದ ಡಬ್ಲುಎಫ್ ಐಎ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್, ನನ್ನ ವಿರುದ್ಧ ಯಾವುದೇ ಒಂದು ಪ್ರಕರಣ ಸಾಬೀತಾದರೆ ನಾನು ತಕ್ಷಣ ನೇಣು ಹಾಕಿಕೊಳ್ಳುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಕುಸ್ತಿಪಟುಗಳು ಮೊದಲು ಬೇರೆ ಬೇಡಿಕೆಯನ್ನು ಹೊಂದಿದ್ದರು, ನಂತರ ಅವರು ಬೇರೆ ಏನೂ ಒತ್ತಾಯಿಸುತ್ತಿದ್ದಾರೆ. ನಿರಂತರವಾಗಿ ಅವರು ತಮ್ಮ ಬೇಡಿಕೆ ಮತ್ತು ಭಾಷಣೆಯನ್ನ ಬದಲಾಯಿಸುತ್ತಿದ್ದಾರೆ ಎಂದು ಬ್ರಿಜ್ ಭೂಷಣ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.