Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

“ಸರ್ಕಾರ ಕೊಟ್ರೂ, ವೈದ್ಯರು ಬಿಡಲ್ಲ”; ಬಾಣಂತಿನ ಡಿಸ್ಚಾರ್ಜ್‌ ಮಾಡಬೇಕಾದ್ರೇ ಕೊಡಲೇ ಬೇಕು ಲಂಚ

ಪ್ರತಿಧ್ವನಿ

ಪ್ರತಿಧ್ವನಿ

November 27, 2022
Share on FacebookShare on Twitter

ಕರ್ನಾಟಕ ಸರ್ಕಾರದ ಹಲವು ಹಗರಣಗಳು, 40% ಕಮಿಷನ್‌ ವಿವಾದಗಳು ಇನ್ನೂ ಹಸಿಯಾಗಿಯೇ ಇರುವಾಗ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯರು ಬಾಣಂತಿ ಡಿಸ್ಚಾರ್ಜ್‍ಗೆ ಲಂಚದ ಬೇಡಿಕೆಯಿಟ್ಟ ಪ್ರಕರಣ ಮತ್ತೆ ಲಂಚಾವತಾರದ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ವೈದ್ಯೆಯರು ಯಾವುದೇ ಹಿಂಜರಿಕೆ ಇಲ್ಲದೆ, ಬಾಣಂತಿಯನ್ನು ಡಿಸ್ಚಾರ್ಜ್‌ ಮಾಡಲು ಲಂಚಕ್ಕೆ ಬೇಡಿಕೆ ಇಡುವುದು, ಮತ್ತು ಅದನ್ನು ಸಮರ್ಥಿಸಿಕೊಳ್ಳುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಕೋಲಾರದಲ್ಲಿ ನಿಲ್ಲಬೇಕೋ ಓಡಿ ಹೋಗಬೇಕೋ ನನಗೆ ಬಿಟಿದ್ದು, ಯಡುಯೂರಪ್ಪ ಯಾರು ಹೇಳೋಕೆ : Siddaramaiah | yediyurappa

Nalin Kumar Kateel..ಒಬ್ಬ ವಿದೂಷಕ : Siddaramaiah

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಸಿಗುತ್ತೆ ಎಂದು ತೆರಳುವ ಬಡವರಿಗೆ ಧನದಾಹಿ ವೈದ್ಯರಿಂದ ಕಿರುಕುಳ ನಡೆಯುತ್ತಿರುವುದಕ್ಕೆ ಈ ಘಟನೆ ತಾಜಾ ಉದಾಹರಣೆ. ಇದು ನಡೆದಿರುವುದು ರಾಮನಗರದ ಬಿಡದಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ. ಆಸ್ಪತ್ರೆ ವೈದ್ಯರಾದ ಡಾ. ಶಶಿಕಲಾ ಮತ್ತು ಡಾ. ಐಶ್ವರ್ಯ ರೋಗಿಯ ಕುಟುಂಬಸ್ಥರಿಂದ ಹಣ ಡಿಮ್ಯಾಂಡ್ ಮಾಡುವ ದೃಶ್ಯವನ್ನು ರೋಗಿಯ ಕುಟುಂಬಸ್ಥರೇ ಚಿತ್ರೀಕರಿಸಿದ್ದು, ವಿಡಿಯೋ ಈಗ ವೈರಲ್ ಆಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ರಾಮನಗರ ತಾಲ್ಲೂಕಿನ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಆರೋಪಿ ವೈದ್ಯೆಯ ವಿರುದ್ಧ ಇಲಾಖಾ ತನಿಖೆ ನಡೆಸಲು ಆದೇಶಿಸಲಾಗಿದ್ದು, ತನಿಖೆಯ ವರದಿ ಬರುವವರೆಗೂ ಆರೋಪಿಯನ್ನು ಅಮಾನತಿನಲ್ಲಿಡಲಾಗುವುದು.

1/5

— Dr Sudhakar K (@mla_sudhakar) November 26, 2022

ಬಿಡದಿಯ ನಿಂಗೇಗೌಡನ ದೊಡ್ಡಿಯ ಮಂಜಪ್ಪ ಅವರು ಅವರ ಪತ್ನಿಯನ್ನು ಬಿಡದಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಹಣದ ಬೇಡಿಕೆ ಇಟ್ಟಿದ್ದ ವೈದ್ಯರಿಗೆ ಎರಡು ಸಾವಿರ ಹಣ ನೀಡಲು ಹೋಗಿದ್ದಾರೆ. ಆದರೆ ಆ ವೈದ್ಯರು ಕೊಟ್ಟಷ್ಟು ಹಣವನ್ನು ಒಪ್ಪಿಕೊಳ್ಳದೇ ಸತಾಯಿಸಿದ್ದರು. ಮೇಲಿನ ವೈದ್ಯರಿಗೆ ಎರಡು ಸಾವಿರ ರೂ. ನನಗೆ ಎರಡು ಸಾವಿರ ರೂ. ಮತ್ತೊಬ್ಬ ವೈದ್ಯರಿಗೆ ಎರಡು ಸಾವಿರ ರೂ. ಹಂಚಬೇಕು ಹಾಗಾಗಿ ಒಟ್ಟು ಆರು ಸಾವಿರ ನೀಡಬೇಕೆಂದು ಎಂದು ಡಾ ಶಶಿಕಲಾ ಹೇಳಿರೋದು ಮೊಬೈಲ್‍ನಲ್ಲಿ ಸೆರೆಯಾಗಿದೆ. ಮತ್ತೊಬ್ಬ ವೈದ್ಯೆ ಡಾ. ಐಶ್ವರ್ಯ ಕೂಡಾ ಲಂಚದ ಬೇಡಿಕೆಯನ್ನು ಸಮರ್ಥಿಸಿದ್ದು, ನಿಮ್ಮಿಂದ ಕಡಿಮೆ ಪಡೆದುಕೊಂಡರೆ ನಾಳೆ ಎಲ್ಲರೂ ಇದೇ ರೀತಿ ಮಾಡುತ್ತಾರೆ ಅನ್ನುವುದೂ ಕೇಳಿ ಬರುತ್ತದೆ. ದುಡ್ಡಿಲ್ಲದ ಬಾಣಂತಿಯ ಗಂಡ ತನಗೆ ಸಂಭಳವಾಗಿಲ್ಲವೆಂದು ಪರಿಪರಿಯಾಗಿ ವಿನಂತಿಸಿಕೊಂಡರೂ ಕರಗದು ವೈದ್ಯೆಯರು, ಲಂಚಕ್ಕೆ ಧಾರ್ಷ್ಯದಿಂದ ಬೇಡಿಕೆ ಇಡುವುದು ಬೆಚ್ಚಿ ಬೀಳಿಸುವಂತಿದೆ.

ಸದ್ಯ, ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ರಾಮನಗರ ತಾಲ್ಲೂಕಿನ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಆರೋಪಿ ವೈದ್ಯೆಯ ವಿರುದ್ಧ ಇಲಾಖಾ ತನಿಖೆ ನಡೆಸಲು ಆದೇಶಿಸಲಾಗಿದ್ದು, ತನಿಖೆಯ ವರದಿ ಬರುವವರೆಗೂ ಆರೋಪಿಯನ್ನು ಅಮಾನತಿನಲ್ಲಿಡಲಾಗುವುದು. ವೈದ್ಯೋ ನಾರಾಯಣೋ ಹರಿಃ ಎಂದು ವೈದ್ಯರನ್ನು ದೇವರ ಸ್ವರೂಪ ಎಂದು ಕಾಣುವ ನಮ್ಮ ಸಮಾಜದಲ್ಲಿ ಇಂತಹ ಕೆಲ ವೈದ್ಯರ ನಡೆಯಿಂದ, ಇಡೀ ವೈದ್ಯ ವೃತ್ತಿಗೆ, ಸರ್ಕಾರಿ ಆಸ್ಪತ್ರೆಗಳಿಗೆ ಕಳಂಕ ತರುವ ಪರಿಸ್ಥಿತಿ ಎದುರಾಗಿರುವುದು ದುರಾದೃಷ್ಟಕರ. ಸರ್ಕಾರಿ ಆಸ್ಪತ್ರೆಗಳ ನ್ಯೂನ್ಯತೆಗಳು ಎಷ್ಟೇ ಇದ್ದರೂ ಅವು ಇಂದಿಗೂ ನಮ್ಮ ಸಮಾಜದ ಅನೇಕ ಬಡ, ಕೆಳ-ಮಧ್ಯಮ ವರ್ಗ ಜನರ ಪಾಲಿಗೆ ಸಂಜೀವಿನಿಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಸೇವಾ ಮನೋಭಾವದಿಂದ ಚಿಕಿತ್ಸೆ ಅರಸಿ ಬರುವವರಿಗೆ ಆಸರೆಯಾಗಬೇಕು. ಕೇವಲ ಸುಸಜ್ಜಿತ ಕಟ್ಟಡಗಳು, ಅತ್ಯಾಧುನಿಕ ಉಪಕರಣಗಳು, ಅತ್ಯುತ್ತಮ ಭೌತಿಕ ಮೂಲಸೌಕರ್ಯಗಳಿಂದ ಒಂದು ಒಳ್ಳೆಯ ಆಸ್ಪತ್ರೆಯಾಗುವುದಿಲ್ಲ.ಸೇವಾ ಮನೋಭಾವ, ಸಾಮಾಜಿಕ ಕಳಕಳಿ, ಮಾನವೀಯತೆ ಉಳ್ಳ ವೃತ್ತಿಪರ ವೈದ್ಯರಿಂದ ಒಂದು ಆಸ್ಪತ್ರೆ ಒಳ್ಳೆಯ ಆಸ್ಪತ್ರೆ ಎನಿಸಿಕೊಳ್ಳುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಭ್ರಷ್ಟಾಚಾರ, ಅಶಿಸ್ತು, ಕರ್ತವ್ಯ ನಿರ್ಲಕ್ಷ್ಯವನ್ನ ಸಹಿಸುವುದಿಲ್ಲ.ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಮನೋಧರ್ಮ ಇಲ್ಲದ ವೈದ್ಯರು, ಸಿಬ್ಬಂದಿಗಳನ್ನು ಮುಲಾಜಿಲ್ಲದೆ ಕರ್ತವ್ಯದಿಂದ ವಜಾ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

SIDDARAMAIAH | ಅಧಿಕಾರಕ್ಕೆ ಬಂದ್ಮೇಲೆ 10 ಕೆಜಿ ಅಕ್ಕಿ ಕೊಡ್ತೇವೆ.. | ಸಿದ್ದರಾಮಯ್ಯ | CONGRESS | BJP |
ರಾಜಕೀಯ

SIDDARAMAIAH | ಅಧಿಕಾರಕ್ಕೆ ಬಂದ್ಮೇಲೆ 10 ಕೆಜಿ ಅಕ್ಕಿ ಕೊಡ್ತೇವೆ.. | ಸಿದ್ದರಾಮಯ್ಯ | CONGRESS | BJP |

by ಪ್ರತಿಧ್ವನಿ
January 27, 2023
ಬಾಪು ಇಲ್ಲದ ಸ್ವತಂತ್ರ ಭಾರತದ 75 ವಸಂತಗಳು
ಅಂಕಣ

ಬಾಪು ಇಲ್ಲದ ಸ್ವತಂತ್ರ ಭಾರತದ 75 ವಸಂತಗಳು

by ನಾ ದಿವಾಕರ
January 29, 2023
ನಮ್ಮ ಕೆಲಸಗಳೇ ನಮ್ಮ ಕೊಡುಗೆಗೆ ಸಾಕ್ಷಿ ಹೇಳುತ್ತವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕರ್ನಾಟಕ

ನಮ್ಮ ಕೆಲಸಗಳೇ ನಮ್ಮ ಕೊಡುಗೆಗೆ ಸಾಕ್ಷಿ ಹೇಳುತ್ತವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

by ಪ್ರತಿಧ್ವನಿ
January 25, 2023
| GANESH| ಜೀವನ ಅಂದ್ರೇನೆ ಕ್ರಿಕೆಟ್, ನಮ್ಮ ಸುತ್ತ 11 ಜನ ಇರ್ತಾರೆ ಕಾಲೆಳೆಯೋಕೆ
ಸಿನಿಮಾ

| GANESH| ಜೀವನ ಅಂದ್ರೇನೆ ಕ್ರಿಕೆಟ್, ನಮ್ಮ ಸುತ್ತ 11 ಜನ ಇರ್ತಾರೆ ಕಾಲೆಳೆಯೋಕೆ

by ಪ್ರತಿಧ್ವನಿ
January 27, 2023
CM Bommai: ಚುನಾವಣೆಗೂ ಮುನ್ನವೇ CM ಬೊಮ್ಮಾಯಿ ಟೆಂಪಲ್‌ರನ್! | Pratidhvani
ರಾಜಕೀಯ

CM Bommai: ಚುನಾವಣೆಗೂ ಮುನ್ನವೇ CM ಬೊಮ್ಮಾಯಿ ಟೆಂಪಲ್‌ರನ್! | Pratidhvani

by ಮಂಜುನಾಥ ಬಿ
January 24, 2023
Next Post
ಮೈಸೂರು; ಪ್ರತಿಭಟನಾ ನಿರತ ರೈತರ ಬಂಧನ ಖಂಡಿಸಿ ಪ್ರತಿಭಟನೆ

ಮೈಸೂರು; ಪ್ರತಿಭಟನಾ ನಿರತ ರೈತರ ಬಂಧನ ಖಂಡಿಸಿ ಪ್ರತಿಭಟನೆ

ದಾವಣಗೆರೆ; ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು, ಚಾಲಕ ಸಾವು

ದಾವಣಗೆರೆ; ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು, ಚಾಲಕ ಸಾವು

ಮೈಸೂರು; ಬಸ್ ಸ್ಟ್ಯಾಂಡ್ ವಿವಾದಕ್ಕೆ ತೆರೆ

ಮೈಸೂರು; ಬಸ್ ಸ್ಟ್ಯಾಂಡ್ ವಿವಾದಕ್ಕೆ ತೆರೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist