ಬೆಂಗಳೂರು ನಗರದ ಫ್ರೀಡಂ ಪಾರ್ಕ್ ಮುಂಭಾಗ ಕಬ್ಬಿನ FRP ದರ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿದ ಹಿನ್ನೆಲೆ ರಾಜ್ಯಾದ್ಯಂತ ವ್ಯಾಪಕವಾಗಿ ಖಂಡನೆ ವ್ಯಕ್ತವಾಗುತ್ತಿದೆ.
ಇನ್ನು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನಲ್ಲಿ ರೈತರು ಮೈಸೂರು ನರಸೀಪುರ ಮುಖ್ಯರಸ್ತೆ ತಡೆದು ಪ್ರತಿಭಟನೆಯನ್ನ ನಡೆಸಿದ್ದರು. ಅತ್ತ ಬನ್ನೂರಿನಲ್ಲಿಯೂ ಮೈಸೂರು ಮಳವಳ್ಳಿ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿ ಪೊಲೀಸರು ಹಾಗೂ ಸರ್ಕಾರದ ವಿರುದ್ದ ತಮ್ಮ ಆಕ್ರೋಶವನ್ನ ಹೊರಹಾಕಿದ್ದರು.

ದಿಢೀರ್ ಎಂದು ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಕಾರಣ ಕೆಲ ಕಾಲ ಮೈಸೂರು, ನರಸೀಪುರ, ಮಳವಳ್ಳಿ ಮುಖ್ಯರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು ಮತ್ತು ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರು ಹರಸಾಹಸ ಪಟ್ಟರು.
ಈ ಸರ್ಕಾರಕ್ಕೆ ಕಿವಿ ಕಣ್ಣು ಮೂಗು ಇಲ್ಲದಂತಾಗಿದೆ ಕೃಷಿ ಚಟುವಟಿಕೆ ಉತ್ಪನ್ನಗಳ ಬೆಳೆಯನ್ನ ಸರ್ಕಾರ ಏರಿಕೆ ಮಾಡಿದೆ ಆದರೆ ರೈತರು ಬೆಳೆದ ಬೆಳೆಗೆ ಮಾತ್ರ ಬೆಂಬಲ ಬೆಲ ನೀಡಿಲ್ಲ ಬೆಂಬಲ ಬೆಲೆ ಕೊಡಿ ಎಂದು ಪ್ರತಿಭಟನೆ ಮಾಡುವುದೇ ತಪ್ಪೇ ಪ್ರತಿಭಟನನಿರತ ರೈತರ ಬಂಧನ ಖಂಡನೀಯ ಎಂದು ಪ್ರತಿಭಟನಾ ನಿರತ ರೈತರು ಸರ್ಕಾರ ಹಾಗೂ ಪೊಲೀಸರ ವಿರುದ್ದ ಕಿಡಿಕಾರಿದ್ದಾರೆ.
