ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ ಪ್ರಕರಣ ಇನ್ನು ಮಾಸಿಲ್ಲ. ಆದರೆ, ಅದನ್ನು ನೆನಪಿಸುವಂತಹ ಮತ್ತೊಂದು ಘಟನೆ ಇದೀಗ ಹರಿಯಾಣದಲ್ಲಿ ನಡೆದಿದೆ.
ಬಿಜೆಪಿ ಸಂಸದ ನಯಾಬ್ ಸೈನಿ ಬೆಂಗಾವಲು ವಾಹನ ಪ್ರತಿಭಟನಾ ನಿರತ ರೈತರಿಗೆ ಗುದಿದ್ದ ಪರಿಣಾಮ ಗಾಯಗೊಂಡಿರುವ ರೈತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತಿಭಟನಾನಿರತ ರೈತರೊಬ್ಬರು ತಿಳಿಸಿದ್ದಾರೆ.
ಗಾಯಗೊಂಡಿರುವ ರೈತನನ್ನು ಅಂಬಾಲ ಸಮೀಪದ ನರೈನ್‌ಘರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನಂತರ ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ರೈತನು ರಸ್ತೆ ಪಕ್ಕದಲ್ಲಿ ಪ್ರತಿಭಟಿಸುತ್ತಾ ನಿಂತಿದ್ದ ಸಮಯದಲ್ಲಿ ಸಂಸದರು ಕುಳಿತಿದ್ದ ಕಾರು ಬಂದು ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ಚಾಲಕನ ವಿರುದ್ದ ಎಫ್‌ಐಅರ್ ದಾಖಲಿಸಬೇಕು ಇಲ್ಲವಾದಲ್ಲಿ ಅಕ್ಟೋಬರ್ 10ರಂದು ಪೊಲೀಸ್ ಠಾಣೆಗೆ ಮುತ್ತಿಗೆಯನ್ನು ಹಾಕಿ ಘೇರಾವ್ ಹಾಕಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.

ಹರಿಯಾಣದ ಕುರುಕ್ಷೇತ್ರ ಸಂಸದ ನಯಾಬ್ ಸೈನಿ ಮತ್ತು ಕೇಂದ್ರ ಸರ್ಕಾರದ ರಾಜ್ಯ ಖಾತೆ ಗಣಿ ಸಚಿವ ಮೂಲ್ ಚಂದ್ ಶರ್ಮಾ ಮತ್ತು ಇತರೆ ನಾಯಕರು ನರೈಮಗಾಬಾದ್‌ನ ಸೈನಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು.
ಕಾರ್ಯಕ್ರಮ ಮುಗಿಯುತ್ತಿದ್ದಂತೆ ಬಿಜೆಪಿ ನಾಯಕರ ಬೇಟಿಯನ್ನು ವಿರೋಧಿಸಿ ಸೈನಿ ಭವನದ ಹೊರಗೆ ರೈತರು ಪ್ರತಿಭಟಿಸುತ್ತಿದರು. ಆಗ, ಸಂಸದರ ಬೆಂಗಾವಲು ವಾಹನ ರೈತರಿಗೆ ಡಿಕ್ಕಿ ಹೊಡೆದಿದ್ದೆ.
ಈ ಘಟನೆಯು ಸರಿಸುಮಾರು ಲಖೀಂಪುರ್ ಖೇರಿ ಘಟನೆ ನಡೆದ ನಾಲ್ಕು ದಿನಗಳ ನಂತರ ಸಂಭವಿಸಿದೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ ರೈತರ ಮೇಲೆ ಕೇಂದ್ರ ಸಚಿವನ ಪುತ್ರ ಪ್ರತಿಭಟನಾನಿರತ ರೈತರ ಮೇಲೆ ಕಾರು ಹತ್ತಿಸಿ ನಾಲ್ಕು ಜನರ ಸಾವಿಗೆ ಕಾರಣವಾಗಿದ್ದ. ಇತ್ತೀಚೆಗೆ ಲಖೀಂಪುರ್ ಖೇರಿ ಘಟನೆಯ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ನಡೆದುಕೊಂಡು ಹೋಗುತ್ತಿರುವ ರೈತರ ಮೇಲೆ ಏಕಾಏಕಿ ಕಾರನ್ನು ಹತ್ತಿಸಿಕೊಂಡು ಹೋಗಿರುವುದು ಕಂಡು ಬರುತ್ತದೆ.