ದೆಹಲಿ : ಮೇ 28ರಂದು ಪ್ರಧಾನಿ ಮೋದಿ ಸಂಸತ್ತಿನ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ದೇಶವು ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗಲಿದೆ. 1947ರ ಆಗಸ್ಟ್ 14ರ ರಾತ್ರಿ 10:45ರ ಸುಮಾರಿಗೆ ತಮಿಳುನಾಡಿನಿಂದ ಪಂಡಿತ್ ಜವಹರಲಾಲ ನೆಹರೂ ತಮಿಳುನಾಡಿನಿಂದ ವಿಶೇಷವಾಗಿ ತರಿಸಿದ್ದ ಚಿನ್ನದ ರಾಜದಂಡ ಸೆಂಗೋಲ್ನ್ನು ಸಂಸತ್ತಿನ ಹೊಸ ಕಟ್ಟಡದಲ್ಲಿ ಇರಿಸಲು ನಿರ್ಧರಿಸಲಾಗಿದೆ.
1947ರ ಆಗಸ್ಟ್ 14ರ ಮಧ್ಯರಾತ್ರಿ ಬ್ರಿಟೀಷರಿಂದ ಅಧಿಕಾರ ಹಸ್ತಾಂತರ ಮಾಡಿಕೊಳ್ಳುವ ಸಂದರ್ಭದಲ್ಲಿ ನೆಹರೂ ಇದನ್ನು ಬಳಿಸಿದ್ದರು . ಸೆಂಗೋಲ್ ಎಂಬುದು ತಮಿಳು ಪದವಾಗಿದ್ದು ಇದರ ಅರ್ಥ ಸಂಪತ್ತು ಎಂದಾಗಿದೆ. ಬ್ರಿಟೀಷರು ಭಾರತೀಯರಿಗೆ ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ ನೀಡಿದ್ದ ಸೆಂಗೋಲ್ಗೆ ಪುನರುಜ್ಜೀವನ ನೀಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಸೆಂಗೋಲ್ನ್ನು ಬ್ರಿಟೀಷರಿಂದ ಭಾರತಕ್ಕೆ ಅಧಿಕಾರ ವರ್ಗಾವಣೆಯ ಸಂಕೇತವೆಂದು ಈ ಸೆಂಗೋಲ್ನ್ನು ಪರಿಗಣಿಸಲಾಗಿತ್ತು. ಚಿನ್ನದ ಈ ರಾಜದಂಡವು ಆಭರಣಗಳಿಂದ ಕೂಡಿತ್ತು. ಆ ಅವಧಿಯಲ್ಲಿ ಈ ಸೆಂಗೋಲ್ನ ಬೆಲೆ ಸುಮಾರು 15 ಸಾವಿರ ರೂಪಾಯಿ ಆಗಿತ್ತು ಎನ್ನಲಾಗಿದೆ.