ವಿಶ್ವದ ದೊಡ್ಡ ಅಮೆರಿಕದ ಆರ್ಥಿಕತೆಯಲ್ಲಿ ಎಲ್ಲವೂ ಸರಿಯಿಲ್ಲ. ಅಲ್ಲಿನ ಬ್ಯಾಂಕುಗಳು ಕುಸಿಯುತ್ತಿರುವುದು, ಹಣದುಬ್ಬರ ನಿಯಂತ್ರಣ ಸಿಗದಷ್ಟು ಏರುತ್ತಿರುವುದು ಸೇರಿದಂತೆ ಹಲವು ವಿದ್ಯಮಾನಗಳು ಇದೇ ಅಂಶವನ್ನು ಬೊಟ್ಟು ಮಾಡಿ ತೋರಿಸುತ್ತವೆ. ಈ ನಡುವೆ ‘ಬ್ಯುಸಿನೆಸ್ ಸ್ಟಾಂಡರ್ಡ್’ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಶೇಷ ವರದಿ ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟಿನ ಸುಳಿ ಪ್ರಬಲವಾಗುತ್ತಿರುವುದನ್ನು ಎತ್ತಿ ತೋರಿಸಿದೆ.
ಅಮೆರಿಕ ಸಾಲದ ಬಿಕ್ಕಟ್ಟು ಮತ್ತು ಅದರ ಪ್ರಮುಖ ಅಂಶಗಳು

ಅಮೆರಿಕದ ಸಾಲಮಿತಿ ಈಗ ಎಷ್ಟಿದೆ : ಅಮೆರಿಕದಲ್ಲಿ ಪ್ರಸ್ತುತ ಸಾಲಮಿತಿಯನ್ನು 31.4 ಲಕ್ಷಕೋಟಿ ಡಾಲರ್‌ಗೆ (31,400,000,00,000 ಡಾಲರ್) ಸೀಮಿತಗೊಳಿಸಲಾಗಿದೆ. ಕಳೆದ ಜನವರಿಯಲ್ಲಿ ಈ ಮಿತಿಯಷ್ಟು ವೆಚ್ಚವನ್ನು ಅಮೆರಿಕ ಸರ್ಕಾರ ಮಾಡಿದೆ. ಆದರೆ ಅಮೆರಿಕ ಪ್ರಸ್ತುತ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿ ಗಮನದಲ್ಲಿರಿಸಿಕೊಂಡಿರುವ ಹಣಕಾಸು ಇಲಾಖೆಯು ಹೆಚ್ಚುವರಿ ನಗದು ಒದಗಿಸುವ ಮೂಲಕ ತನ್ನ ಸರ್ಕಾರದ ನೆರವಿಗೆ ಬರಲು ಮುಂದಾಗಿದೆ.
ಸಾಲಮಿತಿ ನಿಯಮ: ಅಮೆರಿಕ ಸರ್ಕಾರವು ತನ್ನ ಖರ್ಚುವೆಚ್ಚಕ್ಕಾಗಿ ಹಣ ಪಡೆದುಕೊಳ್ಳುವ, ಸಾಲ ಪಡೆಯಲು ಅನುಸರಿಸಬೇಕಾದ ನಿಯಮಗಳಿವು. ಅಮೆರಿಕದ ಸೇನಾ ವೆಚ್ಚ, ಸಾಮಾಜಿಕ ಭದ್ರತೆ ಮತ್ತು ಕೇಂದ್ರ ಸರ್ಕಾರಿ ನೌಕರರ ವೇತನ ಪಾವತಿ, ರಾಷ್ಟ್ರೀಯ ಸಾಲದ ಮೇಲಿನ ಬಡ್ಡಿ, ತೆರಿಗೆ ಕಡಿತ ಹಾಗೂ ತೆರಿಗೆ ರಿಯಾಯ್ತಿ ಮೊತ್ತದ ಮರುಪಾವತಿ ಸೇರಿದಂತೆ ಹಲವು ವೆಚ್ಚಗಳಿಗಾಗಿ ಈ ಹಣವನ್ನು ಅಮೆರಿಕದ ಕೇಂದ್ರ ಸರ್ಕಾರ ಬಳಸಿಕೊಳ್ಳಲು ಅವಕಾಶವಿದೆ.
ಏಕಿಷ್ಟು ತರಾತುರಿ, ಈಗೇಕೆ ಸುದ್ದಿಯಲ್ಲಿದೆ: ಜಾಗತಿಕ ಸೂಪರ್ ಪವರ್ ಅಮೆರಿಕದ ಆರ್ಥಿಕತೆಯಲ್ಲಿ ಎಲ್ಲವೂ ಸರಿಯಿಲ್ಲ. ಅಲ್ಲಿನ ಬ್ಯಾಂಕುಗಳು ಕುಸಿಯುತ್ತಿರುವುದು, ಹಣದುಬ್ಬರ ನಿಯಂತ್ರಣ ಸಿಗದಷ್ಟು ಏರುತ್ತಿರುವುದು ಸೇರಿದಂತೆ ಹಲವು ವಿದ್ಯಮಾನಗಳು ಇದೇ ಅಂಶವನ್ನು ಬೊಟ್ಟು ಮಾಡಿ ತೋರಿಸುತ್ತವೆ. ಈ ನಡುವೆ ‘ಬ್ಯುಸಿನೆಸ್ ಸ್ಟಾಂಡರ್ಡ್’ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಶೇಷ ವರದಿ ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟಿನ ಸುಳಿ ಪ್ರಬಲವಾಗುತ್ತಿರುವುದನ್ನು ಎತ್ತಿ ತೋರಿಸಿದೆ.

ಸಾಲಮಿತಿ ವಿಸ್ತರಿಸದಿದ್ದರೆ ಏನಾಗುತ್ತೆ: ಸಾಲಮಿತಿಯನ್ನು ಸಕಾಲಕ್ಕೆ ವಿಸ್ತರಿಸದಿದ್ದರೆ ಅಮೆರಿಕ ಸರ್ಕಾರಕ್ಕೆ ಅಗತ್ಯವಿರುವಷ್ಟು ಹಣ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಸರ್ಕಾರಿ ನೌಕರರಿಗೆ ವೇತನ ಪಾವತಿ ಕಷ್ಟವಾಗುತ್ತದೆ. ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ನೆಚ್ಚಿಕೊಂಡಿರುವ ಖಾಸಗಿ ಕಂಪನಿಗಳ ಆರ್ಥಿಕ ಸ್ತಿತಿ ಬಿಗಡಾಯಿಸಲಿದೆ. ಅವು ದಿವಾಳಿಯಾಗುವ ಅಪಾಯವಿದೆ.
ದಿವಾಳಿಯಾದರೆ ಏನಾಗುತ್ತೆ: ಸಾಲಗಳ ಮೇಲಿನ ಬಡ್ಡಿ ಪಾವತಿ ಮಾಡಲು ಸಾಧ್ಯವಾಗದಿದ್ದರೆ ಅಮೆರಿಕಕ್ಕೆ ಜಾಗತಿಕ ಆರ್ಥಿಕತೆಯಲ್ಲಿ ವ್ಯಾಪಕ ಹಿನ್ನಡೆ ಆಗಬಹುದು. ಹೂಡಿಕೆದಾರರು ಅಮೆರಿಕದ ಸಾಲಪತ್ರಗಳಲ್ಲಿ (ಬಾಂಡ್) ಆಸಕ್ತಿ ಕಳೆದುಕೊಳ್ಳಬಹುದು. ಅಮೆರಿಕ ಸರ್ಕಾರದ ಸಾಲಪತ್ರಗಳಿಗೆ ಹೆಚ್ಚು ಬಡ್ಡಿ ವಿಧಿಸಬಹುದು. ಈಗಾಗಲೇ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ಅಮೆರಿಕಕ್ಕೆ ಹೊಸದಾಗಿ ಸಾಲ ಪಡೆಯುವ ರೀತಿ-ನೀತಿ ಕಷ್ಟವಾಗಬಹುದು.

ಭಾರತದ ಮೇಲೇನು ಪರಿಣಾಮ: ಅಮೆರಿಕದಲ್ಲಿ ಸಾಲಮಿತಿ ಗೊಂದಲ ಮುಂದುವರಿದಿರುವುದು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ಮೇಲೆ ಪರಿಣಾಮ ಬೀರಿದೆ. ಆರ್ಥಿಕ ಅಸ್ಥಿರತೆ ಎದುರಾಗಬಹುದು ಎಂಬ ಕಾರಣಕ್ಕೆ ಹೂಡಿಕೆದಾರರು ಅಮೆರಿಕ ಡಾಲರ್ ಖರೀದಿಗೆ ಮುಂದಾಗುತ್ತಿದೆ. ಪ್ರಸ್ತುತ ಅಮೆರಿಕ ಡಾಲರ್ ಎದುರು ಭಾರತದ ಕರೆನ್ಸಿ ಮಂಗಳವಾರ (ಮೇ 23) 82.80 ರೂಪಾಯಿ ಮೌಲ್ಯ ಪಡೆದುಕೊಂಡಿತ್ತು.
ಅಮೆರಿಕದ ಮುಂದಿರುವ ಮಾರ್ಗ: ಕಳೆದ ಏಪ್ರಿಲ್‌ನಲ್ಲಿ ರಿಪಬ್ಲಿಕನ್ ಪಕ್ಷದ ಸದಸ್ಯರು ಒಂದು ಸಲಹೆ ಮುಂದಿಟ್ಟಿದ್ದರು. ಅದರಂತೆ ಸಾಲಮಿತಿಯನ್ನು 1.5 ಲಕ್ಷಕೋಟಿಯಷ್ಟು ವಿಸ್ತರಿಸಲು ಅವಕಾಶ ಮಾಡಿಕೊಡುವ ಪ್ರಸ್ತಾವ ಮುಂದಿಟ್ಟಿದ್ದರು. ಅದಕ್ಕಾಗಿ ಅಮೆರಿಕ ಆಡಳಿತದ ಪ್ರಮುಖ ಸಂಸ್ಥೆಗಳ ವೆಚ್ವವನ್ನು ಈ ವರ್ಷವೂ 2022ರ ಮಿತಿಯ ಒಳಗೆ ಇರಿಸಿಕೊಳ್ಳಬೇಕು.