ಆಸ್ಟ್ರೇಲಿಯಾ ತಂಡ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ಬ್ರಾಡ್ ಹ್ಯಾಡಿನ್ರನ್ನು ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಕ ಮಾಡಲಾಗಿದೆ.
ಈಚೆಗೆ ಪಂಜಾಬ್ ತಂಡವು ಮುಖ್ಯಕೋಚ್ ಅನಿಲ್ ಕುಂಬ್ಳೆ ಜಾಗಕ್ಕೆ ಟ್ರೆವರ್ ಬೇಲಿಸ್ರನ್ನು ನೇಮಿಸಿತ್ತು. ಇತರೆ ಸಿಬ್ಬಂದಿಗಳ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ ಎಂದು ತಂಡದ ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.

ಈ ಹಿಂದೆ ಹ್ಯಾಡಿನ್ ಹಾಗೂ ಬೇಲಿಸ್ SRH ತಂಡದ ಪರ ಜೊತೆಯಾಗಿ ಕಾರ್ಯನಿರ್ವಹಿಸಿದ್ದರು.
ಕಳೆದ ಮೂರು ಆವೃತ್ತಿಗಳಲ್ಲಿ ತಂಡ ಪ್ಲೇಆಫ್ಸ್ ಪ್ರವೇಶಿಸಲು ವಿಫಲವಾದ ಕಾರಣ ಆಡಳಿತ ಮಂಡಳಿಯೂ ಮುಖ್ಯಕೋಚ್ ಹಾಗೂ ಸಹಾಯಕ ಸಿಬ್ಬಂದಿ ಜೊತೆಗಿನ ಒಪ್ಪಂದವನ್ನ ನವೀಕರಿಸಿರಲಿಲ್ಲ.






