ಮೂಳೆಗಳನ್ನು ತುಂಬಾ ಬಲವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.ಆದ್ರೆ ಹೆಚ್ಚು ಜನಕ್ಕೆ ಮೂಳೆ ಸವೆಯುವುದು ಅಥವಾ ಜಾಯಿಂಟ್ ಪೈಂಟ್ ಶುರುವಾಗುತ್ತದೆ..ಹಾಗೂ ಬೆನ್ನು ನೋವು ಸೊಂಟ ನೋವು ಅಬ್ಬಬ್ಬಾ ಇಂಥ ಸಮಸ್ಯೆ ಒಂದಲ್ಲಾ ಎರಡಲ್ಲ ಸಾಕಷ್ಟು..ಮೂಳೆಗಳ ಆರೋಗ್ಯ ಹಾಳಾಗಲು ಪ್ರಮುಖ ಕಾರಣಗಳೇನು ಗೊತ್ತಾ.?
- ಜೆನಿಟಿಕ್ ಕೂಡ ಒಂದು. ಕುಟುಂಬದಲ್ಲಿ ಯಾರಿಗಾದರೂ ಮೂಳೆಗಳ ಸಮಸ್ಯೆ ಇದ್ರೆ, ಅದು ಮಕ್ಕಳಿಗೂ ಕೂಡ ಬರಬಹುದು, ಇದರಿಂದ ಕೆಲವು ಬಾರಿ ಬೆನ್ನು ನೋವು ಕೀಲು ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
- ದೇಹಕ್ಕೆ ಸರಿಯಾದ ರೀತಿಯಲ್ಲಿ ನ್ಯೂಟ್ರಿಷನ್ ಅಂದ್ರೆ ಕ್ಯಾಲ್ಸಿಯಂ ಮೆಗ್ನೀಷಿಯಂ ಪೊಟ್ಯಾಶಿಯಂ ಅಂಶ ಸಿಗದಿದ್ದಲ್ಲಿ ಮೂಳೆಗಳ ಸಮಸ್ಯೆ ಎದುರಾಗುತ್ತದೆ.
- ಕೆಲವರದು ಜಡ ಜೀವನ ಶೈಲಿ ಆಗಿರುತ್ತದೆ .ಯಾವುದೇ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ, ಆಕ್ಟಿವ್ ಆಗಿರುವುದಿಲ್ಲ, ಸರಿಯಾದ ಸಮಯಕ್ಕೆ ಊಟ ನಿದ್ದೆ ಯಾವುದು ಇರುವುದಿಲ್ಲ. ಇದರಿಂದಾಗಿಯೂ ಮೂಳೆಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ.
- ದೇಹದಲ್ಲಿ ಹಾರ್ಮೋನ್ ಗಳು ಇಂಬ್ಯಾಲೆನ್ಸ್ ಆದಾಗ, ಹಾಗೂ ಥೈರಾಯಿಡ್ ಸಮಸ್ಯೆ, ಪ್ಯಾರ ಥೈರಾಯ್ಡ್ ಸಮಸ್ಯೆ ಇದ್ದಾಗ ಕೂಡ ಸೆಳೆತ ನೋವು ಹೆಚ್ಚು ಕಾಣಿಸಿಕೊಳ್ಳುತ್ತದೆ.
- ವಯಸ್ಸಾದಂತೆ ದೇಹದಲ್ಲಿ ಒಂದೊಂದು ಬದಲಾವಣೆಗಳು ಆಗ್ತಾನೆ ಇರುತ್ತೆ, ಸಾಕಷ್ಟು ಜನಕ್ಕೆ ಕೆಲವೊಂದು ಸಮಸ್ಯೆಗಳು ಎದುರಾಗುತ್ತೆ.ಅದರಲ್ಲಿ ಮೂಳೆಗಳ ಸಮಸ್ಯೆ ಕೂಡ ಒಂದಾಗಿರುತ್ತೆ.
- ದೀರ್ಘಕಾಲದ ಕಾಯಿಲೆಯಿಂದ ನಾವು ಬಳಲುತ್ತಾದಾಗ ಅಥವಾ ಮೆಡಿಕೇಶನಲ್ಲಿ ಇದ್ದಾಗ, ಅತಿಯಾದ ಮಾತ್ರೆಗಳನ್ನು ಅಥವಾ ಔಷಧಿಗಳಿಗೆ ಒಳಗಾದಾಗ ಮೂಳೆಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
- ಅತಿ ಹೆಚ್ಚು ಬಿಸಿಲಿನಲ್ಲಿ ಕೆಲಸ ಮಾಡಿದಾಗ ,ಫೀಲ್ಡ್ ವರ್ಕ್ ಹೆಚ್ಚಿದ್ದಾಗ ಮೂಳೆಗಳಲ್ಲಿ ತೊಂದರೆ ಉಂಟಾಗುವುದು ಕಾಮನ್.
- ಕೆಲವರಂತೂ ಮಧ್ಯಪಾನ ಧೂಮಪಾನಕ್ಕೆ ಎಡಿಟ್ ಆಗಿರುತ್ತಾರೆ ಇವುಗಳ ಸೇವನೆ ಮೂಳೆಗಳ ಆರೋಗ್ಯಕ್ಕೆ ಒಳಿತಲ್ಲ.