ಡ್ರಗ್ಸ್ ಪ್ರಕರಣಕ್ಕೆ ಸಂಬಧಿಸಿದಂತೆ ಪ್ರತಿ ಶುಕ್ರವಾರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮುಂದೆ ಹಾಜರಾಗುವ ಅವಸ್ಯಕತೆ ಇಲ್ಲ ಎಂದು ಬಾಂಬೆ ಉಚ್ಛ ನ್ಯಾಯಾಲಯ ಹೇಳಿದೆ.
ಐಷಾರಾಮಿ ಹಡಗಿನ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ಶುಕ್ರವಾರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮುಂದೆ ಹಾಜರಾಗಬೇಕಿತ್ತು. ಈ ಜಾಮೀನು ಷರತ್ತುಗಳನ್ನು ಮಾರ್ಪಾಡು ಮಾಡುವಂತೆ ಕೋರಿ ಆರ್ಯನ್ ಶಾರುಖ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ಅಂಗೀಕರಿಸಿದೆ.
ಆರ್ಯನ್ ಇನ್ನು ಮುಂದೆ ಪ್ರತಿ ಶುಕ್ರವಾರ ಎನ್ ಸಿ ಬಿ ಮುಂದು ಹಾಜರಾಗಕು ಅವಶ್ಯಕತೆ ಇಲ್ಲ, ಆದರೆ, ದೆಹಲಿಯ ತನಿಖಾ ತಂಡ ಸಮನ್ಸ್ ನೋಟಿಸ್ ನೀಡಿದಾಗೆಲ್ಲ ಆರ್ಯನ್ ಎಸ್ಐಟಿ ದೆಹಲಿಯ ಮುಂದೆ ಹಾಜರಾಗಬೇಕು ಎಂದು ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಸ್ಪಷ್ಟಪಡಿಸಿದ್ದಾರೆ.
ಮುಂಬೈನ ಹೊರಗಿನ ಪ್ರಯಾಣದ ಸಂಬಂಧಿಸಿದಂತೆ, ಆರ್ಯನ್ ಖಾನ್ ತನ್ನ ಪ್ರಯಾಣದ ವಿವರವನ್ನು ತನಿಖಾ ಅಧಿಕಾರಿಗೆ ಮುಂಚಿತವಾಗಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪರ ವಕೀಲ ಶ್ರೀರಾಮ್ ಶಿರ್ಸತ್, ಜಾಮೀನು ಷರತ್ತನ್ನು ಮಾರ್ಪಾಡು ಮಾಡುವಲ್ಲಿ ಎನ್ಸಿಬಿಗೆ ಯಾವುದೇ ತೊಂದರೆ ಇಲ್ಲ. ಆದರೆ ಆರ್ಯನ್ ದೆಹಲಿ ಅಥವಾ ಮುಂಬೈಗೆ ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂದು ವಾದ ಮಂಡಿಸಿದ್ದರು. ಅಂತಿಮವಾಗಿ ನ್ಯಾಯಾಲಯ ಜಾಮೀನು ಷರತ್ತನ್ನು ಸಡಿಲಿಸಿ ಆದೇಶ ನೀಡಿದೆ.
ಐಷಾರಾಮಿ ಹಡಗಿನಲ್ಲಿ ಎನ್ಸಿಬಿ ದಾಳಿ ಮಾಡಿದಾಗ ಆರ್ಯನ್ ಖಾನ್ ಮುಂತಾದವರನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದ ಆರೋಪಿಗಳಾದ ಆರ್ಯನ್ ಖಾನ್, ಅರ್ಬಾಜ್ ಖಾನ್, ಮುನ್ಮುನ್ ಧಮೇಚಾ ಅವರಿಗೆ ಜಾಮೀನು ನೀಡಲಾಗಿದೆ. ಆರ್ಯನ್ ಖಾನ್ ಅವರು 25 ದಿನಗಳ ಕಾಲ ಜೈಲಿನಲ್ಲಿದ್ದರು, ಮಗನಿಗೆ ಜಾಮೀನು ಕೊಡಿಸಲು ಶಾರುಖ್ ಖಾನ್ ದಂಪತಿ ಸಾಕಷ್ಟು ಪ್ರಯತ್ನಪಟ್ಟಿದ್ದರು. ಒಟ್ಟು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 18 ಜನರನ್ನು ಬಂಧಿಸಲಾಗಿತ್ತು.






