ಬೆಂಗಳೂರಿನ ೫ ಶಾಲೆಗಳಲ್ಲಿ ಬಾಂಬ್ ಇರಿಸಲಾಗಿದ್ದು, ಇದು ತಮಾಷೆಯಲ್ಲ, ನೂರಾರು ಜೀವ ಉಳಿಸಿ ಎಂದು ಬೆದರಿಕೆ ಕರೆ ಬಂದಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ.
ಮಿಲಿಂದ್ ಬೊರೆನ್ ಎಂಬ ಇ-ಮೇಲ್ ಅಕೌಂಟ್ ನಿಂದ ಬೆದರಿಕೆ ಕರೆ ಬಂದಿದ್ದು, ಬೆಂಗಳೂರು ಹೊರವಲಯದ ಆನೇಕಲ್ ನ ಸರ್ಜಾಪುರ ರಸ್ತೆಯಲ್ಲಿರುವ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ೫ ಶಾಲೆಗಳಲ್ಲಿ ಪವರ್ ಫುಲ್ ಬಾಂಬ್ ಇರಿಸಲಾಗಿದ್ದು, ಇದು ತಮಾಷೆ ಅಲ್ಲ, ನಿಜವಾಗಿಯೂ ಇರಿಸಲಾಗಿದ್ದು, ಎಲ್ಲವೂ ನಿಮ್ಮ ಕೈಯಲ್ಲಿ ಇಲ್ಲ. ಕೂಡಲೇ ಕ್ರಮ ಕೈಗೊಂಡು ನೂರಾರು ಜನರ ಜೀವ ಉಳಿಸಿ ಎಂದು ಇ-ಮೇಲ್ ನಲ್ಲಿ ಎಚ್ಚರಿಸಲಾಗಿದೆ.
ಮಾರತ್ತಹಳ್ಳಿಯ ನ್ಯೂ ಅಕಾಡೆಮಿಕ್ ಸ್ಕೂಲ್, ಗೋವಿಂದ ಪುರ ಇಂಡಿಯನ್ ಪಬ್ಲಿಕ್ ಶಾಲೆ, ಹೆಣ್ಣೂರು ಠಾಣಾ ವ್ಯಾಪ್ತಿಯ ವಿನ್ಸೆಂಟ್ ಸ್ಕೂಲ್ ಸೇರಿದಂತೆ ೫ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಮೆಟಲ್ ಡಿಟೆಕ್ಟರ್, ಶ್ವಾನದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.