ಬ್ಲಾಡರ್ ಇನ್ಫೆಕ್ಷನ್ ಎನ್ನುವಂಥದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಕ್ಕೆ ಕಾಡುವಂತ ಒಂದು ಸಮಸ್ಯೆಯಾಗಿದೆ. ಬ್ಲಾಡರ್ ಇನ್ಫೆಕ್ಷನ್ ಗೆ ಪ್ರಮುಖ ಕಾರಣ ಎಂದರೆ ಬ್ಯಾಕ್ಟೀರಿಯಾ. ಹಾಗೂ ದೇಹದಲ್ಲಿ ಆಗಾಗ ಹಾರ್ಮೋನಲ್ ಚೇಂಜಸ್ ಆಗ್ತಾ ಇದ್ದರೂ ಕೂಡ ಬ್ಲಾಡರ್ ಇನ್ಫೆಕ್ಷನ್ ಆಗುತ್ತದೆ ಜೊತೆಗೆ ದೇಹದ ಇಮ್ಯೂನಿಟಿ ಸಿಸ್ಟಮ್ ವೀಕ್ ಆಗಿದ್ದರೂ ಕೂಡ. ಇನ್ನು ಬ್ಲಡೆರ್ ಇನ್ಫೆಕ್ಷನ್ ಆದಾಗ ಕಾಡುವಂತ ಸಿಂಪ್ಟಮ್ಸ್ ಯಾವುದು ಎಂಬುದರ ಮಾಹಿತಿ ಹೀಗಿದೆ.

- ಬ್ಲಡೆರ್ ಇನ್ಫೆಕ್ಷನ್ ಆದಾಗ ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ ಜೊತೆಗೆ ಉರಿ ಕೂಡ ಜಾಸ್ತಿ ಇರುತ್ತದೆ.
- ಪದೇ ಪದೇ ಮೂತ್ರ ವಿಸರ್ಜನೆ ಮಾಡುವಂತೆ ಆಗುತ್ತದೆ ಹಾಗೂ ಅಲ್ಪ ಪ್ರಮಾಣದ ಮೂತ್ರವು ಉತ್ಪತ್ತಿಯಾಗಿದ್ದರೂ ಸಹ ಮೂತ್ರ ವಿಸರ್ಜನೆ ಮಾಡಬೇಕು ಎನಿಸುತ್ತದೆ.
- ಇದ್ದಕ್ಕಿದ್ದಾಗೆ ಅಥವಾ ಸಡನ್ನಾಗಿ ಮೂತ್ರ ವಿಸರ್ಜನೆ ಮಾಡುವಂತಹಾಗುತ್ತದೆ.
- ಈ ಸಂದರ್ಭದಲ್ಲಿ ಮೂತ್ರವು ಕೆಟ್ಟ ಅಥವಾ ದುರ್ವಾಸನೆಯಿಂದ ಕೂಡಿರುತ್ತದೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವ ಅಗತ್ಯವಿರುತ್ತದೆ.
- ಕೆಲವು ಬಾರಿ ಮೂತ್ರದಲ್ಲಿ ರಕ್ತ ಬರುವಂತ ಛಾನ್ಸ್ ಜಾಸ್ತಿ ಇರುತ್ತದೆ.
- ಹೊಟ್ಟೆಯ ಕೆಳಭಾಗದಲ್ಲಿ ಬೆನ್ನಿನಲ್ಲಿ ಹಾಗೂ ಸೈಡ್ ನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಪೆಲ್ವಿಕ್ ಲ್ಪೇನ್ ಅಂತಾನೂ ಕರೀತಾರೆ.
- ಬ್ಲಾಡರ್ ಇನ್ಫೆಕ್ಷನ್ ಆದಾಗ ಹೆಚ್ಚು ಜನಕ್ಕೆ ಬರುವಂತದ್ದು ಜ್ವರ. ಕೆಲವರಿಗೆ ಅತಿಯಾದ ಜ್ವರ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಟೆಂಪ್ರೇಚರ್ ಕಡಿಮೆ ಇದ್ದು ಜ್ವರವಿರುತ್ತದೆ.
- ನೀವು ಇರುವಂತಹ ಜಾಗದಲ್ಲಿ ಕೋಲ್ಡ್ ನಾರ್ಮಲ್ ಆಗಿ ಇದ್ದರು ಕೂಡ, ನಿಮ್ಗೆ ಚಳಿ ಹೆಚ್ಚಿರುತ್ತದೆ.