ಮಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪುತ್ತೂರಿನ ಮಾಜಿ ಶಾಸಕರ ಅರೆನಗ್ನ ಫೋಟೊ ವೈರಲ್ ಆಗಿತ್ತು ಇದೀಗ ಬಿಜೆಪಿ ಕಾರ್ಯಕರ್ತನೋರ್ವನ ಅರೆನಗ್ನ ಫೋಟೊ ವೈರಲ್ ಆಗಿದೆ. ಮಹಿಳೆಯೊಂದಿಗೆ ರೂಂ ಒಂದರಲ್ಲಿ ಸೆಲ್ಫೀ ಫೋಟೊ ಸದ್ಯ ವೈರಲ್ ಆಗುತ್ತಿದೆ
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಬೆಂಗಳೂರಿನ ಉದ್ಯಮಿ ಗುಣರಂಜನ್ ಶೆಟ್ಟಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರೋ
ಬಿಜೆಪಿ ಕಾರ್ಯಕರ್ತ ನವೀನ್ ರೈ ಕೈಕಾರ ಮಹಿಳೆಯೊಂದಿಗಿರೋ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದೀಗ ನವೀನ್ ರೈ ಕೈಕಾರ ಫೋಟೋ ವೈರಲ್ ಬೆನ್ನಲ್ಲೇ ಸೆನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ತನ್ನ ಫೋಟೋವನ್ನ ಬೇರೆ ಯುವತಿಯೊಬ್ಬಳ ಜತೆ ಇರುವಂತೆ ಎಡಿಟ್ ಮಾಡಿ ವೈರಲ್ ಎಂದು ದೂರು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಮಾನಹಾನಿ ಮಾಡಿರುವುದಾಗಿ ದೂರು ದಾಖಲು ಮಾಡಿದ್ದಾರೆ.
ಯುವತಿಯೊಬ್ಬಳ ಜತೆಗಿರುವಂತೆ ಎಡಿಟ್ ಮಾಡಿದ್ದಾರೆ ಹಾಗೂ ಫೋಟೋವನ್ನು ದಿನೇಶ್ ಪುತ್ತೂರು ಎಂಬವರು ಪುತ್ತಿಲ ಪರಿವಾರ -1ಎಂಬ ವಾಟ್ಸಾಪ್ ಗ್ರೂಪಿನಲ್ಲಿ ವೈರಲ್ ಮಾಡಿ
ಮಾನಹಾನಿ ಮಾಡಿರುವುದಾಗಿ ದೂರು ನೀಡಿದ್ದಾರೆ.