ಇದೇ ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಚುನಾವಣೆಯ ರಣಕಹಳೆ ಮೊಳಗಿದ್ದು, ಈಗಾಗಲೇ ರಾಜಕೀಯ ನಾಯಕರು ಅಖಾಡಕ್ಕಿಳಿದು ಅಬ್ಬರ ಮತ ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ ಪಕ್ಷಗಳ, ಪಕ್ಷದ ನಾಯಕರ ನಡುವೆ ವಾಕ್ಸಮರವೂ ಸಹ ಮುಂದುವರಿದಿದೆ. ಬಿಜೆಪಿ ರಾಷ್ಟ್ರ ನಾಯಕರು ರಾಜ್ಯಾದ್ಯಂತ ಭರ್ಜರಿ ಮತ ಪ್ರಚಾರ ನಡೆಸುತ್ತಿದ್ದು, ನಿನ್ನೆ ಧಾರವಾಡದಲ್ಲಿ ಬೃಹತ್ ರ್ಯಾಲಿಯಲ್ಲಿ ಮಾತ್ನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಸ್ಲಿಂ ಮೀಸಲಾಯಿಯನ್ನ ರದ್ದುಗೊಳಿಸುವ ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು ಹಾಗೂ ಬಿಜೆಪಿ ತನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಅಂತ ಹೇಳಿಕೆ ನೀಡಿದ್ರು.

ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ, ಆದರೆ ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಕಾಂಗ್ರೆಸ್ ಮುಸ್ಲಿಂ ಮೀಸಲಾತಿಯನ್ನು ಮರಳಿ ತರುವುದಾಗಿ ಹೇಳಿಕೊಂಡಿದೆ. ನಾನು ಕಾಂಗ್ರೆಸ್ ನಾಯಕರಿಗೆ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ, ಮುಸ್ಲಿಮರಿಗೆ ಮೀಸಲಾತಿ ನೀಡಲು ನೀವು ಯಾರ ಕೋಟಾವನ್ನು ಕಡಿತಗೊಳಿಸುತ್ತೀರಿ? ಲಿಂಗಾಯತರು, ಒಕ್ಕಲಿಗರು ಅಥವಾ ಎಸ್‌ಸಿ, ಎಸ್‌ಟಿಗಳು. ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿ ಮರಳಲು ಬಿಜೆಪಿ ಬಿಡಲ್ಲ ಅಂತ ನಾನು ರಾಜ್ಯದ ಜನರಿಗೆ ಭರವಸೆ ನೀಡ್ತಿದ್ದೇನೆ ಅಂತ ಅಮಿತ್ ಶಾ ಹೇಳಿದ್ರು.






